ಸವಾಲುಗಳ ನಡುವೆ ಶಿಕ್ಷಣ – ಭಾಗ 2 | Savalugala Naduve Shikshana (vol – 2)

Publisher : Amulya Pustaka
ISBN : 978-81-999361-4-0
Publication Date : 2026
Edition : 1st
No of Pages : 192

ಶಿಕ್ಷಣದ ವಿವಿಧ ಆಯಾಮಗಳನ್ನು ಸಮಾಜಶಾಸ್ತ್ರೀಯ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಲು ಒಂದು ಅತ್ಯುತ್ತಮ ಕೃತಿ ಶ್ರೇಣಿ ‘ಸವಾಲುಗಳ ನಡುವೆ ಶಿಕ್ಷಣ

Original price was: ₹250.00.Current price is: ₹225.00.

100 in stock

100 in stock

Description

ಅಂತರಾಷ್ಟ್ರೀಯ ಸಮಾಜ ಶಾಸ್ತ್ರಜ್ಞ ಅಮನ್ ಮದಾನ್ ಅವರು ಬರೆದಿರುವ ಈ ಎರಡು ಭಾಗಗಳ ಪುಸ್ತಕವು ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಹೊಸ ದೃಷ್ಟಿಕೋನದಿಂದ ನೋಡಲು ನಮಗೆ ಸಹಾಯ ಮಾಡುತ್ತದೆ. ಸಮಾಜ ಮತ್ತು ಶಿಕ್ಷಣದ ನಡುವಿನ ಸಂಬಂಧ, ಶಾಲಾ ವ್ಯವಸ್ಥೆಯಲ್ಲಿರುವ ಸವಾಲುಗಳು ಮತ್ತು ಶೈಕ್ಷಣಿಕ ಸುಧಾರಣೆಗಳ ಕುರಿತು ಇಲ್ಲಿ ಗಹನವಾಗಿ ಚರ್ಚಿಸಲಾಗಿದೆ. ಶಿಕ್ಷಕರು, ಶಿಕ್ಷಣ ಕ್ಷೇತ್ರದಲ್ಲಿ ಆಸಕ್ತಿಯಿರುವವರು, ಸಮಾಜಶಾಸ್ತ್ರ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಈ ಪುಸ್ತಕಗಳು ಅತ್ಯಂತ ಉಪಯುಕ್ತವಾದ ಮಾಹಿತಿಯನ್ನು ಒದಗಿಸುತ್ತವೆ.
ಈ ಎಲ್ಲ ಲೇಖನಗಳಲ್ಲಿರುವ ಕೇಂದ್ರ ಕಾಳಜಿಗಳೆಂದರೆ ಆಧುನಿಕ ಸಂಕೀರ್ಣ ಸಮಾಜದಲ್ಲಿ ಶಿಕ್ಷಣವು ಪಡೆದುಕೊಳ್ಳುತ್ತಿರುವ ಸ್ವರೂಪ, ಬಂಡವಾಳಶಾಹಿ ಮತ್ತು ಸರಕು ವಿನಿಮಯದಿಂದ ಶಿಕ್ಷಣವನ್ನು ನೋಡುತ್ತಿರುವ ಕ್ರಮಗಳು. ಹಾಗೆಯೇ ಅಧಿಕಾರಶಾಹಿ
(bureaucratization) ಮತ್ತು ವೈಚಾರೀಕರಣದ (rationalization) ಬೆಳವಣಿಗೆಯಲ್ಲಿ ಶಿಕ್ಷಣದ ಗ್ರಹಿಕೆಗಳೇನು ಎಂಬುದಾಗಿದೆ. ಈ ಅಂಶಗಳು ಶಿಕ್ಷಣದ ಮೇಲೆ ಬೀರಿದ ಪರಿಣಾಮವನ್ನು ಇಲ್ಲಿನ ಲೇಖನಗಳು ಪರಿಶೀಲಿಸುತ್ತವೆ. ಜೊತೆಗೆ ಶಿಕ್ಷಣಕ್ಕೆ ಇವು ತಂದಿರುವ ಸವಾಲುಗಳನ್ನು