ಸಂವಿಧಾನದ ನೆರಳಲ್ಲಿ | Samvidhanada Neralalli
ಸಾಮಾಜಿಕ, ರಾಜಕೀಯ ಬರಹಗಳು
ನಿರೂಪಣೆ: ಎಚ್.ಕೆ. ರಮೇಶ್
ಮಹದೇವಪ್ಪನವರೊಂದಿಗಿನ ನನ್ನ ನಲವತ್ತು ವರ್ಷಗಳ ಒಡನಾಟದಲ್ಲಿ ಸಂವಿಧಾನ, ಸಮಾಜ ಮತ್ತು ಪ್ರಜಾಪ್ರಭುತ್ವದ ಕುರಿತ ಅವರ ಯೋಚನಾ ಲಹರಿಯು ಬಹಳ ಪರಿಣಾಮಕಾರಿಯಾಗಿ ನನಗೆ ಕಂಡಿದ್ದು ಅಂತಹ ಆಲೋಚನೆಗಳ ಆಗರವಾಗಿರುವ ಈ ಪುಸ್ತಕವು ಸಾರ್ವಜನಿಕ ಜೀವನದಲ್ಲಿ ಇರುವ ಎಲ್ಲರಿಗೆ ಮತ್ತು ವಿಶೇಷವಾಗಿ ನಮ್ಮ ಯುವ ಸಮುದಾಯಕ್ಕೆ ಕೈಪಿಡಿಯಾಗಲಿ.
₹300.00 Original price was: ₹300.00.₹270.00Current price is: ₹270.00.
100 in stock
100 in stock
Description
ಪ್ರಸ್ತುತ ಕರ್ನಾಟಕ ರಾಜ್ಯ ಮಾತ್ರವಲ್ಲದೆ ಇಡೀ ದೇಶದಲ್ಲಿ ಕೋಮುಶಕ್ತಿಗಳು ಪ್ರಜಾಪ್ರಭುತ್ವದ ಸತ್ವವನ್ನು ತಮ್ಮ ವಿಷದ ಆಲೋಚನೆಗಳ ಮೂಲಕ ಕೊಲ್ಲುವ ಕೆಲಸ ಮಾಡುತ್ತಿವೆ. ಡಾ ಬಿ ಆರ್ ಅಂಬೇಡ್ಕರ್ ಆಶಯದಂತೆ ವೈಚಾರಿಕತೆ ಮತ್ತು ವೈಜ್ಞಾನಿಕವಾಗಿ ಬೆಳೆಯಬೇಕಾದ ದೇಶವನ್ನು ಇವರು ಮೌಡ್ಯದ ಕಡೆ ಕರೆದೊಯ್ಯುತ್ತಿದ್ದು, ಜನಪರತೆ ಮತ್ತು ಅಭಿವೃದ್ಧಿಗೆ ಅಗತ್ಯವಿರುವ ಜ್ಞಾನದ ವ್ಯವಸ್ಥೆಯನ್ನೇ ಹಾಳು ಮಾಡುತ್ತಿದ್ದಾರೆ.
ಸರ್ಕಾರದ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷಗಳನ್ನು ನಾಶ ಮಾಡಲು ಹೊರಟಿರುವ ಬಿಜೆಪಿಗರು ಅವರ ವಿರುದ್ಧ ದನಿ ಎತ್ತುವ ಎಲ್ಲರ ಚಾರಿತ್ರ್ಯಹರಣ ಮಾಡುವ ಕೆಲಸದಲ್ಲಿ ತಲ್ಲೀನರಾಗಿದ್ದು ಅವರಿಗೆ ಪ್ರಜಾಪ್ರಭುತ್ವದ ಕುರಿತ ಕನಿಷ್ಠ ಜ್ಞಾನವೇ ಇಲ್ಲದ ಅಪಾಯಕಾರಿ ಪರಿಸ್ಥಿತಿ ಉಂಟಾಗಿದೆ.
ಇಂತಹ ಸಂದರ್ಭಗಳಲ್ಲಿ ವಿಪಕ್ಷಗಳು ಹೇಗೆ ಸಂವಿಧಾನದ ಆಶಯಗಳ ಪರಿಮಿತಿಯಲ್ಲಿ ಪ್ರತಿರೋಧ ವ್ಯಕ್ತಪಡಿಸಬಹುದು ಎಂಬ ಅನುಕರಣಾ ಮಾದರಿಯನ್ನು ತಮ್ಮ ಬರಹಗಳ ಮೂಲಕ ನೀಡಿರುವ ಈ ಪುಸ್ತಕದ ವಿಚಾರಗಳನ್ನು ಕಾಂಗ್ರೆಸ್ ಆದಿಯಾಗಿ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟ ಎಲ್ಲ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಓದಿ ತಿಳಿದುಕೊಳ್ಳಬೇಕು.
ಮಹದೇವಪ್ಪನವರೊಂದಿಗಿನ ನನ್ನ ನಲವತ್ತು ವರ್ಷಗಳ ಒಡನಾಟದಲ್ಲಿ ಸಂವಿಧಾನ, ಸಮಾಜ ಮತ್ತು ಪ್ರಜಾಪ್ರಭುತ್ವದ ಕುರಿತ ಅವರ ಯೋಚನಾ ಲಹರಿಯು ಬಹಳ ಪರಿಣಾಮಕಾರಿಯಾಗಿ ನನಗೆ ಕಂಡಿದ್ದು ಅಂತಹ ಆಲೋಚನೆಗಳ ಆಗರವಾಗಿರುವ ಈ ಪುಸ್ತಕವು ಸಾರ್ವಜನಿಕ ಜೀವನದಲ್ಲಿ ಇರುವ ಎಲ್ಲರಿಗೆ ಮತ್ತು ವಿಶೇಷವಾಗಿ ನಮ್ಮ ಯುವ ಸಮುದಾಯಕ್ಕೆ ಕೈಪಿಡಿಯಾಗಲಿ.
- ಶ್ರೀ ಸಿದ್ದರಾಮಯ್ಯ
ಮಾನ್ಯ ಮುಖ್ಯಮಂತ್ರಿಗಳು,

Political | ರಾಜಕೀಯ

Reviews
There are no reviews yet.