ಕಾಡು ಹುಡುಗನ ಹಾಡು ಪಾಡು | Kaadu Hudugana Haadu Paadu

Publisher : Amulya Pustaka
ISBN : 978-81-964691-4-6
Publication Date : 2024
Edition : 3rd
No of Pages : 120

ಕೆಲವು ಕೃತಿಗಳು ನಮಗೆ ತಿಳಿವಳಿಕೆಯನ್ನು ದಾಟಿಸುತ್ತವೆ, ಆದರೆ ಈ ಪುಸ್ತಕವು ಓದುಗನನ್ನು ಭೌತಿಕ ಪ್ರಪಂಚದಿಂದ ಬಿಡಿಸಿ ಕಾಡಿನ ನಿಗೂಢ ಸತ್ಯಗಳ ಲೋಕದಲ್ಲಿ ನಿಲ್ಲಿಸುತ್ತದೆ. ಇದು ಕೇವಲ ಲೇಖಕರ ಅನುಭವಗಳ ಸಂಕಲನವಲ್ಲ; ಇದು ಕಾಡಿನ ಒಡಲ ಕಿಚ್ಚು, ಮಲೆಮಹದೇಶ್ವರ ಬೆಟ್ಟದ ಸಾಲುಗಳ ನಡುವಿನ ಮನುಷ್ಯರ ಕಣ್ಣೀರು ಮತ್ತು ಪ್ರಕೃತಿಯ ಕ್ರೌರ್ಯ-ಸೌಂದರ್ಯಗಳ ನಡುವಿನ ಸಂಘರ್ಷದ ಜೀವಂತ ದಾಖಲೆ.

Original price was: ₹150.00.Current price is: ₹135.00.

