ನರ ವಾನರ | Naravanara

Author : K P Purnachandra Tejasvi | ಕೆ ಪಿ ಪೂರ್ಣಚಂದ್ರ ತೇಜಸ್ವಿನಿ
Publisher : Pustaka Prakashana
Publication Date : 2024
Edition : 2nd
No of Pages : 118

Original price was: ₹180.00.Current price is: ₹162.00.

25 in stock

25 in stock

Description

ನಾಯಕತ್ವಕ್ಕೆ ಪೈಪೋಟಿ, ಕುರ್ಚಿಗಾಗಿ ಪಕ್ಷಾಂತರ, ಭಿನ್ನಮತ, ಚಮಚಾಗಿರಿ, ಕದ್ದಾಲಿಕೆ ಈ ಎಲ್ಲಾ ರಾಜಕೀಯ ಮೇಲಾಟಗಳು ಮನುಷ್ಯರಲ್ಲಷ್ಟೇ ಅಲ್ಲಾ, ಚಿಂಪಾಂಜಿಗಳ ಜಗತ್ತಿನಲ್ಲೂ ಹಾಸುಹೊಕ್ಕಾಗಿವೆ ಎಂಬುದನ್ನು ಮನೋಜ್ಞವಾಗಿ ತಿಳಿಸುವ ಕೃತಿ ಇದು.

ನಮ್ಮ ನಾಯಕರುಗಳಿಗೇ ಮಂಗನ ವೇಷ ತೊಡಿಸಿ ವನ್ಯಲೋಕದ ಈ ಮಜೇದಾ‌ರ್ ಕಥಾನಕವನ್ನು ರಂಗಸ್ಥಳಕ್ಕೆ ತರಬಹುದೇನೋ?!
– ನಾಗೇಶ ಹೆಗ್ಡೆ, ಪರಿಸರ ಚಿಂತಕ, ಅಂಕಣಕಾರ

ಅಲ್ಲೊಂದು ಕೊಲೆ! ಕೊಲೆಗಾರ ಯಾರೆಂದು ಬಿಚ್ಚಿಕೊಳ್ಳುತ್ತಿದ್ದಂತೆ ಅವನದೇ ಕೊಲೆಯಾಗುತ್ತದೆ!!

ಬುಲೆಟ್ ಟ್ರೈನ್ ವೇಗದಲ್ಲಿ ಓದಿಸಿಕೊಂಡು ಹೋಗುವ ಈ ಕೃತಿ ರೋಚಕ ಪತ್ತೇದಾರಿ ಕತೆಯಂತೆ ಕಂಡರೂ ಪ್ರಮುಖ ಸಂಶೋಧನೆಗಳನ್ನು ಒಳಗೊಂಡ ಪಕ್ಕಾ ವೈಜ್ಞಾನಿಕ ಕೃತಿ. ವಾನರಗಳ ಒಳಗಿನ ನರ ಹಾಗೂ ನಮ್ಮೊಳಗೇ ಹುದುಗಿರುವ ವಾನರ ಗುಣಗಳು, ಜೀವ ವಿಕಾಸದ ನಿರಂತರತೆಯನ್ನು ಸಾಬೀತುಪಡಿಸುತ್ತವೆ. ಈ ಸತ್ಯವನ್ನು ಪರಿಚಯಿಸುವ ಅನನ್ಯ ಹಾಗೂ ಪ್ರಚಂಡ ಪ್ರಯತ್ನ ಈ ಕೃತಿ.

ಕಥಾ ಶೈಲಿಯಂತೂ ಕನ್ನಡ ಸಾಹಿತ್ಯ ಲೋಕಕ್ಕೆ ಹೊಸತು ಎಂದರೂ ಸರಿಯೇ.

– ಡಾ. ಕೆ.ಎನ್.ಗಣೇಶಯ್ಯ, ವಿಜ್ಞಾನಿ ಹಾಗೂ ಪ್ರಸಿದ್ಧ ಲೇಖಕ.

ಇದೊಂದು ಅತ್ಯಂತ ಕತೂಹಲಕಾರಿ ಕೃತಿ. ಓದಿದ ನಂತರ ನಮ್ಮ ರಾಜಕಾರಣಿಗಳ ನಡತೆ ಅನಿರೀಕ್ಷಿತವೇನಲ್ಲಾ ಎನಿಸುತ್ತದೆ!
– ಡಾ. ವಿ.ವಿ.ಬೆಳವಾಡಿ, ಖ್ಯಾತ ಕೀಟವಿಜ್ಞಾನಿ, ಲೇಖಕ

Customer Reviews

Reviews

There are no reviews yet.

Be the first to review “ನರ ವಾನರ | Naravanara”

Your email address will not be published. Required fields are marked *