ಕೀಟಲೆಯ ದಿನಗಳು | Keetaleya Dinagalu
ಕೀಟಲೆಯ ದಿನಗಳು | Keetaleya Dinagalu Original price was: ₹450.00.Current price is: ₹405.00.
Back to products
ಚೋದ್ಯ | Chodya
ಚೋದ್ಯ | Chodya Original price was: ₹185.00.Current price is: ₹175.00.

ಬಯಲ ಕಣಗಿಲೆ | Bayala Kanagile

Publisher : Amulya Pustaka
ISBN : 978-81-964691-8-4
Publication Date : 2024
Edition : 1
No of Pages : 232
ಬದುಕಿಗೆ ಬೇಕಾದ ಒಳ ಕಸುವು ಅಥವ ಅಂತಃಸತ್ವ ಬರುವುದು ಎಲ್ಲಿಂದ? ಬಹುಶಃ ಅನುಭವವು ಒದಗಿಸುವ ಅರಿವಿನಿಂದ ಮತ್ತು ತಿಳಿವಳಿಕೆ ನೀಡುವ ಪಕ್ವತೆಯಿಂದ. ಆದರೆ, ಅನುಭವಕ್ಕೆ ಒಳಗಾದ ಎಲ್ಲರೂ ವಿವೇಕಶೀಲರಾಗಿ ಬದಲಾಗುತ್ತಾರೆ ಹೆಚ್ಚು ಋಜುತ್ವದಿಂದ ವರ್ತಿಸುತ್ತಾರೆ ಎನ್ನುವ ಖಾತರಿಯೇನೂ ಇರುವುದಿಲ್ಲ.
ಇಂತಹ ಸಂವೇದನಾಶೀಲ ಸೂಕ್ಷ್ಮ ವಿಷಯವನ್ನು ಸಾಹಿತ್ಯವಲ್ಲದೆ ಬೇರಾವುದು ತಿಳಿಸಿಕೊಡಲು ಸಾಧ್ಯ? ಈ ಪುಸ್ತಕದಲ್ಲಿ ಆ ಬಗೆಯ ಬರಹಗಳಿವೆ. ಕ್ರಿಯಾಶೀಲತೆಯ ಸುತ್ತಮುತ್ತ ಸಣ್ಣಸಣ್ಣ ಟಿಪ್ಪಣಿಗಳಿವೆ. ಜತೆಗೆ, ನನಗೆ ತುಂಬ ಇಷ್ಟವಾದ ಕೆಲವು ಬರಹಗಳ ಅನುವಾದವಿದೆ.
ಉತ್ಸಾಹದಿಂದ ಸಾಹಿತ್ಯದ ಓದಿನಲ್ಲಿ ತೊಡಗಿಕೊಳ್ಳುವ ವಾಚಕರು ಈ ಬರಹಗಳನ್ನು ಆಸ್ವಾದಿಸಬಲ್ಲರು.

Original price was: ₹250.00.Current price is: ₹225.00.

