ಅಂಬಿಕಾತನಯದತ್ತನ ಹಾಡ ಬೆಳುದಿಂಗಳ ನೋಡs...| Ambikatanayadattana Haada Beludingala Noda
₹150.00 Original price was: ₹150.00.₹135.00Current price is: ₹135.00.
ಆಧುನಿಕ ಮನೋವಿಜ್ಞಾನದ ಪ್ರವರ್ತಕರು | Adhunika manovijnanada Pravartakaru
Publisher :
Amulya Pustaka
ISBN :
978-81-969505-1-4
Publication Date :
2024
Edition :
1st
No of Pages :
228
ಈ ವಿಶಿಷ್ಟ ಪುಸ್ತಕವನ್ನು ಓದುವಾಗ ಪಾಕಿಸ್ತಾನ ಮೂಲದ ನಾದಿಯಾ, ಭಾರತೀಯ ಮೂಲದ ವಿ. ಎಸ್. ರಾಮಚಂದ್ರನ್, ಸುಪರ್ಣಾ ರಾಜಾರಾಮ್ ಹೊರತು ಪಡಿಸಿದರೆ ಉಳಿದವರೆಲ್ಲ ಪಾಶ್ಚಾತ್ಯರೇ ಎಂಬುದು ಕುತೂಹಲದ ಸಂಗತಿ. ಇಬ್ಬರು ಭಾರತೀಯರಲ್ಲಿ ಒಬ್ಬರಾದ ಸುಪರ್ಣಾ ರಾಜಾರಾಮ್ ಕರ್ನಾಟಕದವರೆಂಬುದನ್ನು ನಾವಿಲ್ಲಿ ಗಮನಿಸಬೇಕು.
ಜಗತ್ತಿನ ಜ್ಞಾನ ಕನ್ನಡ ಮನಸ್ಸುಗಳಿಗೆ ಕನ್ನಡದಲ್ಲಿಯೇ ಸಿಗಬೇಕೆಂಬ ಹಿನ್ನೆಲೆಯಲ್ಲಿ ಬಸವಣ್ಣನವರ ಈ ಪ್ರಯತ್ನ ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಮಹತ್ವದ್ದು. ಇಂತಹ ಪುಸ್ತಕವನ್ನು ಪ್ರಕಟಿಸಿದ ‘ಅಮೂಲ್ಯ ಪುಸ್ತಕ’ಕ್ಕೆಕನ್ನಡಿಗರು ಕೃತಜ್ಞರಾಗಿದ್ದಾರೆ.
-ನರಹಳ್ಳಿ ಬಾಲಸುಬ್ರಹ್ಮಣ್ಯ
₹275.00 Original price was: ₹275.00.₹260.00Current price is: ₹260.00.
100 in stock
100 in stock
Description
