ಹೊಂಬಳ್ಳಿ | Homballi

Publisher : Amulya Pustaka
ISBN : 978-81-969505-5-2
Publication Date : 2024
Edition : 1st
No of Pages : 116

ಇಲ್ಲಿ ಲೇಖಕಿ ತಮ್ಮ ಬಾಲ್ಯ, ಹುಟ್ಟಿದೂರಿನ ಬಗ್ಗೆ ಹೇಳುವಾಗಲೆಲ್ಲ ಅಮ್ಮ, ಅವರ ತವರು ನೆನಪಾಯ್ತು. ತುಂಬಾ ಚಿಂತನೆಗೆ ಹಚ್ಚಿದ್ದು ‘ಹೆಣ್ಣು ಮಕ್ಕಳೆಲ್ಲ ಆತ್ಮ ಕತೆ ಬರೆಯುವಂತಾದರೆ’ ಮತ್ತು ‘ನಮ್ಮ ಬದುಕಿಗೆ ನಾವೇ ನಾಯಕಿಯರಲ್ಲವೇ’ ಎಂಬ ಲೇಖನ.. ನಮ್ಮಲ್ಲಿ ಅದೆಷ್ಟು ಕತೆಗಳಿರುತ್ತವೆ.. ಕೆಲವೊಂದನ್ನ ಮಾತ್ರ ನಮಗೆ ಬರಹದ ವ್ಯಕ್ತ ಪಡಿಸಲು ಸಾಧ್ಯವಾಗುವುದು. ಇನ್ನುಳಿದವು ‘ನೆನಪು ‘ ಆಗಿ ಉಳಿದು ಬಿಡುತ್ತವೆ, ಇಲ್ಲವೇ ಕಣ್ಣೀರಾಗಿ ಹರಿದು ಹೋಗಿರುತ್ತವೆ.

Original price was: ₹150.00.Current price is: ₹135.00.

100 in stock

100 in stock

Description

‘ಹೊಂಬಳ್ಳಿ’ ಹಗುರ ಪ್ರಬಂಧ ಅಂತ ಹೇಳಿದರೂ ಗಂಭೀರ ಮಾತುಗಳು ಇಲ್ಲಿವೆ. ನನಗೆ ಮಾತುಗಳು ಇಷ್ಟ.. ಆದ್ರೆ ಕಂಫರ್ಟ್ ಅನಿಸಬೇಕು.. ಹಾಗೆ ಅನಿಸದೇ ಇದ್ದರೆ ಅವರಲ್ಲಿ ಮಾತನಾಡುವುದೇ ಇಲ್ಲ.. ಈ ಪುಸ್ತಕದಲ್ಲಿರುವ ಲೇಖನಗಳನ್ನು ಓದುವಾಗ ನಾನು ನನ್ನ ಅಮ್ಮನ ಜೊತೆಗೆ, ಗೆಳತಿ ಜೊತೆ ಮಾತನಾಡುತ್ತಿದ್ದೇನೆ ಎಂಬ ಆಪ್ತ ಭಾವ. ನನ್ನ ಅಮ್ಮ ಅವರ ಬಾಲ್ಯದ ಕತೆಗಳನ್ನು ಜಾಸ್ತಿ ಹಂಚಿದ್ದು ನನ್ನಲ್ಲೇ.. ನಾನು ನೋಡದ ಊರುಗಳನ್ನು ಅಮ್ಮನ ಮಾತಿನಲ್ಲೇ ‘ಕಂಡಿದ್ದೆ ‘. ಇಲ್ಲಿ ಲೇಖಕಿ ತಮ್ಮ ಬಾಲ್ಯ, ಹುಟ್ಟಿದೂರಿನ ಬಗ್ಗೆ ಹೇಳುವಾಗಲೆಲ್ಲ ಅಮ್ಮ, ಅವರ ತವರು ನೆನಪಾಯ್ತು. ತುಂಬಾ ಚಿಂತನೆಗೆ ಹಚ್ಚಿದ್ದು ‘ಹೆಣ್ಣು ಮಕ್ಕಳೆಲ್ಲ ಆತ್ಮ ಕತೆ ಬರೆಯುವಂತಾದರೆ’ ಮತ್ತು ‘ನಮ್ಮ ಬದುಕಿಗೆ ನಾವೇ ನಾಯಕಿಯರಲ್ಲವೇ’ ಎಂಬ ಲೇಖನ.. ನಮ್ಮಲ್ಲಿ ಅದೆಷ್ಟು ಕತೆಗಳಿರುತ್ತವೆ.. ಕೆಲವೊಂದನ್ನ ಮಾತ್ರ ನಮಗೆ ಬರಹದ ವ್ಯಕ್ತ ಪಡಿಸಲು ಸಾಧ್ಯವಾಗುವುದು. ಇನ್ನುಳಿದವು ‘ನೆನಪು ‘ ಆಗಿ ಉಳಿದು ಬಿಡುತ್ತವೆ, ಇಲ್ಲವೇ ಕಣ್ಣೀರಾಗಿ ಹರಿದು ಹೋಗಿರುತ್ತವೆ.
‘ತೆಂಗು ಗರಿಗಳ ನಡುವೆ ತುಂಬು ಚಂದಿರ ಬಂದು ‘ ಹೃದಯಕ್ಕೆ ಹತ್ತಿರವಾದುದು. ಯಾಕೆಂದರೆ ನಮ್ಮನೆಯಲ್ಲಿ ಕಷ್ಟ ಬಂದಾಗ ತೆಂಗಿನ ಗರಿ ಹೆಣೆದು ಮಾರಿದ್ದೆವು. ಎರಡು ವಿಧದಲ್ಲಿ ತೆಂಗಿನ ಗರಿ ಹೆಣೆಯುವುದನ್ನು ಅಮ್ಮ ಕಲಿಸಿದ್ದರು.
‘ಭಾವ ಸ್ಮೃತಿ ‘ ಲೇಖನದಲ್ಲಿ ಹೇಳುವಂತೆ ನಾನು ಕೂಡಾ ಮೊಬೈಲ್ ಫೋನ್ ನಲ್ಲಿ ಕ್ಲಿಕ್ ಮಾಡಿದ ಫೋಟೋ ಗಳನ್ನು ಡಿಲೀಟ್ ಮಾಡುವುದಕ್ಕೆ ಹಿಂದೇಟು ಹಾಕುತ್ತೇನೆ.. ಒಂದು ಫೋಟೋದಲ್ಲಿ ಅದೆಷ್ಟು ನೆನಪು, ಖುಷಿಯ ಕ್ಷಣಗಳು ಸೆರೆಯಾಗಿರುತ್ತವೆ.
ಹೀಗೆ ಹಲವು ನೆನಪು, ಬಾಂಧವ್ಯ,ಪ್ರೀತಿಯ ಮಾತುಗಳನ್ನು ಹಬ್ಬಿ ಆವರಿಸಿದ ಬಳ್ಳಿ Metikurke Ramaswamy Kamala ಅವರ ಈ ‘ಹೊಂಬಳ್ಳಿ ‘❤️
ಇದು ಓದಿನ ಖುಷಿ 🫰🏽
-ರಶ್ಮಿ ತೆಂಡೂಲ್ಕರ್

Specification

Writer Information

Weight0.20 kg
AuthorsM R Kamala

Customer Reviews

Reviews

There are no reviews yet.

Be the first to review “ಹೊಂಬಳ್ಳಿ | Homballi”

Your email address will not be published. Required fields are marked *