ಮಹಾತ್ಮೆ |Mahatme
₹150.00 Original price was: ₹150.00.₹135.00Current price is: ₹135.00.
30 in stock
30 in stock
Description
ಗಂಗಿರೆಡ್ಡಿಗೆ ತನ್ನ ಅಣ್ಣನ ಮುಖವನ್ನು ನೋಡಬೇಕೆನಿಸಲಿಲ್ಲ . ಬಹಳ ಹೊತ್ತು ಏನೂ ಮಾತನಾಡದೆ ಕುಳಿತುಬಿಟ್ಟ .ಕಂಗಳು ಒದ್ದೆಯಾಗತೊಡಗಿದವು .ಬಿಕ್ಕಿ ಬಿಕ್ಕಿ ಅಳಬೇಕೆನಿಸಿತು ಒಮ್ಮೆ ತಲೆಯೆತ್ತಿ ನೋಡಿದ .ಅವನ ಒಪ್ಪಿಗೆಗಾಗಿ ಅಲ್ಲಿದ್ದವರು ಕಾತುರದಿಂದ ಕಾದಿರುವಂತೆ ನೋಡುತ್ತಲಿದ್ದರು . ಗಂಗಿ ರೆಡ್ಡಿ ತನಗ್ಯಾರ ಗೊಡವಿಯು ಬೇಡವೆಂಬಂತೆ ಎದ್ದು ನಿಂತು ಆಚೆ ನಡೆಯತೊಡಗಿದ. ದೇವರೆಡ್ಡಿಯ ಕೂಗು ಅವನಿಗೆ ಕೇಳಿಸದ ವೇಗದಲ್ಲಿ ಆಚೆ ನಡೆದು ಪಟ್ಟಣದ ಹೃದಯ ಭಾಗಕ್ಕೆ ನುಗ್ಗಿದ .ಅಂದು ಭಾನುವಾರವಾದದ್ದರಿಂದ ದಟ್ಟಣೆ ಜೋರವಾಗಿತ್ತು. ಸಂತೆಯ ಕಾರಣದಿಂದ ಪಟ್ಟಣದ ರಸ್ತೆಗಳು ಕೊಬ್ಬಿದವು . ಗಂಗೆರೆಡ್ಡಿ ಪಟ್ಟಣದ ಮುಖ್ಯ ವೃತ್ತದ ನಡುವಿಗೆ ಬಂದು ನಿಂತು ಆಕಾಶ ನೋಡ ತೊಡಗಿದ . ನಾಲ್ಕು ದಿಕ್ಕುಗಳಿಂದ ವಾಹನಗಳ ಸದ್ದು ಮುಗಿಲು ಮುಟ್ಟತೊಡಗಿತು . ಅವನು ಕದಲದೆ ನಿಂತೆ ಇದ್ದ . ವಾಹನಗಳ ಸದ್ದು ಮತ್ತು ಜೋರಾಯಿತು .
ಟ್ರಾಫಿಕ್ ಸಿಗ್ನಲ್ಲಿನ ದೀಪಗಳು ತಮ್ಮ ಪಾಡಿಗೆ ತಾವು ಬಣ್ಣ ಬದಲಿಸುತಲಿದ್ದವು . ಗಂಗಿರೆಡ್ಡಿ ತಲೆಯನ್ನು ಮತ್ತು ಮೇಲಕ್ಕೆ ಎತ್ತಿ ‘ಶನಿ ರಾಜ’ ಬಂದನು ಉಜ್ಜಯಿನಿ ನಗರಿಗೇ…ಘನವಾದ ಅಶ್ವವನ್ನು ಕಲಿರಾಜ ತಾರೆ …ಬೇಕಾದ ಬೇಪರಿ ಜನರೆಲ್ಲ ಕೂಡಲು …ವಿಕ್ರಮ ರಾಜ ತಾನು.. ಎಂದು ಜೋರಾಗಿ ಹಾಡತೊಡಗಿದ .ವಾಹನಗಳ ಸದ್ದಿನ ದಟ್ಟನೆಯ ಇಕ್ಕಟ್ಟಿನಲ್ಲಿ ಅವನ ಹಾಡು ಉದ್ವರವರೇಖೆಯಾಗಿ ಚಲಿಸಿ ಆಕಾಶದ ನೀಲಿಯಲ್ಲಿ ನೀಲಿಯಾಗಿ ಹಬ್ಬ ತೊಡಗಿತು.
Specification
Writer Information
| Weight | 0.25 kg |
|---|




















Political | ರಾಜಕೀಯ










Reviews
There are no reviews yet.