ಗ್ರಹಣ | Grahana
ಗ್ರಹಣ | Grahana Original price was: ₹260.00.Current price is: ₹247.00.
Back to products
ನಿಲ್ದಾಣಗಳ ನಾದಲೀಲೆ | Nildanagala Naadaleele
ನಿಲ್ದಾಣಗಳ ನಾದಲೀಲೆ | Nildanagala Naadaleele Original price was: ₹195.00.Current price is: ₹180.00.

ಕಾರಂತ: ಅನಂತ-ದಿಗಂತ I Karantha: Anantha-Digantha

Publisher : Amulya Pustaka
ISBN : 978-81-180689-2-1
Publication Date : 2026
Edition : 1st
No of Pages : 152

ಕೆ. ಶಿವರಾಮ ಕಾರಂತ  ವ್ಯಕ್ತಿ, ವ್ಯಕ್ತಿತ್ವ, ಪ್ರಸಂಗಗಳು

Original price was: ₹200.00.Current price is: ₹175.00.

99 in stock

99 in stock

Description

ಕನ್ನಡದಲ್ಲಿ ಮಾತ್ರವಲ್ಲ, ಭಾರತೀಯ ಭಾಷೆಗಳಲ್ಲಿಯೂ ಕಾರಂತರಂತಹ ಬಹುಮುಖ ಪ್ರತಿಭೆಗಳು ವಿರಳ, ವಿಶ್ವಮಟ್ಟದ ಮಾನ್ಯತೆಗೆ ಅರ್ಹವಾದ ಪ್ರತಿಭೆ, ವೈಜ್ಞಾನಿಕ ಮನೋಭಾವದ ಶುದ್ದ ಬುದ್ಧಿಜೀವಿ, ನುಡಿದಂತೆ ನಡೆದ ಅಪರೂಪದ ವ್ಯಕ್ತಿತ್ವ- ಇವೆಲ್ಲವೂ ಕಾರಂತರನ್ನು ಅನನ್ಯರನ್ನಾಗಿ ಮಾಡಿವೆ. ಅವರು ಯಾವ ಕ್ಷೇತ್ರದಲ್ಲೇ ಕೆಲಸ ಮಾಡಿದರೂ, ತಮ್ಮದೇ ಆದ ನಿಲುವಿನೊಂದಿಗೆ, ಬಹುತೇಕ ಒಂಟಿ ಸಲಗದಂತೆ ಸಾಗಿದರು. ಮುಖವಾಡಗಳಿಲ್ಲದ ಸರಳ ಬದುಕು, ನೇರ ನುಡಿ, ರಾಜಿಯಿಲ್ಲದ ಸತ್ಯನಿಷ್ಠೆ ಮತ್ತು ಆತ್ಮಗೌರವ- ಇವು ಅವರ ವ್ಯಕ್ತಿತ್ವದ ಮೂಲಗುಣಗಳು, ಒಂದರ್ಥದಲ್ಲಿ ಅವರದು ಕಡಲಿನಷ್ಟು ವಿಶಾಲವಾದ ವ್ಯಕ್ತಿತ್ವ.

ಕಾರಂತರಂತಹ ವಿರಾಟ್ ವ್ಯಕ್ತಿತ್ವವನ್ನು ಒಂದು ಪುಟ್ಟ ಪುಸ್ತಕದ ಚೌಕಟ್ಟಿನಲ್ಲಿ ಸಂಪೂರ್ಣವಾಗಿ ಪರಿಚಯಿಸುವುದು ಅಸಾಧ್ಯದ ಕೆಲಸ. ಈ ಕೃತಿ ಅವರ ಸಮಗ್ರ ಜೀವನಗಾಥೆಯಲ್ಲ; ಅವರ ವ್ಯಕ್ತಿತ್ವದ ಕೆಲವು ಪ್ರಮುಖ ಮಗ್ಗಲುಗಳನ್ನು, ಕೆಲವು ಅರ್ಥಪೂರ್ಣ ಪ್ರಸಂಗಗಳನ್ನು ಮತ್ತು ಅವರ ಸಾಧನೆಯ ವೈಶಾಲ್ಯವನ್ನು ಓದುಗರಿಗೆ ಪರಿಚಯಿಸುವ ಒಂದು ವಿನಮ್ರ ಪ್ರಯತ್ನ ಮಾತ್ರ. ಈ ಯತ್ನವು ಓದುಗರಲ್ಲಿ ಕಾರಂತರ ಕೃತಿಗಳನ್ನೂ, ಅವರ ಜೀವನವನ್ನೂ ಇನ್ನಷ್ಟು ಆಳವಾಗಿ ಅರಿಯುವ ಕುತೂಹಲವನ್ನು ಹುಟ್ಟಿಸಿದರೆ, ಈ ಕೃತಿಯ ಉದ್ದೇಶ ಸಾರ್ಥಕವಾದಂತೆಯೇ.

~ಡಾ. ಎಚ್. ಎಸ್. ಸತ್ಯನಾರಾಯಣ

Specification

Writer Information

Weight0.30 kg
AuthorsH S Satyanarayana

Customer Reviews

Reviews

There are no reviews yet.

Be the first to review “ಕಾರಂತ: ಅನಂತ-ದಿಗಂತ I Karantha: Anantha-Digantha”

Your email address will not be published. Required fields are marked *