100 in stock

100 in stock

Description

ಕೇಶವ ಮಳಗಿ ಸರ್ ಅವರ ‘ಬಯಲ ಕಣಗಿಲೆ’ ಪುಸ್ತಕ ಓದುತ್ತಾ ಹೋದಂತೆ ನನ್ನೊಳಗೆ ಸಾಹಿತ್ಯದ ಬಹಳಷ್ಟು ಲೇಖಕರ ವಿಚಾರಗಳು, ಅವರ ದೃಷ್ಟಿಕೋನ ಅದರಲ್ಲೂ ಕೆಲವು ಪಾಶ್ಚಾತ್ಯ ಲೇಖಕರ ಕತೆಗಳು ತುಂಬ ಇಷ್ಟವಾದವು.
ಈ ಪುಸ್ತಕದ ಮೊದಲ‌ ಲೇಖನವೇ ಕುವೆಂಪು ಅವರ ಕಾನೂರು ಸುಬ್ಬಮ್ಮ ಹೆಗ್ಗಡಿತಿ ಕಾದಂಬರಿ ಕುರಿತ “ಹೂವಯ್ಯನ ಗೆಳೆಯರನು ಹುಡುಕಿ” ಬರಹ ಮತ್ತೊಮ್ಮೆ ಆ ಕಾದಂಬರಿಯನ್ನು ಓದುವಂತೆ ಪ್ರೇರೇಪಿಸಿತು. ಈ ಪುಸ್ತಕದಲ್ಲಿ ಇನ್ನೂ ಎಷ್ಟೋಂದು ಚಿಂತನೆ ಹಚ್ಚುವ ಬರಹಗಳಿವೆ ಎಂದರೆ ಶಂಕರ ಮೊಕಾಶಿ ಪುಣೇಕರ, ದೇವನೂರು ಮಹಾದೇವ ಅವರು ಬರುತ್ತಾರೆ ಜೊತೆಗೆ ಪಾಶ್ಚಾತ್ಯ ದೇಶದ ಬಹುಪಾಲು ಲೇಖಕರು ಅವರ ಬರಹಗಳ ಬಗ್ಗೆ ಅದರಲ್ಲೂ ಫ್ಯುದೋರ್ ದಸ್ತಯೇವಸ್ಕಿ, ಲೇವ್ ಟಾಲ್ಸ್ಟಾಯ್ ಅವರ “ಮೂವರು ವಿರಾಗಿಗಳು ಹಾಗೂ ಕುಡಿಕೆ ಅಲ್ಯೋಶೆ ” ಕತೆಗಳು, ಸಿಂಗರ್ ಬರೆದ “ಮೂರ್ಖನ ಸ್ವರ್ಗ” ಓದಲೇಬೇಕಾದವು. ಸಾಹಿತ್ಯಕ್ಕಾಗಿ ನೋಬೆಲ್ ಪ್ರಶಸ್ತಿ ಪಡೆದ ಅಬ್ದುಲ್ ರಜಾಕ್ ಗುರ್ನಾರ ಲೇಖನ‌ ತುಂಬಾ ಇಷ್ಟವಾಯಿತು. ಎರ್ನೆಸ್ಟ್ ಹೆಮಿಂಗ್ಬೇಯ “ಒಳ್ಳೆಯ ಬರಹಗಾರನ ಗುಣ ಲಕ್ಷಣಗಳು” ಅಲ್ಬೆ ಕಮೂ, ಸಿ.ಎಸ್ ಲೂಯಿಸ್, ಬರಹಗಾರ,”ಓದು ಮತ್ತು ಸ್ವಾತಂತ್ರ್ಯ” ಲೇಖನದ‌ ಮೂಲಕ ನಾವು ಜಾನ್ ಪಾಲ್ ಸಾರ್ತ್ರೆಯ ಬಗ್ಗೆನೂ ತಿಳಿದುಕೊಳ್ಳಬಹುದು. “ಗಮ್ಯವಿರದ ನಿರಂತರ ಯಾಂತ್ರಿಕ” ಮ್ಯಾಕ್ಸಿಂ ಗಾರ್ಕಿ ಮತ್ತು ಟಾಲ್ಸ್ಟಾಯ್ ಕುರಿತು ಇರುವ ಲೇಖನ‌ (ಪುಟ ಸಂಖ್ಯೆ 80-83) ಇದರ‌ ಜೊತೆಗೆ ಆಂಟನ್ ಚೆಕಾಫ್ ಮತ್ತು ಟಾಲ್ಸ್ಟಾಯ್ ಬಗ್ಗೆ ಇರುವ (ಪುಟ ಸಂಖ್ಯೆ84-85) ಓದಲೇಬೇಕಾದ ಬರಹ. “ಹೆಂಗಳೆಯರ ಒಡಪಿನ ಲೋಕ ಮೊದಲ ಪ್ರೇಮದ ಬಿಸಿ” (ಪುಟ ಸಂಖ್ಯೆ 176-177) ಗೇಬ್ರಿಯಲ್ ಗಾರ್ಸಿಯಾ ಮಾರ್ಕೇಸ್ ಕುರಿತಾದ ಮೂರು ಪುಟದ ಈ ಒಂದು ಲೇಖನ ಒಂದೊಳ್ಳೆ ಕಾದಂಬರಿ,ಕತೆ ಓದಿದ ಅನುಭವ ಕೊಡುತ್ತದೆ. ನನ್ನಂತಹ ತರುಣ ಲೇಖಕರು ಓದಲೇಬೇಕಾದ ಬಹುಮುಖ್ಯ ಕೃತಿ ಈ ಬಯಲ ಕಣಗಿಲೆ ಪುಸ್ತಕ‌ ಎಂದರೆ ತಪ್ಪಾಗಲಾರದು.
-ಮುದಿರಾಜ್ ಬಾಣದ್

Specification

Writer Information

Weight0.3 kg
AuthorsKeshava Malagi

Customer Reviews

Reviews

There are no reviews yet.

Be the first to review “ಬಯಲ ಕಣಗಿಲೆ | Bayala Kanagile”

Your email address will not be published. Required fields are marked *