ಜೀವರತಿ | Jeevarathi
₹450.00 Original price was: ₹450.00.₹405.00Current price is: ₹405.00.
91 in stock
91 in stock
Description
ಶ್ರೀಮತಿ ತೇಜಶ್ರೀ ಅವರಿಗೆ
ನಿಮ್ಮ ಕಾದಂಬರಿ ಓದಿದೆ. ಕುವೆಂಪು ಅವರ ಕಾದಂಬರಿಗಳ ಹೊರತುಪಡಿಸಿ ಕಾನನವೇ ಒಂದು ಬೃಹತ್ ಪಾತ್ರವಾಗಿ ತನ್ನ ಜೀವಂತಿಕೆಯನ್ನು ತೋರಿರುವುದು ನಿಮ್ಮ ‘ಜೀವರತಿ’ ಯಲ್ಲಿ ಮಾತ್ರವೇ. ಕಾದಂಬರಿಯ ಮೈತುಂಬಾ ಹರಡಿಕೊಂಡಿರುವ ಕಾಡಿನ ದಟ್ಟ ವರ್ಣನೆಯಲ್ಲಿ ಮೈದಳೆದಿರುವ ಮನುಷ್ಯ, ಕ್ರಿಮಿಕೀಟಾದಿಗಳನ್ನೊಳಗೊಂಡ ಕಥನ ಆ ಮಲೆಜೀವಿಗಳ ಆಗು ಚೇಗುಗಳ ಜೀವಂತಿಕೆಯಲ್ಲಿ ನಮ್ಮನ್ನು ಆವರಿಸಿಕೊಂಡುಬಿಡುತ್ತದೆ.
ದೊಡ್ಡಯ್ಯನ ಸಂಕೀರ್ಣ ವ್ಯಕ್ತಿತ್ವವನ್ನು ಒಂದು ಹದದಲ್ಲಿ ಕಡೆದಿದ್ದೀರಿ, ಅವ್ವಕ್ಕನ ಸಾತ್ವಿಕತೆ,ಕಷ್ಟ ಕಾರ್ಪಣ್ಯಗಳ ಸಹಿಸುವಿಕೆ ಮರಳಿ ಮಣ್ಣಿಗೆಯ ಸರಸೋತಿ ಪಾರೋತಿಯರನ್ನು ನೆನಪಿಸಿತು.ರಾಮನಾಯಕರ ಪಾತ್ರವನ್ನು ಇನ್ನೊಂಚೂರು ಬೆಳೆಸಬಹುದಿತ್ತು. ಆದರೂ ಇಲ್ಲಿನ ಯಾವ ಪಾತ್ರವೂ ನಿಶ್ಕ್ರಿಯ ಎನಿಸುವುದಿಲ್ಲ. ಬದುಕಿನ ವಿವಿಧ ಶೇಡ್ ಗಳನ್ನು ಹಲವು ಬದುಕುಗಳ ವಿವರದಲ್ಲಿ ಮೂಡಿಸುವ ಅಚ್ಚರಿಯೂ ನಿಮ್ಮ ಬರವಣಿಗೆಯಲ್ಲಿದೆ. ಕಾದಂಬರಿಯ ಭಾಷೆಯಂತೂ ಬೆರಗು ಹುಟ್ಟಿಸುತ್ತೆ. ದೇಸಿ ಸೊಗಡನ್ನೆಲ್ಲ ಬಸಿದು ಕಟ್ಟಿದಂತಿರುವ ಭಾಷೆ ನಿಮಗೆ ಒದಗಿ ಬಂದಿರುವುದು ಅಪೂರ್ವ.ಕನ್ನಡ ಗದ್ಯದ ಶ್ರೀಮಂತಿಕೆಯನ್ನು ಇಮ್ಮಡಿಗೊಳಿಸಿದ ಕೀರ್ತಿ ನಿಮಗೆ ಅನಾಯಾಸವಾಗಿ ಸಲ್ಲುತ್ತದೆ.
ವಿವಿಧ ಆಚರಣೆಗಳು, ಹಬ್ಬಗಳು ಅಲ್ಲಿನ ಜೀವಿಗಳ ನಂಬಿಕೆಯಾಗಿ ಸ್ಥಳೀಯ ಪರಂಪರೆಯ ವಿಶಿಷ್ಟತೆಯನ್ನು ಸೂಚಿಸುವಂತಿವೆ,ಹಂದಿ ಹಸುಗೆ, ಮಾಂಸದಡುಗೆಯ ದಟ್ಟ ವಿವರಣೆ ಮಾಂಸಪ್ರಿಯರ ಬಾಯಲ್ಲಿ ನೀರೂರಿಸುವಂತಿದೆ.
ದೊಡ್ಡಯ್ಯನ ಯುಗ ಮಸುಕಾದಂತೆ ನಂತರದ ತಲೆಮಾರಿನ್ಲಲಾಗುವ ಬದಲಾವಣೆ ಮುಂಬರುವ ಆಧುನಿಕ ವಿಕೃತಿಗೆ ಬರೆದ ಮುನ್ನುಡಿಯಂತಿದೆ.
ಒಟ್ಟಾರೆ ಕಾದಂಬರಿಯ ಮುಖ್ಯ ಪ್ರಾಣ ಅಡಗಿರುವುದೇ ಅದರ ಚಲನಶೀಲತೆಯಲ್ಲಿ, ಅದು ಎಲ್ಲಿಯೂ ನಿಲ್ಲುವುದೂ ಇಲ್ಲ ಕೊನೆಗೂಳ್ಳುವುದೂ ಇಲ್ಲ. ಕನ್ನಡದ ಬಹು ಮುಖ್ಯ ಕಾದಂಬರಿ ಇದು.
ಅಭಿನಂದನೆಗಳು ಮೇಡಂ
– ಚಂದ್ರಶೇಖರ ತಾಳ್ಯ












Political | ರಾಜಕೀಯ










Reviews
There are no reviews yet.