ಮನೋವಿಜ್ಞಾನ ಮೂಲತಃ ತತ್ತ್ವಶಾಸ್ತ್ರದ ಒಂದು ಭಾಗವಾಗಿದೆ. ಮೊದಲು ಮನೋವಿಜ್ಞಾನವನ್ನು ಆತ್ಮಾನುಸಂಧಾನ ಎಂದು ವ್ಯಾಖ್ಯಾನಿಸಿದ್ದರು. ‘ಸೈಕಿ’ ಎಂದರೆ ಆತ್ಮ, ‘ಆಲಜಿ’ ಎಂದರೆ ಅಧ್ಯಯನ; ಹೀಗೆ ಸೈಕಾಲಜಿ ರೂಪತಾಳಿತು. ನಂತರದಲ್ಲಿ ಆತ್ಮದ ಬದಲಿಗೆ ಮನಸ್ಸಿನ ಅಧ್ಯಯನ ಎಂದಾಗಿ, ನಂತರದಲ್ಲಿ ಪ್ರಜ್ಞೆಯ ಅಧ್ಯಯನವಾಗಿ ಈಗ ಮನುಷ್ಯನ ವರ್ತನೆಯ ಅಧ್ಯಯನ ಎಂಬಂತೆ ವ್ಯಾಖ್ಯಾನಿಸಲಾಗುತ್ತಿದೆ. ಹಾಗೆ ನೋಡಿದರೆ ಇದು ಒಂದು ವೈಜ್ಞಾನಿಕ ಅಧ್ಯಯನವಾಗಿ ರೂಪುಗೊಂಡದ್ದು ಇತ್ತೀಚಿಗೆ. 1879ರಲ್ಲಿ ಜರ್ಮನಿಯ ಲೈಪ್ಜಿಗ್ ಎಂಬ ನಗರದಲ್ಲಿ ವಿಲ್ಹೆಲ್ಮ್ ವೂಂಟ್ ಎನ್ನುವ ದಾರ್ಶನಿಕ ಮನೋವಿಜ್ಞಾನದ ಮೊಟ್ಟಮೊದಲ ಪ್ರಯೋಗಶಾಲೆ ಆರಂಭಿಸಿ ವೈಜ್ಞಾನಿಕ ಅಧ್ಯಯನಕ್ಕೆ ನಾಂದಿ ಹಾಡಿದ. ಅಂದಿನಿಂದ ಮನೋವಿಜ್ಞಾನ ವೇಗವಾಗಿ ಬೆಳೆಯುತ್ತಿರುವ ಒಂದು ಜ್ಞಾನಶಿಸ್ತಾಗಿದೆ. ಮನೋವಿಜ್ಞಾನ ಹುಟ್ಟಿದ್ದು ಜರ್ಮನಿಯಲ್ಲಾದರೂ ಬೆಳೆಯುತ್ತಿರುವುದು ಅಮೆರಿಕಾ, ಇಂಗ್ಲೆಂಡ್ಗಳಲ್ಲಿ.
ಮನೋವಿಜ್ಞಾನ ಕುರಿತ ಸಾಹಿತ್ಯ ಜಗತ್ತಿನಲ್ಲಿ ಇಂದು ವಿಫುಲವಾಗಿ ಬೆಳೆದಿದೆ. ಸಾಮಾಜಿಕ ಮನೋವಿಜ್ಞಾನ, ಶೈಕ್ಷಣಿಕ ಮನೋವಿಜ್ಞಾನ, ವಿಕಾಸ ಮನೋವಿಜ್ಞಾನ, ಔದ್ಯೋಗಿಕ ಮನೋವಿಜ್ಞಾನ, ಚಿಕಿತ್ಸಾ ಮನೋವಿಜ್ಞಾನ ಮೊದಲಾಗಿ ಸುಮಾರು 56 ಬಗೆಯ ಮನೋವಿಜ್ಞಾನಗಳ ಅಧ್ಯಯನ ವಿಭಾಗಗಳಿವೆ. ಅನೇಕ ನೆಲೆಗಳಲ್ಲಿ ಮನೋವಿಜ್ಞಾನವನ್ನು ಅಧ್ಯಯನ ಮಾಡಲಾಗುತ್ತಿದೆ. ಆದರೆ ಭಾರತೀಯ ಭಾಷೆಗಳಲ್ಲಿ ಮನೋವಿಜ್ಞಾನವನ್ನು ಕುರಿತ ಸಾಹಿತ್ಯ ಅತ್ಯಂತ ಕಡಿಮೆ. ಕನ್ನಡದಲ್ಲಂತೂ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ ಇದೆ. ಹಾಗೆ ನೋಡಿದರೆ ಇಂದು ನಾವು ಮನೋವಿಜ್ಞಾನದ ಹೆಸರಿನಲ್ಲಿ ಕಲಿಯುತ್ತಿರುವುದೆಲ್ಲ ಅನ್ಯ ಭಾಷೆಯಲ್ಲಿರುವ ಪಾಶ್ಚಿಮಾತ್ಯ ಪರಿಕಲ್ಪನೆಗಳನ್ನು.
