ಕುವೆಂಪು ಪದಸೃಷ್ಟಿ | Kuvempu Padasrishti
ನಾನೇನು ಸಾಹಿತಿಯಲ್ಲ. ನಾನೊಬ್ಬ ಸಾಮಾನ್ಯ ಓದುಗ. ಆದರೂ ಸಾಕಷ್ಟು ಓದಿಕೊಂಡಿದ್ದೇನೆ. ಇಲ್ಲಿ ಅರ್ಥೈಸಿರುವ ಎಲ್ಲ ಪದಗಳನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇನೆ. ಪ್ರಾಮಾಣಿಕವಾಗಿ ಹೇಳುವುದಾದರೆ, ನನಗೆ ಇಲ್ಲಿನ ೨೨೪ ಪದಗಳ ಪೈಕಿ ೨೦೦ ಪದಗಳ ಅರ್ಥ ತಿಳಿಯದು. ಆದುದರಿಂದ ಈ ಪುಸ್ತಕ ಕುವೆಂಪು ಕಾವ್ಯಗಳನ್ನು ಓದಬೇಕೆನ್ನುವ ನನ್ನಂಥವರಿಗೆ ಬಹಳ ಉಪಯುಕ್ತವಾದುದು.
- ಡಾ. ಎಂ. ಬಸವಣ್ಣ,
ಮನಃಶಾಸ್ತ್ರ ಪ್ರಾಧ್ಯಾಪಕರು
₹175.00
98 in stock
98 in stock
Description
ಕೃಷ್ಣಪ್ಪನವರು ಕುವೆಂಪುರವರ ವಿವಿಧ ಕಾವ್ಯಗಳನ್ನು ಅಧ್ಯಯನ ಮಾಡಿ, ಅವುಗಳಲ್ಲಿ ಆ ರಸಋಷಿ ನಿರ್ಮಿಸಿರುವ ಹೊಸ ಹೊಸ ಶಬ್ದಗಳನ್ನು ಹುಡುಕಿ ತೆಗೆದು, ಅವುಗಳನ್ನು ಅರ್ಥಸಹಿತವಾಗಿ, ಸಂದರ್ಭಸಹಿತವಾಗಿ ಸಹೃದಯರ ಮುಂದೆ ಮಂಡಿಸಿದ್ದಾರೆ. ಆ ನೂತನ ಶಬ್ದಗಳು ಬಳಕೆಯಾಗಿರುವ ಕಾವ್ಯಭಾಗಗಳನ್ನು ಉದ್ಧರಿಸಿ, ತಮ್ಮ ಕಾರ್ಯಕ್ಕೆ ಹೆಚ್ಚಿನ ಅಧಿಕೃತತೆಯನ್ನು ತಂದುಕೊಟ್ಟಿದ್ದಾರೆ. ಕೆಲವೆಡೆ ಆ ನೂತನ ಪದಗಳ ಸಾರ್ಥಕತೆಯನ್ನು ತಮ್ಮದೇ ಪ್ರತಿಭಾ ವಿಲಾಸದ ಹಿನ್ನೆಲೆಯಲ್ಲಿ ಮನಮುಟ್ಟುವಂತೆ ತಿಳಿಸಿಕೊಟ್ಟಿದ್ದಾರೆ.
- ಡಾ. ಕೆ. ಅನಂತರಾಮು,
ನಿವೃತ್ತ ಕನ್ನಡ ಪ್ರಾಧ್ಯಾಪಕರು, ಮೈಸೂರು ವಿಶ್ವವಿದ್ಯಾನಿಲಯ




















Political | ರಾಜಕೀಯ










Reviews
There are no reviews yet.