ವಚನ ಜೀವನ ಮಾರ್ಗದರ್ಶನ |Vachana Jeevana Margadarshana
₹180.00 Original price was: ₹180.00.₹162.00Current price is: ₹162.00.
30 in stock
30 in stock
Description
ವಚನಗಳಲ್ಲಿ ಅಂತರ್ಗತವಾಗಿರುವ ಆಧ್ಯಾತ್ಮ ಮತ್ತು ಸಾಮಾಜಿಕ ಆಯಾಮಗಳು ಜೊತೆ ವ್ಯಕ್ತಿತ್ವ ವಿಕಸನ ಅಥವಾ ಜೀವನ ಕೌಶಲ್ಯಗಳ ನೆಲೆಯನ್ನು ಶೋಧಿಸುವ ಪ್ರಸ್ತುತವೇ ಅಥವಾ ಅಪ್ರಸ್ತುತವೇ ಎಂಬ ಪ್ರಶ್ನೆ ಕೇಳಿಕೊಂಡರೆ, ಜನ ಸಾಮಾನ್ಯರ ಜೀವನಾನುಭವದಿಂದ ಶರಣ ಚಳವಳಿಯ ಉತ್ಪನ್ನವಾಗಿ ಹುಟ್ಟಿದ ವಚನಗಳಲ್ಲಿ ಮನುಷ್ಯ ಜೀವನಕ್ಕೆ ಅಗತ್ಯವಾದ ವಸ್ತು ವಿಷಯಗಳಿರುವುದು ಸಹಜವಾಗಿ ಕಂಡುಬರುತ್ತದೆ. ಆಧುನಿಕ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನ ನಿರ್ವಹಣೆಗೆ ಅಗತ್ಯವಾದ ತತ್ವ ಚಿಂತನೆಗಳನ್ನು ಒಳಗೊಂಡ ಅನೇಕ ವಚನಗಳು ಆ ಕಾಲದಲ್ಲಿಯೇ ಸೃಷ್ಟಿಯಾಗಿರುವುದನ್ನು ಕಾಣಬಹುದು . ಅಂಥ ಕೆಲವು ವಚನಗಳನ್ನು ಆಯ್ದು , ಅವುಗಳಲ್ಲಿರುವ ಜೀವನ ಕೌಶಲ್ಯಗಳು ಮತ್ತು ಇತರ ಅಗತ್ಯ ವ್ಯಕ್ತಿತ್ವ ಬೋಧನೆಯ ಅಂಶಗಳನ್ನು ವಸ್ತು ವಿಷಯಾನುಸಾರವಾಗಿ ಈ ಪುಸ್ತಕದಲ್ಲಿ ವಿವಿಧ ಲೇಖನಗಳಲ್ಲಿ ದಾಖಲಿಸಲಾಗಿದೆ. ಈ ನಿಟ್ಟಿನಲ್ಲಿ ಶೋಧನೆ ನಡೆದರೆ ಇನ್ನಷ್ಟು ವಚನಗಳನ್ನು ಈ ದೃಷ್ಟಿಯಿಂದ ಅಭ್ಯಸಿಸಲು ಸಾಧ್ಯವಾದೀತು. ಜನರ ದಿನನಿತ್ಯದ ಜಂಜಡಗಳಲ್ಲಿ ಉತ್ತರವಾಗಿ ಹೊರಹೊಮ್ಮಿದ ವಚನಗಳಲ್ಲಿ ಅವರ ಬದುಕಿನ ಸರ್ವತೋಮುಖ ಏಳ್ಗೆಯನ್ನು ಖಾತರಿಪಡಿಸುವ ವಚನಗಳ ಅನೇಕ ಉದಾಹರಣೆಗಳನ್ನು ನಾವಿಲ್ಲಿ ಕಾಣಬಹುದು
Specification
Writer Information
| Weight | 0.20 kg |
|---|










Political | ರಾಜಕೀಯ










Reviews
There are no reviews yet.