ಮನೋವಿಜ್ಞಾನ ಭವಿಷ್ಯದ ವಿಜ್ಞಾನವಾಗಿದೆ. ಕ್ಷಾಮ, ಭೂಕಂಪ, ಮಾರಕ ರೋಗಾಣುಗಳು ಹಾಗೂ ಕ್ಯಾನ್ಸರ್ನಂತಹ ವ್ಯಾಧಿಗಳಿಗಿಂತಲೂ ಮನುಷ್ಯ ಎದುರಿಸುತ್ತಿರುವ ದೊಡ್ಡ ಅಪಾಯವೆಂದರೆ ಅವನು ಸಹ ಜೀವಿಗಳೊಂದಿಗೆ ಸಂತೋಷದಿಂದ ಸಹಬಾಳ್ವೆ ನಡೆಸುತ್ತಿದ್ದಾನೆಯೇ ಎಂಬುದು. ಮನೋರೋಗ ದೈಹಿಕ ರೋಗಗಳಿಗಿಂತಲೂ ಹೆಚ್ಚು ದುಷ್ಪರಿಣಾಮ ಬೀರುತ್ತಿದೆ. ‘ತಲೆಕೆಟ್ಟ ಮನುಷ್ಯನೊಬ್ಬ ಹೈಡ್ರೋಜನ್ ಬಾಂಬ್ ಸ್ಫೋಟಿಸಿಬಿಡಬಹುದಾದ ದಿನಗಳಲ್ಲಿ ನಾವು ಬದುಕುತ್ತಿದ್ದೇವೆ. ಇದು ಪ್ರಖ್ಯಾತ ಮನೋವಿಜ್ಞಾನಿ ಕಾರ್ಲ್ ಯೂಂಗ್ (1875-1961) ಮನೋವಿಜ್ಞಾನದ ಮಹತ್ವವನ್ನು ಕುರಿತು ಆಡಿದ ಮಾತು. ಇದೇ ರೀತಿಯ ಅಭಿಪ್ರಾಯವನ್ನು ಅನೇಕ ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ. ಅಮೆರಿಕಾದ ಪ್ರಸಿದ್ಧ ಭೌತವಿಜ್ಞಾನಿ ಓಪನ್ ಹೀಮರ್ (1904-1967) ಜಗತ್ತಿನ ಅಳಿವು ಉಳಿವುಗಳನ್ನು ನಿರ್ಧರಿಸುವುದು ಭೌತವಿಜ್ಞಾನವಲ್ಲ, ಮನೋವಿಜ್ಞಾನ ಎಂದಿದ್ದಾನೆ. ಹಾರ್ವರ್ಡ್ ವಿಶ್ವವಿದ್ಯಾಲಯದ ಸಮಾಜಶಾಸ್ತ್ರಜ್ಞ ಸರೋಕಿನ್ (1889-1968) ‘ವಿಜ್ಞಾನ ನಮ್ಮ ಬದುಕಿಗೆ ಅನೇಕ ಸವಲತ್ತುಗಳನ್ನು ಕಲ್ಪಿಸುವುದರ ಮೂಲಕ ‘ಸುಂದರವಾಗಿಸಿದೆ’ ಆದರೆ ‘ನೆಮ್ಮದಿ’ ದೊರಕಿಸುವಲ್ಲಿ ಸೋತಿದೆ’ ಎಂದಿದ್ದಾನೆ. ಪ್ರಖ್ಯಾತ ಮನೋವಿಜ್ಞಾನಿ ಎರಿಕ್ ಫ್ರಾಮ್ (1900-1980) ‘ಇಂದು ನಾವು ಒಂದು ರೋಗಿಷ್ಠ ಸಮಾಜದಲ್ಲಿ ಬದುಕುತ್ತಿದ್ದೇವೆ. ನೈತಿಕ ಅನಾಯಕ ಸ್ಥಿತಿಯನ್ನು ಅನುಭವಿಸುತ್ತಿದ್ದೇವೆ; ಚುಕ್ಕಾಣಿಯಿಲ್ಲದ ನಾವೆಯಲ್ಲಿ ಚಲಿಸುತ್ತಿದ್ದೇವೆ. ಅಧಿಕವಾಗಿ ಉತ್ಪಾದಿಸುವುದು, ಮೇರೆ ಮೀರಿ ಅನುಭವಿಸುವುದು ಇವುಗಳಲ್ಲಿಯೇ ನಿರತರಾಗಿದ್ದೇವೆ. ಭೋಗ ಸಂಸ್ಕೃತಿಯಲ್ಲಿ ಮುಳುಗಿಹೋಗಿರುವ ನಾವು ಅದರಿಂದ ಹೊರಬರುವ ಬಗ್ಗೆ ಯೋಚಿಸಬೇಕಿದೆ. ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಮನೋವಿಜ್ಞಾನದ ಪಾತ್ರ ಅತ್ಯಂತ ಮಹತ್ವದ್ದು’ ಎನ್ನುತ್ತಾನೆ. ಈ ಹಿನ್ನೆಲೆಯಲ್ಲಿ ಆಧುನಿಕ ಮನೋವಿಜ್ಞಾನ ಮನುಷ್ಯ ತನ್ನ ವೈಯಕ್ತಿಕ ಹಾಗೂ ಸಾಮಾಜಿಕ ಜೀವನವನ್ನು ಸಹನೀಯಗೊಳಿಸಿಕೊಳ್ಳಬಹುದಾದ ಅನೇಕ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ನೆರವಾಗುತ್ತಿದೆ.
ಕನ್ನಡದಲ್ಲಿ ಮನಃಶಾಸ್ತ್ರ ಸಾಹಿತ್ಯವನ್ನು ಸದ್ದುಗದ್ದಲವಿಲ್ಲದೆ ಶ್ರದ್ಧೆಯಿಂದ ಬೆಳೆಸುತ್ತಿರುವ ವಿದ್ವಾಂಸರಲ್ಲಿ ಬಸವಣ್ಣನವರ ಹೆಸರು ಅಗ್ರಪಂಕ್ತಿಯಲ್ಲಿ ಬರುತ್ತದೆ. ಈಡಿಪಸ್ ಕಾಂಪ್ಲೆಕ್ಸ್, ಕಾರ್ಲ್ ಯೂಂಗ್, ಕನಸಿನ ಕತೆ, ಅರ್ಧನಾರೀಶ್ವರ, ಲೂಸಿಫರ್ ಎಫೆಕ್ಟ್, ಸೈಕಲಾಜಿಕಲ್ ಕಾಂಪ್ಲೆಕ್ಸ್ ಗಳು, ಸಿಗ್ಮಂಡ್ ಫ್ರಾಯ್ಡ್ ಮೊದಲಾದ ಅನೇಕ ಕೃತಿಗಳನ್ನು ಅವರು ಪ್ರಕಟಿಸಿದ್ದಾರೆ. ಅನೇಕ ವರ್ಷಗಳ ಕಾಲ ಮನೋವಿಜ್ಞಾನವನ್ನು ವಿಶ್ವವಿದ್ಯಾಲಯದಲ್ಲಿ ಬೋಧಿಸಿದ ಬಸವಣ್ಣನವರು ತಮ್ಮ ಅಧ್ಯಯನ ಸಾರವನ್ನೆಲ್ಲ ಈ ಪುಸ್ತಕಗಳ ಮೂಲಕ ಕನ್ನಡದ ಮನಸ್ಸುಗಳಿಗೆ ಉಣಬಡಿಸುತ್ತಿದ್ದಾರೆ. ಅವರ ಈ ಪ್ರಯತ್ನ ಕನ್ನಡದಲ್ಲಿ ಮನೋವಿಜ್ಞಾನದ ಅಧ್ಯಯನಕ್ಕೆ ಪೂರಕ ಸಾಹಿತ್ಯವನ್ನು ಒದಗಿಸುತ್ತಿದೆ ಎಂಬುದು ಮಾತ್ರವಲ್ಲ. ಸಾಮಾಜಿಕವಾಗಿಯೂ ಈ ಪುಸ್ತಕಗಳು ಇತ್ಯಾತ್ಮಕ ಪರಿಣಾಮ ಬೀರುತ್ತವೆ ಎಂಬುದನ್ನು ನಾವು ಗಮನಿಸಬೇಕು. ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಮನಃಶಾಸ್ತ್ರದ ಪಾತ್ರ ಅತ್ಯಂತ ಮಹತ್ವದ್ದೆಂಬ ಸಾಮಾಜಿಕ ಜವಾಬ್ದಾರಿಯ ಹಿನ್ನೆಲೆಯಲ್ಲಿ ಬಸವಣ್ಣನವರು ಈ ಕೆಲಸ ಮಾಡುತ್ತಿದ್ದಾರೆಂಬುದು ನನ್ನ ತಿಳುವಳಿಕೆ.
