ಮಾನವತಾವಾದಿ ಬಸವಣ್ಣ | Manavatavaadi Basavanna
ಇಲ್ಲಿನ ವಸ್ತು ಕಲ್ಯಾಣದಲ್ಲಿ ಶಾಂತಿ ಕದಡುವ ಮುನ್ನ ಬಸವಣ್ಣ ಮಾನವತಾವಾದಕ್ಕೆ ಒಂದು ದಾರ್ಶನಿಕ ಹಿನ್ನೆಲೆಯನ್ನು ಒದಗಿಸಲು, ತನ್ನ ಸಮಕಾಲೀನ ಶರಣರೊಡನೆ ನಿರ್ಮಿಸಿದ ಅನುಭವ ಮಂಟಪ, ಅಲ್ಲಿ ಅಲ್ಲಮ ಪ್ರಭುವಿನ ಅಧ್ಯಕ್ಷತೆಯಲ್ಲಿ ನಡೆದ ನಿರಂತರ ವಿಚಾರ ಮಂಥನ ಮತ್ತು ಅದರ ಪರಿಣಾಮವಾಗಿ ಸೃಷ್ಟಿಯಾದ ಒಂದು ಅಪೂರ್ವ ಕನ್ನಡ ಸಾಹಿತ್ಯ ಪ್ರಕಾರ, “ವಚನ ಸಾಹಿತ್ಯವನ್ನು ಕುರಿತಾದುದು.
₹40.00
100 in stock
100 in stock
Description
ಬಸವಣ್ಣ ಒಬ್ಬ ಅಸಮಾನ್ಯ ಸಮಾಜ ಸುಧಾರಕ. ಸಮಾನತೆಯ ಹರಿಕಾರ. ಜಗತ್ತು ಕಂಡ ಮೊಟ್ಟಮೊದಲ ಸಮಾಜವಾದಿ. ಅಂದು ಸಮಾಜದಲ್ಲಿ ಪ್ರಚಲಿತವಿದ್ದ ಹಲವಾರು ಜಾತಿ, ಮತ, ಕುಲ, ಗೋತ್ರಗಳಲ್ಲಿ ಹಂಚಿಹೋಗಿದ್ದ ಜನರನ್ನು ಒಟ್ಟುಗೂಡಿಸಿ, ಅವರೆಲ್ಲ ತಲೆಯೆತ್ತಿ ನಡೆಯಬಹುದಾದ ಒಂದು ಜಾತ್ಯತೀತ ಸಮಾಜ ಸ್ಥಾಪನೆ ಮಾಡುವುದು ಅವನ ಮುಖ್ಯ ಉದ್ದೇಶವಾಗಿತ್ತು. ಅದು ಬಹುಮಟ್ಟಿಗೆ ನೆರವೇರಿತ್ತು ಕೂಡ. ಬಸವಣ್ಣ ಕಟ್ಟಬಯಸಿದ ಜಾತ್ಯತೀತ ಸಮಾಜದ ನಿರ್ಮಾಣ ಪೂರ್ತಿಯಾಗಲಿಲ್ಲ. ಎಲ್ಲ ಕಾಲಗಳಲ್ಲೂ ಎಚ್ಚರವಿರುವಂಥ ಕೆಲವು ಸಮಾಜ ವಿರೋಧಿ ಶಕ್ತಿಗಳು ಅದನ್ನು ಆಗಗೊಡಲಿಲ್ಲ. ಅದರಿಂದ ನಿರಾಶನಾದ ಬಸವಣ್ಣ ಕೂಡಲ ಸಂಗಮಕ್ಕೆ ಹಿಂದಿರುಗಿ, ತನ್ನ ಇಷ್ಟದೈವ ಸಂಗಮೇಶ್ವರನಲ್ಲಿ ಐಕ್ಯವಾದನೆಂದು ಹೇಳಲಾಗಿದೆ. ಅವನ ಸೋದರಳಿಯ ಚನ್ನಬಸವಣ್ಣ ಶರಣರೊಡನೆ ಕಲ್ಯಾಣವನ್ನು ತೊರೆದು ಉಳುವೆಗೆ ಹೋಗುತ್ತಾನೆ. ಅದೆಲ್ಲ ಪುರಾಣೇತಿಹಾಸ. ಇಲ್ಲಿ ಹೇಳ ಹೊರಟಿರುವುದು ಅದನ್ನಲ್ಲ. ಇಲ್ಲಿನ ವಸ್ತು ಕಲ್ಯಾಣದಲ್ಲಿ ಶಾಂತಿ ಕದಡುವ ಮುನ್ನ ಬಸವಣ್ಣ ಮಾನವತಾವಾದಕ್ಕೆ ಒಂದು ದಾರ್ಶನಿಕ ಹಿನ್ನೆಲೆಯನ್ನು ಒದಗಿಸಲು, ತನ್ನ ಸಮಕಾಲೀನ ಶರಣರೊಡನೆ ನಿರ್ಮಿಸಿದ ಅನುಭವ ಮಂಟಪ, ಅಲ್ಲಿ ಅಲ್ಲಮ ಪ್ರಭುವಿನ ಅಧ್ಯಕ್ಷತೆಯಲ್ಲಿ ನಡೆದ ನಿರಂತರ ವಿಚಾರ ಮಂಥನ ಮತ್ತು ಅದರ ಪರಿಣಾಮವಾಗಿ ಸೃಷ್ಟಿಯಾದ ಒಂದು ಅಪೂರ್ವ ಕನ್ನಡ ಸಾಹಿತ್ಯ ಪ್ರಕಾರ, “ವಚನ ಸಾಹಿತ್ಯವನ್ನು ಕುರಿತಾದುದು.













Political | ರಾಜಕೀಯ










Reviews
There are no reviews yet.