ಅಪ್ಪ ಕಾಣೆಯಾಗಿದ್ದಾನೆ | Appa Kaaneyagiddane

Publisher : Amulya Pustaka
ISBN : 978-81-959924-2-3
Publication Date : 2022
Edition : 1st
No of Pages : 128

ಇದು ರಘುನಂದನ್‌ರ ಮೊದಲ ಕಥಾ ಸಂಕಲನ. ಆದರೆ ಕಥೆ ಹೇಳುವುದು ಇವರಿಗೆ ಮೊದಲನೆಯದಲ್ಲ. ಭಿನ್ನವಾದ ಪ್ರಕಾರದಲ್ಲಿ ಕಥೆ ಹೇಳುವ ಪ್ರಯತ್ನವನ್ನು ಇಲ್ಲಿ ಮಾಡಿದ್ದಾರೆ

Original price was: ₹160.00.Current price is: ₹150.00.

100 in stock

100 in stock

Description

ಸಮುದ್ರವೊಂದು ಜತನದಿಂದ ಮಾಡಿ ತೆಗೆದು ದಡಕ್ಕೆ ಎಸೆದ ಶಂಖವೊಂದು ಮೇಜಿನ ಮೇಲಿಟ್ಟರೆ ಬರಿಯ ಅಲಂಕಾರಿಕ ವಸ್ತು, ಆದರೆ ಅದನ್ನು ಪೂಜೆಗೆ ಬಳಸಿದರೆ ಅದಕ್ಕೊಂದು ಸಾಂಸ್ಕೃತಿಕ ಮಹತ್ವ ದಕ್ಕಿಬಿಡುತ್ತದೆ. ಇಲ್ಲಿನ ಪಾತ್ರಗಳಿಗೆ ಯಾರಿಗೂ ಯಾವ ನಿರ್ದಿಷ್ಟವಾದ ಬಯಕೆಗಳಿಲ್ಲ- ಬದುಕಿನ ತೀವ್ರತೆಗೆ ಎದೆಯೊಡ್ಡಿ ನಿಲ್ಲುವ ಛಲವನ್ನು ಬಿಟ್ಟು. ರಘು ಇವತ್ತಿನ ಲೇಖಕ ಅವರ ನೆನಪುಗಳಲ್ಲಿ ಉಳಿದ ಸಂಗತಿಗಳ ಜೊತೆಗೆ ಇವತ್ತನ್ನು ಇಡುವ ತುರ್ತು ಕೂಡಾ ಅವರಿಗೆ ಇದೆ. ಆದ್ದರಿಂದಲೇ ‘ಏಡಿ ಅಮ್ಮಯ್ಯ’ದ ಕಥೆಯ ಜೊತೆಗೆ ‘ಸ್ಕೇರಿ ಹೌಸ್’ಥರದ ಇವತ್ತಿನ ಕಥೆಯನ್ನೂ, ‘ಗಿಡವೊಂದು ಮರವಾದ ಕಥೆ’ಯಲ್ಲಿ ಶಿಕ್ಷಣದ ದಿಕ್ಕುಗಳನ್ನೂ ‘ಮುಲ್ಲಾ ಸಾಹೇಬ್ ಮತ್ತು ಪಾಂಡುರಂಗ’ ಕಥೆಯಲ್ಲಿ ಧರ್ಮಯುದ್ಧಗಳನ್ನು ಮೀರಿದ ಮಾನವ ಸ್ಥಿತಿಯನ್ನು ಸಂಬಂಧಗಳ ಬಂಧಕ್ಕೆ ತಂದು ಕೂರಿಸುತ್ತಾರೆ. ಪುರಾಣವೂ, ವಾಸ್ತವವೂ ಆಗುವ ಇಲ್ಲಿನ ಕಥೆಗಳು ಕಾಡುಹಣ್ಣುಗಳಿಂದ ನಾಡಿನ ಹಣ್ಣಿನ ಕಡೆಗೂ ವಾಲಿದಂತೆ, ನಾಗರೀಕತೆಯ ನಯನಾಜೂಕುಗಳನ್ನು ತಿರಸ್ಕರಿಸುವ ನಿರ್ದಿಷ್ಟ ಪಯಣವನ್ನು ದಾಖಲಿಸುತ್ತವೆ. ನಿರ್ದಿಷ್ಟ ಭಾವ ಜಗತ್ತಿನ ಒಳಗಿನಿಂದ ಹುಟ್ಟಿಕೊಂಡಿರುವ ಈ ಕಥೆಗಳ ಒಟ್ಟಂದದಲ್ಲಿ ಬಾಲ್ಯಕಾಲದ ರುಚಿಯನ್ನು ಪ್ರಾದೇಶಿಕ ವಿವರಗಳ ಮೂಲಕವೂ ಆಧುನಿಕವಾದ ಸಂಗತಿಗಳನ್ನು ವಿಸಂಗತವಾದ ಸಂಗತಿಗಳ ಜೊತೆಗೂ ಹಿಡಿಯಲೆಳೆಸುತ್ತಾರೆ.
ಇದು ರಘುನಂದನ್‌ರ ಮೊದಲ ಕಥಾ ಸಂಕಲನ. ಆದರೆ ಕಥೆ ಹೇಳುವುದು ಇವರಿಗೆ ಮೊದಲನೆಯದಲ್ಲ. ಭಿನ್ನವಾದ ಪ್ರಕಾರದಲ್ಲಿ ಕಥೆ ಹೇಳುವ ಪ್ರಯತ್ನವನ್ನು ಇಲ್ಲಿ ಮಾಡಿದ್ದಾರೆ. ಬೇಲೂರು ರಘುನಂದನ್ ಅವರ ಕಥನ ಜಗತ್ತು ತನ್ನದೇ ಆದ ಅನನ್ಯ ನೆಲೆಯಲ್ಲಿ ಕನ್ನಡ ಕಥಾಲೋಕವನ್ನು ವಿಸ್ತರಿಸಿದೆ. ಈ ಕಥೆಗಳು ತಮ್ಮ ದಟ್ಟವಾದ ವಿವರಗಳಲ್ಲಿ ಓದುಗನನ್ನು ಪರಿಣಾಮಕಾರಿಯಾಗಿ ತಲುಪುತ್ತವೆ ಎಂದರೆ ಅತಿಶಯೋಕ್ತಿಯಲ್ಲ.
-ಪಿ. ಚಂದ್ರಿಕಾ

Specification

Writer Information

Weight0.25 kg
AuthorsBeluru Raghunandan

Customer Reviews

Reviews

There are no reviews yet.

Be the first to review “ಅಪ್ಪ ಕಾಣೆಯಾಗಿದ್ದಾನೆ | Appa Kaaneyagiddane”

Your email address will not be published. Required fields are marked *