‘ಆಧುನಿಕ ಮನೋವಿಜ್ಞಾನದ ಪ್ರವರ್ತಕರು’ ಎಂಬ ಈ ಪುಸ್ತಕ ಮೇಲ್ನೋಟಕ್ಕೆ ನೂರೊಂದು ಜನ ಮನೋವಿಜ್ಞಾನಿಗಳ ಪರಿಚಯ ಮಾಡಿಕೊಡುವ ಸ್ವರೂಪದಲ್ಲಿದ್ದರೂ ವಾಸ್ತವವಾಗಿ ಇದು ಮನೋವಿಜ್ಞಾನದ ಇತಿಹಾಸವನ್ನು ಕನ್ನಡದಲ್ಲಿ ನಿರೂಪಿಸುವ ಅಪರೂಪದ ಪುಸ್ತಕ. ಬಸವಣ್ಣನವರೇ ತಮ್ಮ ಅರಿಕೆಯಲ್ಲಿ ಹೇಳುವಂತೆ ಯಾವ ವಿಷಯವನ್ನೇ ಆದರೂ ಐತಿಹಾಸಿಕ ದೃಷ್ಟಿಕೋನದಿಂದ ನೋಡುವುದು ಅವರ ಅಧ್ಯಯನ ಕ್ರಮ. ಈ ಪುಸ್ತಕದ ಆಕೃತಿಯು ಅದೇ ವಿನ್ಯಾಸದಲ್ಲಿ ರೂಪುಗೊಂಡಿದೆ.
ಈ ಪುಸ್ತಕದ ರಚನೆಗೆ ಪ್ರೇರಣೆ ಇ. ಜಿ. ಬೋರಿಂಗ್ನ ಪ್ರಾಯೋಗಿಕ ಮನಃಶಾಸ್ತ್ರದ (History of Experimental Psychology). ಎಂಬಂತೆ ತೋರುತ್ತದೆ. ತಮ್ಮ ತಾರುಣ್ಯದಲ್ಲಿ ಆ ಪುಸ್ತಕದಿಂದ ಪ್ರಭಾವಿತರಾದ ಬಸವಣ್ಣನವರಿಗೆ ಕನ್ನಡದಲ್ಲಿ ಮನಃಶಾಸ್ತ್ರದ ಇತಿಹಾಸವನ್ನು ಬರೆಯಬೇಕೆಂಬ ಹಂಬಲ ಮೊಳಕೆಯೊಡೆದಿತ್ತು. ಅವರ ಪುಸ್ತಕಗಳನ್ನು ಓದಿದ ಅನೇಕ ಸಹೃದಯರು ಮನಃಶಾಸ್ತ್ರದ ಇತಿಹಾಸವನ್ನು ಬರೆಯಲು ಸೂಚಿಸಿದ್ದರು. ಅದರ ಫಲವೇ ಈ ಪುಸ್ತಕ. ಇದು ರೂಢಿಯ ಇತಿಹಾಸದ ಮಾದರಿಯಲ್ಲ. ನೂರೊಂದು ಮಂದಿ ಮನೋವಿಜ್ಞಾನಿಗಳ ಬದುಕು ಸಾಧನೆಗಳನ್ನು, ಅವರು ಮನೋವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು, ಮನೋವಿಜ್ಞಾನವನ್ನು ಈ ಸಾಧಕರು ಬೆಳೆಸಿದ ಬಗೆಯನ್ನು ಕಟ್ಟಿಕೊಡುತ್ತಲೇ ಬಸವಣ್ಣನವರು ಮನೋವಿಜ್ಞಾನದ ಇತಿಹಾಸವನ್ನು ನಮಗೆ ಪರಿಚಯ ಮಾಡಿಕೊಡುತ್ತಾರೆ. ಕಾಲಾನುಕ್ರಮದಲ್ಲಿ ಮನೋವಿಜ್ಞಾನಿಗಳ ಪರಿಚಯ ಮಾಡಿಕೊಟ್ಟಿರುವುದು ಈ ಆಶಯಕ್ಕೆ ಪೂರಕವಾಗಿದೆ.
