ಜೀವರತಿ | Jeevarathi
ಜೀವರತಿ | Jeevarathi Original price was: ₹450.00.Current price is: ₹405.00.
Back to products

ಎಸ್.ಎಲ್.‌ ಭೈರಪ್ಪ: ಓದು-ಓದುಗರು | S L Bhyrappa: Odu-Odugaru

Publisher : Amulya Pustaka
ISBN : 978-81-999361-2-6
Publication Date : 2026
Edition : 1st
No of Pages : 208

ಒಬ್ಬ ಲೇಖಕನನ್ನು ನಿಜವಾಗಿ ಗೌರವಿಸುವುದೆಂದರೆ ಅವನ ಕೃತಿಗಳನ್ನು ವಸ್ತುನಿಷ್ಠವಾಗಿ ಪ್ರವೇಶಿಸಿ ಮರುಮೌಲ್ಯಮಾಪನಕ್ಕೆ ಒಳಪಡಿಸುವುದೆ ಆಗಿದೆ. ಅಂತಹ ಒಂದು ಆರೋಗ್ಯಕರ ಸಂವಾದಕ್ಕೆ ಈ ಸಂಪಾದಿತ ಕೃತಿ ಅವಕಾಶ ಮಾಡಿಕೊಡುತ್ತದೆ ಎಂದು ಭಾವಿಸುತ್ತೇನೆ.

Original price was: ₹275.00.Current price is: ₹265.00.

99 in stock

99 in stock

Description

ಈ ಪುಸ್ತಕವು ಹಲವು ಲೇಖಕರು ಸೇರಿ ಬರೆದಿರುವಂಥದ್ದು, ಬರೆದಿರುವವರೆಲ್ಲ ಸಾಹಿತಿಗಳಲ್ಲ. ಪುಸ್ತಕವು ಸಾಹಿತ್ಯ ವಿಮರ್ಶೆಯ ಪುಸ್ತಕವಲ್ಲ. ಒಬ್ಬ ಲೇಖಕನನ್ನು ಬೇರೆ ಬೇರೆ ತಲೆಮಾರುಗಳ, ಭಿನ್ನ ಹಿನ್ನೆಲೆಗಳ ಓದುಗರು ಹೇಗೆ ಓದುತ್ತಾರೆ, ಓದುವುದಿಲ್ಲ, ಯಾಕೆ ಓದುತ್ತಾರೆ ಎಂಬುದನ್ನು ತಿಳಿಯುವ ಒಂದು ಪ್ರಯತ್ನ, ಪ್ರಯೋಗ, ಸಮುದಾಯದ ಓದಿನ ಹಿಂದಿರುವ ಅಪೇಕ್ಷೆಗಳು ಮತ್ತು ಓದುಗ ಸಮುದಾಯದ ಮೇಲೆ ಹೇರುವ ನಾನಾ ರೀತಿಯ ಒತ್ತಾಯಗಳ ನಡುವೆ ಮೂಡುವ ಕರ್ಷಣದ ಸ್ವರೂಪವನ್ನು ತಿಳಿದುಕೊಂಡು ತಿಳಿಸುವ ಪ್ರಯತ್ನ. ಹತ್ತು ಹಲವು ಲೇಖಕರು, ಓದುಗರ ವಿಶಾಲ ವರ್ಗ ಇವರನ್ನೆಲ್ಲ ಒಳಗೊಂಡ ಸಮೀಕ್ಷೆ, ಸಂಶೋಧನೆ, ಅಧ್ಯಯನ ಇನ್ನೂ ಹೆಚ್ಚು ಅಧಿಕೃತವಾಗಿರುತ್ತದೆ, ಸಮಗ್ರವಾಗಿರು ಇದೆ ನಿಜ. ಆದರೆ ವೈಯಕ್ತಿಕ ನೆಲೆಯಲ್ಲಿ ಇಂತಹ ಪ್ರಯತ್ನಗಳು ಕಷ್ಟ. ಈ ಪುಸ್ತಕವು ಬೇರೆ ಲೇಖಕರು, ಬೇರೆ ಕಾಲಮಾನ, ಸಾಂಸ್ಕೃತಿಕ ಸಂದರ್ಭಗಳಿಗೂ ವಿಸ್ತರಿಸಲಿ ಅನ್ನುವುದು ಕೂಡ ಈ ಕೃತಿಯನ್ನು ಪ್ರಕಟಿಸುವಲ್ಲಿ ಇರುವ ಒಳ ಆಸೆಗಳಲ್ಲಿ ಒಂದು.

