ಅಪ್ಪ ಕಾಣೆಯಾಗಿದ್ದಾನೆ | Appa Kaaneyagiddane
ಅಪ್ಪ ಕಾಣೆಯಾಗಿದ್ದಾನೆ | Appa Kaaneyagiddane Original price was: ₹160.00.Current price is: ₹150.00.
Back to products
ಬೆಸ್ಟ್‌ ಆಫ್‌ ಕಟ್ಟೆ ಪುರಾಣ | Best of Katte Purana
ಬೆಸ್ಟ್‌ ಆಫ್‌ ಕಟ್ಟೆ ಪುರಾಣ | Best of Katte Purana Original price was: ₹250.00.Current price is: ₹225.00.

ಒಂದು ತೇಗದ ಕುರ್ಚಿ | Ondu Tegada Kurchi

Publisher : Amulya Pustaka
ISBN : 978-81-990602-3-4
Publication Date : 2025
Edition : 1st
No of Pages : 84

ಸಿದ್ದು ಅವರ ಕಥೆಗಳು ಒಳಿತು-ಕೆಡುಕುಗಳ ಸರಳ ಮಾದರಿಗೆ ಸಮಾಧಾನಗೊಳ್ಳದೆ, ಬದುಕು ಒಡ್ಡುವ ಪರೀಕ್ಷೆಗಳಲ್ಲಿ ಈ ಮಾದರಿಗಳು ನಿಕಷಕ್ಕೊಳಪಡುವ ಸವಾಲಿಗೆ ತಮ್ಮನ್ನು ತಾವೇ ಒಡ್ಡಿಕೊಂಡಿರುವುದು ವಿಶೇಷ. ಶೋಷಣೆ ಕುರಿತಾದ ನಮ್ಮ ವಿರೋಧದ ಅಸಲಿಯತ್ತನ್ನು ವಿಮರ್ಶೆಗೊಳಪಡಿಸುವ ಗುಣದ ಕಾರಣದಿಂದಲೇ ಇಲ್ಲಿನ ಕಥೆಗಳು ವಿಶಿಷ್ಟವಾಗಿ ಕಾಣಿಸುತ್ತವೆ.

₹110.00

100 in stock

100 in stock

Description

ಶೋಷಣೆಯನ್ನು ವಿರೋಧಿಸುತ್ತ, ಮಾನವೀಯತೆಯನ್ನು ಪ್ರತಿಪಾದಿಸುವ ನಮ್ಮ ನಡೆ-ನುಡಿಗಳು ಕೊಂಚ ಎತ್ತರ ತಪ್ಪಿದರೂ ಅಸೂಕ್ಷ್ಮಗೊಳ್ಳುವ ಸಂಕೀರ್ಣ ಸಂದರ್ಭದಲ್ಲಿ, ಮನುಷ್ಯರಾಗಿ ಉಳಿಯುವುದೇ ಬಹು ದೊಡ್ಡ ಸವಾಲಿನಂತೆ ಕಾಣಿಸುತ್ತದೆ. ಆ ಹೊಣೆಗಾರಿಕೆಯನ್ನು ನಿರ್ಲಕ್ಷಿಸುವ ಕೆಲವರು ಉತ್ಪಾದಿಸುವ ದೊಡ್ಡದೊಡ್ಡ ಮಾತುಗಳ ಬಲೂನಿಗೆ ತಾಗಿಸುವ ನಿಜದ ಸೂಜಿಮೊನೆಗಳಂಥ ಯುವ ಅಭಿವ್ಯಕ್ತಿಯ ರೂಪದಲ್ಲಿ ಸಿದ್ದು ಸತ್ಯಣ್ಣವರ `ಒಂದು ತೇಗದ ಕುರ್ಚಿ’ ಸಂಕಲನದ ಕಥೆಗಳು ಕಾಣಿಸುತ್ತಿವೆೆ. ಪ್ರತಿರೋಧದ ಮನೋಭಾವ ಒಳಗೊಂಡಿರುವ ಈ ಅಭಿವ್ಯಕ್ತಿಯ ಭಿತ್ತಿ, ವಿವೇಕ ಹಾಗೂ ಸಂಯಮಗಳ ವಿಶಿಷ್ಟ ಸಮೀಕರಣವಾಗಿದೆ. ಈ ಸಮೀಕರಣದ ರೂಪದಲ್ಲಿ ಕಾಣಿಸುವ, ಏಳು ಕಥೆಗಳ ಈ ಸಂಕಲನದ ಕೇಂದ್ರದಲ್ಲಿ, ವ್ಯವಸ್ಥೆಯನ್ನು ಆರ್ದ್ರಗೊಳಿಸುವ, ಮಾನವೀಯಗೊಳಿಸುವ ಹಂಬಲ ಸ್ಪಷ್ಟವಾಗಿದೆ. ಸಿದ್ದು ಅವರ ಕಥೆಗಳು ಒಳಿತು-ಕೆಡುಕುಗಳ ಸರಳ ಮಾದರಿಗೆ ಸಮಾಧಾನಗೊಳ್ಳದೆ, ಬದುಕು ಒಡ್ಡುವ ಪರೀಕ್ಷೆಗಳಲ್ಲಿ ಈ ಮಾದರಿಗಳು ನಿಕಷಕ್ಕೊಳಪಡುವ ಸವಾಲಿಗೆ ತಮ್ಮನ್ನು ತಾವೇ ಒಡ್ಡಿಕೊಂಡಿರುವುದು ವಿಶೇಷ. ಶೋಷಣೆ ಕುರಿತಾದ ನಮ್ಮ ವಿರೋಧದ ಅಸಲಿಯತ್ತನ್ನು ವಿಮರ್ಶೆಗೊಳಪಡಿಸುವ ಗುಣದ ಕಾರಣದಿಂದಲೇ ಇಲ್ಲಿನ ಕಥೆಗಳು ವಿಶಿಷ್ಟವಾಗಿ ಕಾಣಿಸುತ್ತವೆ.
– ಚ.ಹ. ರಘುನಾಥ್

Specification

Writer Information

Weight0.20 kg
AuthorsSiddu Satyannavara

Customer Reviews

Reviews

There are no reviews yet.

Be the first to review “ಒಂದು ತೇಗದ ಕುರ್ಚಿ | Ondu Tegada Kurchi”

Your email address will not be published. Required fields are marked *