ವಿಲ್ಹೆಲ್ಮ್ ವೂಂಟ್ನಿಂದ ಮನೋವಿಜ್ಞಾನದ ಇತಿಹಾಸ ಆರಂಭವಾಯಿತು ಎನ್ನುವುದು ನಿಜವಾದರೂ ಅದಕ್ಕೆ ಮೊದಲು ಮನೋವಿಜ್ಞಾನವಿತ್ತು, ಆದರೆ ಮನೋ ವಿಜ್ಞಾನಿಗಳಿರಲಿಲ್ಲ ಎಂಬ ಅಂಶವನ್ನು ನಾವು ಮರೆಯುವಂತಿಲ್ಲ. ಹಲವು ಪ್ರಸಿದ್ಧ ದಾರ್ಶನಿಕರು ಮನೋವ್ಯಾಪಾರಗಳನ್ನು ಕುರಿತು ಪ್ರಸ್ತಾಪಿಸಿದ್ದಾರೆ. ಬಸವಣ್ಣನವರೇ ಹೇಳುವಂತೆ ಸಾಕ್ರೆಟಿಸ್ನ ಹೆಸರಾಂತ ಮಂತ್ರ ‘ನಿನ್ನನ್ನು ನೀ ಅರಿ’ ಎಂಬುದೇ ಮನೋವಿಜ್ಞಾನದ ಮೂಲ ಸೂತ್ರವೆನ್ನಿಸುತ್ತದೆ. ಪ್ಲೇಟೋ (Theory of Ideas), ಅರಿಸ್ಟಾಟಲ್ (Laws of Association), ಡೆಕಾರ್ಟ್ (Body – Mind – Relationship), ಹಾಬ್ಸ್ (Empiricism) ಮೊದಲಾದವರು ಮನಸ್ಸಿನ ವಿಕಾಸವನ್ನು ಕುರಿತು ಚರ್ಚಿಸಿರುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಇಂತಹ ಅನೇಕ ನಿದರ್ಶನಗಳಿವೆ. ಆದರೆ ಮನೋವಿಜ್ಞಾನವನ್ನು ಅಧ್ಯಯನದ ಒಂದು ಜ್ಞಾನಶಿಸ್ತನ್ನಾಗಿ ರೂಪಿಸಿದ ಕೀರ್ತಿ ವಿಲ್ಹೆಲ್ಮ್ ವೂಂಟ್ಗೆ ಸಲ್ಲುತ್ತದೆ. ಹೀಗಾಗಿ ಈ ಪುಸ್ತಕ ಆತನಿಂದ ಆರಂಭವಾಗುತ್ತದೆ.
