ಜೈಲು ಕತೆಗಳು | Jilu Kategalu
₹170.00
ನಮಗೊಂದು ಸೊಸೆ ಬೇಕು! | Namagondu Sose Beku!
₹200.00 Original price was: ₹200.00.₹180.00Current price is: ₹180.00.
ಓದುವವರೆಲ್ಲ ಓದುಗರಲ್ಲ! ಹಾಗಾದರೆ? | Oduvavarella Odugaralla Hagadare?
Publisher :
Amulya Pustaka
ISBN :
978-81-982263-3-4
Publication Date :
2024
Edition :
1st
No of Pages :
192
ಓದುವ ವ್ಯಾಮೋಹ ಹಾಗೂ ಓದುವ ವಿಧಿ ವಿಧಾನಗಳನ್ನು ಕುರಿತ ಗಂಭೀರ, ತುಂಟ, ವಿನಯಪೂರ್ವಕ ಬರಹಗಳು..
₹250.00 Original price was: ₹250.00.₹225.00Current price is: ₹225.00.
100 in stock
100 in stock
Description
ಇಂಗ್ಲೀಷಿನಲ್ಲಿ ಪುಸ್ತಕವೊಂದಿದೆ “How to read a film?” ಎಂದು. ಸಿನಿಮಾವನ್ನ ಯಾವ ರೀತಿ ಗ್ರಹಿಸಬೇಕೆಂಬ ಅದ್ಭುತ ಒಳನೋಟವಿರುವ ಪುಸ್ತಕ.
ಸಿನಿಮಾದಷ್ಟೇ ಸಶಕ್ತ ಸೃಜನಶೀಲ ಕಲೆ ಮತ್ತು ಉದ್ಯಮವಾಗಿರುವ ಸಾಹಿತ್ಯದಲ್ಲಿ “ಓದೋದು ಹೇಗೆ? ಓದು ಯಾಕೆ?” ಎಂಬೆಲ್ಲ ಪ್ರಶ್ನೆ ಇಟ್ಟುಕೊಂಡು ಕನ್ನಡದಲ್ಲಿ ಪುಸ್ತಕ ಬರಬೇಕಿತ್ತು ಅದಕ್ಕೆ ಉತ್ತರವೆಂಬಂತೆ ಈ ಪುಸ್ತಕ.
ಬಾಯಿಗೆ ಬಂದಂತೆ ಎಲ್ಲೊ ಕೂತು ಸಿನಿಮಾ ಪುಸ್ತಕ ಬದುಕಿನ ಬಗ್ಗೆ ವದರಾಡುವ ಈ ಹೊತ್ತಲ್ಲಿ ಇಂತಹ ಪುಸ್ತಕಗಳು ಖಂಡಿತ ಅಗತ್ಯವಿದೆ
—
ನಾನು ಕುವೆಂಪು ಭೈರಪ್ಪ ಕಾರಂತ ವಸುಧೇಂದ್ರ ರವಿಬೆಳಗೆರೆಯವರನ್ನಷ್ಟೇ ಓದೋದು ಈಗಿನವರ ಬರಹದಲ್ಲಿ ಸೂಪಿಲ್ಲ ಎಂಬ ಹಠವಾದಿ ಓದುಗರು.
ಪುಸ್ತಕ ತೆಗೆದುಕೊಳ್ಳುವಾಗಲೇ ಓದಿ ಬರೀತೀನಿ ಅನ್ನುವ ಓದುಗರು.
ಪುಸ್ತಕದ ಓದು ಪ್ರಿವಿಲೈಜ್ಡ್, ವ್ಯಾಲಿಡೇಶನ್ ಸೀಕಿಂಗ್ ಮಾಡಿಕೊಳ್ಳುತ್ತಿರುವವ ಓದುಗರು.
ನಾನು ಕೆಲವರನ್ನೇ ಓದುವೆ ಕೆಲವರ ಕಡೆ ತಲೆಯೇ ಹಾಕಲ್ಲ ಎನ್ನುವ ಓದುಗರು
ಮಿಸ್ ಮಾಡದೇ ಓದಲೇಬೇಕಾದ ಪುಸ್ತಕವಿದು.
—
ಓದಿನ ಬಗ್ಗೆ ಬರೆಯುತ್ತಲೇ ಬರವಣಿಗೆಯ ಬಗ್ಗೆಯೂ insights ಇದೆ. ಒಬ್ಬ ಓದುಗ ಯಾರು ಎನ್ನುವ ಜೊತೆಗೆ ಒಬ್ಬ ನಿಜವಾದ ಬರಹಗಾರ ಯಾರು ಎನ್ನುವುದು ಕೂಡ ಮುಖ್ಯ.