ವಿವರಿಸುವಾಗ, ಈ ಪುಸ್ತಕದ ಎರಡೂ ಭಾಗಗಳು ಯಾವುದೇ ಐಡಿಯಾಲಜಿಕಲ್ ನಿಲುವನ್ನು ನಮ್ಮ ಮೇಲೆ ಹೇರುವುದಿಲ್ಲ. ಬದಲಾಗಿ, ಇವುಗಳ ಕಾರಣ- ಪರಿಣಾಮ ಮತ್ತು ಇವನ್ನು ಎದುರಿಸಲು ಜನರು ಕಂಡುಕೊಳ್ಳುತ್ತಿರುವ ವಿಭಿನ್ನ ರೀತಿಯ ಪರಿಹಾರಗಳನ್ನು ಪರ್ಯಾಲೋಚಿಸಲು ಪ್ರಯತ್ನಿಸುತ್ತವೆ.
ಈ ಪುಸ್ತಕಗಳು ಸಮಾಜಶಾಸ್ತ್ರದ ನೆಲೆಯಿಂದ ಪ್ರಸ್ತುತ ಭಾರತದ ಶಿಕ್ಷಣವನ್ನು ಕುರಿತ ವಿಚಾರಗಳನ್ನು ಓದುಗರ ಮುಂದೆ ಇಡುವುದಷ್ಟೇ ಅಲ್ಲದೆ, ಶಿಕ್ಷಣವನ್ನು ಸಾಮಾಜಿಕ ಆಯಾಮದಲ್ಲಿ ಇಟ್ಟು ನೋಡುವ ಅಗತ್ಯ ಮತ್ತು ಉಪಯುಕ್ತತೆಯನ್ನು ಮನಗಾಣಿಸುತ್ತವೆ.
ನಮ್ಮ ಕಾಲದಲ್ಲಿ ನಡೆಯುತ್ತಿರುವ ಬದಲಾವಣೆಗಳು ಶಿಕ್ಷಣಕ್ಕೆ ಹೊಸ ಸವಾಲುಗಳನ್ನು ತಂದೊಡ್ಡಿವೆ. ಅನೇಕ ಬದಲಾವಣೆಗಳು ಹಳೆಯ ರೀತಿ-ನೀತಿಗಳನ್ನು ಪ್ರಶ್ನಿಸುತ್ತವೆ; ಕೆಲವು ಬದಲಾವಣೆಗಳು ಹೊಸ ಸಮಸ್ಯೆಗಳನ್ನೂ ಉಂಟುಮಾಡುತ್ತಿವೆ. ಈ ಪುಸ್ತಕಗಳು ಇಂತಹ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ಓದುಗರಿಗೆ ನೆರವಾಗುತ್ತವೆ. ಮುಖ್ಯವಾಗಿ, ನಮ್ಮ
ದೇಶ ಮತ್ತು ಜಗತ್ತನ್ನು ರೂಪಿಸುತ್ತಿರುವ ಪ್ರಮುಖ ಬದಲಾವಣೆಗಳನ್ನು ಓದುಗರು ಗ್ರಹಿಸುವಂತೆ ಮಾಡುವುದು ಇವುಗಳ ಉದ್ದೇಶ. ಈ ಬದಲಾವಣೆಗಳನ್ನು ಶಿಕ್ಷಣದ ದೃಷ್ಟಿಯಿಂದ ಚರ್ಚಿಸಲಾಗಿದೆ- ಅವು ಶಿಕ್ಷಣವನ್ನು ಹೇಗೆ ಪ್ರಭಾವಿಸಿವೆ ಮತ್ತು ಭಾರತದಲ್ಲಿಯೂ ಇತರ ದೇಶಗಳಲ್ಲಿಯೂ ಶಿಕ್ಷಣಕ್ಕೆ ಯಾವ ಹೊಸ ಸವಾಲುಗಳನ್ನು ತಂದಿವೆ ಎಂಬುದನ್ನು ವಿವರಿಸಲಾಗಿದೆ.
-(ಸಂಪಾದಕರ ಮಾತುಗಳಿಂದ)

Specification

Writer Information

Weight0.25 kg
AuthorsAmman Madan

Customer Reviews

Reviews

There are no reviews yet.

Be the first to review “ಸವಾಲುಗಳ ನಡುವೆ ಶಿಕ್ಷಣ – ಭಾಗ 2 | Savalugala Naduve Shikshana (vol – 2)”

Your email address will not be published. Required fields are marked *