ವಿಲ್ಹೆಲ್ಮ್ ವೂಂಟ್(1832-1920)ನಿಂದ ಹಿಡಿದು ಇಂದಿನ ಸುಪರ್ಣಾ ರಾಜಾರಾಮ್ವರೆಗೆ ಈ ಶತಮಾನದ ಎಲ್ಲ ಪ್ರಮುಖ ಮನೋವಿಜ್ಞಾನಿಗಳ ಬಗೆಗೆ ಇಲ್ಲಿ ಮಾಹಿತಿ ಇದೆ. ಇದನ್ನು ಓದುತ್ತಾ ಹೋದಂತೆ ಮನೋವಿಜ್ಞಾನ ಜಗತ್ತಿನ ಸಾಧಕರ ಸಾಧನೆಯ ಪಯಣದಲ್ಲಿ ಹಾದು ಬಂದ ಅನುಭವವಾಗುತ್ತದೆ. ಪ್ರಜ್ಞಾ ಪ್ರಭಾವ (Stream of Consciousness), ಸ್ವಪ್ನಾರ್ಥ ವಿವರಣೆ (The Interpretation of Dreams), ಕೀಳರಿಮೆಯ ಭಾವನೆಗಳು (Inferiority Feelings), ಸಾಮೂಹಿಕ ಸುಪ್ತಚೇತನ (Collective Unconscious), ಪ್ರಾಚೀನ ಪ್ರತಿಮೆಗಳು (Archetypes), ಮನೋಸಾಮಾಜಿಕ ಇತಿಹಾಸ (Psychosocial Development), ಪ್ರೀತಿಸುವ ಕಲೆ (Archetypes), (Art of Loving) ಮೊದಲಾದ ಅನೇಕ ಪರಿಕಲ್ಪನೆಗಳ ಮೂಲಕ ಬಸವಣ್ಣನವರು ಮನೋವಿಜ್ಞಾನ ಬೆಳೆದು ಬಂದ ಬಗೆಯನ್ನು ನಮ್ಮ ಅರಿವಿನ ಸಂಗತಿ ಮಾತ್ರವಲ್ಲ ಅನುಭವದ ವಿಷಯವೆಂಬಂತೆ ನಿರೂಪಿಸುತ್ತಾರೆ.
ಈ ವಿಶಿಷ್ಟ ಪುಸ್ತಕವನ್ನು ಓದುವಾಗ ಪಾಕಿಸ್ತಾನ ಮೂಲದ ನಾದಿಯಾ, ಭಾರತೀಯ ಮೂಲದ ವಿ. ಎಸ್. ರಾಮಚಂದ್ರನ್, ಸುಪರ್ಣಾ ರಾಜಾರಾಮ್ ಹೊರತು ಪಡಿಸಿದರೆ ಉಳಿದವರೆಲ್ಲ ಪಾಶ್ಚಾತ್ಯರೇ ಎಂಬುದು ಕುತೂಹಲದ ಸಂಗತಿ. ಇಬ್ಬರು ಭಾರತೀಯರಲ್ಲಿ ಒಬ್ಬರಾದ ಸುಪರ್ಣಾ ರಾಜಾರಾಮ್ ಕರ್ನಾಟಕದವರೆಂಬುದನ್ನು ನಾವಿಲ್ಲಿ ಗಮನಿಸಬೇಕು.
ಜಗತ್ತಿನ ಜ್ಞಾನ ಕನ್ನಡ ಮನಸ್ಸುಗಳಿಗೆ ಕನ್ನಡದಲ್ಲಿಯೇ ಸಿಗಬೇಕೆಂಬ ಹಿನ್ನೆಲೆಯಲ್ಲಿ ಬಸವಣ್ಣನವರ ಈ ಪ್ರಯತ್ನ ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಮಹತ್ವದ್ದು. ಇಂತಹ ಪುಸ್ತಕವನ್ನು ಪ್ರಕಟಿಸಿದ ‘ಅಮೂಲ್ಯ ಪುಸ್ತಕ’ಕ್ಕೆಕನ್ನಡಿಗರು ಕೃತಜ್ಞರಾಗಿದ್ದಾರೆ.
-ನರಹಳ್ಳಿ ಬಾಲಸುಬ್ರಹ್ಮಣ್ಯ
Customer Reviews
Be the first to review “ಆಧುನಿಕ ಮನೋವಿಜ್ಞಾನದ ಪ್ರವರ್ತಕರು | Adhunika manovijnanada Pravartakaru” Cancel reply









Political | ರಾಜಕೀಯ










Reviews
There are no reviews yet.