***************

ಪ್ರತಿ ತಲೆಮಾರು ಕೂಡ ಕೆಲವು ಪುಸ್ತಕಗಳನ್ನು/ಪಠ್ಯಗಳನ್ನು ಮರುಓದುತ್ತದೆ, ಮತ್ತೆ ಮತ್ತೆ ಮರುಓದಿಗೆ ಗುರಿಪಡಿಸುತ್ತಲೇ ಇರುತ್ತದೆ. ಈ ಮರುಓದಿನ ಹಿಂದಿರುವ ಪ್ರೇರಣೆಗಳೇನು, ಮರುಓದಿನಿಂದ ಓದಿಗೆ, ಸಮಾಜಕ್ಕೆ ಹೇಗೆ ಅನುಕೂಲವಾಗುತ್ತದೆ ಎಂದು ತಿಳಿಯುವ-ತಿಳಿಸುವ ಸಮೂಹ ಶೋಧನೆಯಿದು. ಆದರೆ ಮರುಓದಿನ ವಿದ್ಯಮಾನ, ಅದರ ಪ್ರಭಾವ, ವ್ಯಾಪ್ತಿಯನ್ನು ಗಮನಿಸುವಾಗ ನಾನು ಸಾಹಿತ್ಯ-ಸಂಸ್ಕೃತಿ ವಲಯವು ಮರುಓದಿಗೆ ಗುರಿಪಡಿಸುವ ಪಠ್ಯಗಳನ್ನು ಮಾತ್ರ ಗಮನಿಸುವುದಿಲ್ಲ, ಆಡಳಿತಗಾರರು, ವಕೀಲರು, ಕೃಷಿಕರು, ಕಾರ್ಮಿಕರು, ನ್ಯಾಯಾಧೀಶರು, ವಿಜ್ಞಾನಿಗಳು, ತಂತ್ರಜ್ಞರು, ಸಿನೆಮಾ, ನಾಟಕ ಪರಿಣತರು, ಸಂಗೀತಗಾರರು, ಸನ್ಯಾಸಿಗಳು, ಜ್ಯೋತಿಷಿಗಳು, ಸಾಮಾಜಿಕ ಕಾರ್ಯಕರ್ತರು, ಸೇನೆಯವರು, ಅನಿವಾಸಿ ಭಾರತೀಯರು, ಕನ್ನಡಿಗರು ಮರುಓದುವ ರೀತಿ, ಮರುಓದುವ ಪಠ್ಯಗಳನ್ನು ಕೂಡ ಗಮನಿಸಬೇಕೆಂದಿದ್ದೇನೆ. ಈ ಎಲ್ಲ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವವರನ್ನು ಸಂದರ್ಶಿಸಿ, ಪ್ರಶ್ನೆಗಳನ್ನು ಕೇಳಿ, ಉತ್ತರ ಪಡೆದು, ಇದಕ್ಕೆ ಪೂರಕವಾಗಿ ಮರುಓದಿನ ವಿದ್ಯಮಾನವನ್ನು ಕುರಿತು ಈಗಾಗಲೇ ನಡೆದಿರುವ ಚರ್ಚೆಗಳನ್ನು ಪರಿಶೀಲಿಸಿ, ಒಂದು ವಿಸ್ತ್ರತ ಲೇಖನ ಬರೆದು ಸೇರಿಸಲಾಗುವುದು. ಈ ಲೇಖನದ ಬಹುಭಾಗವನ್ನು ಈಗಾಗಲೇ ಬರೆಯಲಾಗಿದೆ. ಆದರೆ ಈ ಲೇಖನವೊಂದನ್ನೇ ಪ್ರತ್ಯೇಕವಾಗಿ ಪ್ರಕಟಿಸಲು ಸಾಧ್ಯವಾಗುವುದಿಲ್ಲ. ಸಂದರ್ಶನಗಳು, ಕ್ಷೇತ್ರಕಾರ್ಯವನ್ನು ಒಬ್ಬ ವ್ಯಕ್ತಿಯಿಂದ ಮಾಡಲು ಸಾಧ್ಯವಾಗುವುದಿಲ್ಲ. ಸಮಾನ ಆಸಕ್ತಿಯಿರುವ ಸಂಸ್ಥೆಗಳು, ಸ್ನೇಹಿತರಿಂದ ನೆರವನ್ನು ಕೋರುತ್ತೇನೆ. ಬೇರೆ ಬೇರೆ ವಲಯಗಳಲ್ಲಿರುವವರನ್ನು ಸಂಪರ್ಕಿಸಿ, ಸಂದರ್ಶಿಸಲು ವಿಭಾಗೀಯ ಸಂಪಾದಕರು ಬೇಕು. ಸಂಪನ್ಮೂಲಗಳ ಸಹಾಯಕ್ಕೂ ಸ್ವಾಗತವಿದೆ. ಡಿಸೆಂಬರ್ ೨೦೨೪, ಫೆಬ್ರವರಿ ೨೦೨೫ರ ಕಾಲಾವಧಿಯಲ್ಲಿ ನಮ್ಮೊಡನೆ ಇರಬೇಕಾಗಿ ಬಂದ ನನ್ನ ಮಗ ಚಂದನ್ ಕ್ಷೇತ್ರಕಾರ್ಯ, ಸಂದರ್ಶನವನ್ನು ಮಾಡಿ ಮುಗಿಸಲು ಒಪ್ಪಿಕೊಂಡ. ಆದರೆ ಅವನು ಇಡೀ ರಾತ್ರಿ ಅಮೆರಿಕದ ಕಂಪನಿಗೆ ಕೆಲಸ ಮಾಡಬೇಕಾಗಿತ್ತು, ಸೊಸೆ ಹಗಲು ಹೊತ್ತಿನಲ್ಲಿ ಕೆಲಸ ಮಾಡಬೇಕಾಗಿತ್ತು. ಮನೆಯಲ್ಲಿ ಎರಡೂವರೆ ವರ್ಷದ ಮಗು. ಹಾಗಾಗಿ ನಮ್ಮ ಆಸೆ ಎಷ್ಟೇ ಇದ್ದರೂ ಯೋಜನೆ ಕಾರ್ಯಗತವಾಗಲಿಲ್ಲ.

  • ಸಂಪಾದಕರು

Specification

Writer Information

Weight0.3 kg
AuthorsK Satyanarayana

Customer Reviews

Reviews

There are no reviews yet.

Be the first to review “ಎಸ್.ಎಲ್.‌ ಭೈರಪ್ಪ: ಓದು-ಓದುಗರು | S L Bhyrappa: Odu-Odugaru”

Your email address will not be published. Required fields are marked *