ಹಾಗೇ ನೋಡಿದರೆ ಓದು ಬರಹ ಪ್ಯಾರೆಲೆಲ್ ಆಗಿರುವ ಹೊತ್ತಿದು.
ಬರಹಗಾರರಿಗೂ ಈ ಪುಸ್ತಕ ಉಪಯೋಗವಾಗುವಷ್ಟು ಚೆಂದ ಇದೆ
—
ಈ ಪುಸ್ತಕದಲ್ಲಿ ಒಪ್ಪುವ ಅಪ್ಪುವ ಅಂಶಗಳಿದ್ದ ಹಾಗೇ ಒಪ್ಪದೇ ಇರಬಹುದಾದ ಅಂಶಗಳು ಇವೆ ಅದನ್ನು ಒಪ್ಪುವೆ ಎನ್ನುವ ಉದಾರತೆಯಲ್ಲೇ ಈ ಪುಸ್ತಕವನ್ನು ಕೆ ಸತ್ಯನಾರಾಯಣ ಬರೆದಿದ್ದಾರೆ.
ಈ ಪುಸ್ತಕ ಓದು ಓದುಗರನ್ನು ತಲೆಯಲ್ಲಿಟ್ಟುಕೊಂಡು ಆ ಧಾಟಿಯಲ್ಲಿ ಇರುವ ಎಷ್ಚೊ ಪುಸ್ತಕ ಓದಿ ಟಿಪ್ಪಣಿ ಮಾಡಿ ಬರೆದ ಪುಸ್ತಕ ಹಾಗಾಗಿ ಈ ಪುಸ್ತಕದಲ್ಲಿ ಒಪ್ಪಿತವಲ್ಲದ ಅಂಶಗಳಿಗೆ ಅವರೇನು ಕಾರಣರಾಗಲ್ಲ
—-
ಮತ್ತೆ ಮತ್ತೆ ಓದಬಹುದಾದ ಅಧ್ಯಾಯಗಳಿವೆ
ಹಸ್ತಪ್ರತಿ ಓದುವುದು ಓದಿಸುವುದು
ಓದುವುದು ಕೂಡ ಪ್ರಾರ್ಥನೆಯಂತೆ
ಓದುಗ ವಿಶ್ವದಲ್ಲೊಂದು ಪುಟ್ಟ ಸ್ಥಾನ
ಕಿಂಡಲ್ ವಿರುದ್ದ ಮಹಾಯುದ್ಧ
ಫೇಸ್ಬುಕ್ ಓದುಗರು
ಓದಿನ ಅಹಂಕಾರ
ಓದಿನಲ್ಲಿ ನಮ್ಮೂರು ನಮ್ಮ ಬೀದಿ
—-
ನನಗೆ ಓದಿನಲ್ಲಿ ನಮ್ಮೂರು ನಮ್ಮ ಬೀದಿ ಅಧ್ಯಾಯ ತುಂಬ ಇಷ್ಟವಾಯ್ತು
—
ಈ ಪುಸ್ತಕದಲ್ಲಿ ಓದು ಬರಹವೇ ಓದುಗ ಬರಹಗಾರರೇ ದೊಡ್ಡದು ಎನ್ನುವ ಬಕೇಟು ಓದುಗ ಬರಹಗಾರರ ಜನಪ್ರಿಯ ಸಾಹಿತಿಗಳ ಕಿವಿಹಿಂಡುವ ಕೆಲಸ ತುಂಬ ನಡೆದಿದೆ ತುಂಬ ಖುಷಿ ಆಯ್ತು ಓದುವಾಗ.
—
ಹೊಸ ತರದ ಓದು.
ನಮ್ಮ ಓದು ಎತ್ತ ಸಾಗಿದೆ ಸಾಗುತ್ತಿದೆ
ಎಂದು ತಿಳಿದುಕೊಳ್ಳುವ ಆಸಕ್ತರು ಖಂಡಿತ ಓದಬಹುದು
Customer Reviews
Be the first to review “ಓದುವವರೆಲ್ಲ ಓದುಗರಲ್ಲ! ಹಾಗಾದರೆ? | Oduvavarella Odugaralla Hagadare?” Cancel reply




















Political | ರಾಜಕೀಯ










Reviews
There are no reviews yet.