100 in stock

100 in stock

Description

ಈ ಕೃತಿಯ ಕೇಂದ್ರಬಿಂದು ಕಾಡಂಚಿನ ಜನರ ಬದುಕು. ಅದರಲ್ಲೂ ವಿಶೇಷವಾಗಿ, ಕಾಡುಗಳ್ಳ ವೀರಪ್ಪನ್ ಅಟ್ಟಹಾಸ ಮತ್ತು ಅವನನ್ನು ಹಿಡಿಯಲು ಹೊರಟ ವಿಶೇಷ ಕಾರ್ಯಪಡೆ (STF) ಕಾರ್ಯಾಚರಣೆಯ ನಡುವೆ ಸಿಲುಕಿ ನಲುಗಿದ ಮುಗ್ಧ ಜನರ ಕಥೆಗಳು ಇಲ್ಲಿವೆ. ಲೇಖಕರು ಪತ್ರಕರ್ತರಾಗಿ ಕಂಡ ಸತ್ಯಗಳು ಇಲ್ಲಿ ಸಾಹಿತ್ಯದ ಸ್ಪರ್ಶ ಪಡೆದು ಓದುಗರ ಹೃದಯ ತಟ್ಟುತ್ತವೆ. ಕಾಡಿನ ದಾರಿಗಳು ಎಷ್ಟು ಅಂಕುಡೊಂಕೋ, ಅಲ್ಲಿನ ಜನರ ಬದುಕು ಅಷ್ಟೇ ಸಂಕೀರ್ಣ ಎಂಬುದು ಪ್ರತಿ ಪುಟದಲ್ಲೂ ಸಾಬೀತಾಗುತ್ತದೆ.
ಪುಸ್ತಕದಲ್ಲಿ ಕಾಡಿನ ವ್ಯಾಪ್ತಿಯಲ್ಲಿ ಹಸುಗಳನ್ನು ಸಾಕಲು ಮಾಡಿಕೊಂಡಿದ್ದ ದೊಡ್ಡಿಯ ಜೀವನದ ಬಗ್ಗೆ ಒಂದು ಅದ್ಭುತ ಅಧ್ಯಾಯವಿದೆ. ಒಂದು ಮಡಕೆ ಹಾಲಿಗೆ ಉಪ್ಪು ಖಾರ ಹಾಕಿ ಕಾಯಿಸಿ, ರಾಗಿ ಹಿಟ್ಟು ಉದುರಿಸಿ, ಕಾರೇ ಸೊಪ್ಪನ್ನ ಬೇಯಿಸಿಕೊಂಡು ಅದರೊಳಗೆ ಹಾಕಿ ರುಚಿಕರವಾದ “ಹಾಲುಳಿ” ಸಿದ್ಧಮಾಡುತ್ತಿದ್ದ ವಿವರಣೆಗಳು ಓದುಗರ ಬಾಯಲ್ಲಿ ನೀರೂರಿಸುತ್ತವೆ.
ಸೀಗೆಸೊಪ್ಪು, ಸಳ್ಳೆಸೊಪ್ಪು, ಗುಳಕಾಯಿಗಳಿಂದ ಮಾಡಿಟ್ಟಿದ್ದ ಸಾಂಬಾರ್‌ಗಳ ಬಗ್ಗೆ ಓದುತ್ತಿದ್ದರೆ ನಮ್ಮ ಹಳ್ಳಿಯ ಸೊಗಡು ನೆನಪಾಗುತ್ತದೆ. ಅದರ ಜೊತೆಗೆ, ತಮ್ಮ ದೈನಂದಿನ ಅಗತ್ಯ ವಸ್ತುಗಳನ್ನು ವೀರಪ್ಪನ್ ಸಹಚರರಿಂದ, STF ಅವರಿಂದ ಹಾಗೂ ಪಕ್ಕದ ಹಳ್ಳಿಯ ಪುಂಡರಿಂದ ಕಾದುಕೊಳ್ಳಬೇಕಾದ ಸಂಕಷ್ಟದ ಬಗ್ಗೆ ಲೇಖಕರು ಮಾರ್ಮಿಕವಾಗಿ ಬರೆಯುತ್ತಾ ಹೋಗುತ್ತಾರೆ. ಇಡೀ ಅಧ್ಯಾಯ ಓದಿದ ಮೇಲೆ ಕನಿಷ್ಠ ಪಕ್ಷ ಒಂದೆರೆಡು ದಿನವಾದರೂ ಈ ನಗರದ ಯಾಂತ್ರಿಕ ಜೀವನದಿಂದ ಮುಕ್ತರಾಗಿ ಅಂತಹ ದೊಡ್ಡಿಯ ಬದುಕನ್ನ ಬದುಕಬೇಕು ಎಂದು ಆಸೆಯಾಗುತ್ತದೆ.
2025ರ ಫೆಬ್ರವರಿಯಲ್ಲಿ ನಾನು, ಸುಮ ಮತ್ತು ಪ್ರೀತಮ್ ‘ನಾಗಮಲೆ’ ಚಾರಣಕ್ಕೆ ಹೋಗಿದ್ದೆವು. ಸ್ವಾಮಿ ಪೊನ್ನಾಚಿ ಅವರು ಪುಸ್ತಕದಲ್ಲಿ ವಿವರಿಸಿದ ಕಾಡಂಚಿನ ಬವಣೆಯನ್ನು ನಾವು ಅಲ್ಲಿ ಕಣ್ಣಾರೆ ಕಂಡೆವು. ಇಂದಿನ ಆಧುನಿಕ ಯುಗದಲ್ಲೂ ಸರಿಯಾದ ರಸ್ತೆ ಇಲ್ಲದೆ, ನೀರಿಲ್ಲದೆ, ವಿದ್ಯುತ್ ಸಂಪರ್ಕವೂ ಇಲ್ಲದೆ ನಾಗರಿಕ ಸಮಾಜದ ಯಾವುದೇ ಸೌಲಭ್ಯಗಳಿಲ್ಲದೆ ಬದುಕುವ ಜನರ ಸ್ಥಿತಿ ಕಂಡು ಮನಸ್ಸು ಮರುಗಿತು.
ಅಲ್ಲಿಗೆ ಬರುವ ಚಾರಣಿಗರನ್ನೇ ನಂಬಿ ಬದುಕುವ ಎಷ್ಟೋ ಕುಟುಂಬಗಳು ಇಂದು ಸಂಕಷ್ಟದಲ್ಲಿವೆ. ಪ್ರಾಣಿಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಜೀಪುಗಳ ಓಡಾಟಕ್ಕೆ ನಿರ್ಬಂಧ ಹೇರಿರುವುದು ಒಂದೆಡೆ ಸರಿಯೆನಿಸಿದರೂ, ಮತ್ತೊಂದೆಡೆ ಅದೇ ಜೀಪು ನಂಬಿ ಬದುಕುತ್ತಿದ್ದ ಚಾಲಕರು ಕೆಲಸವಿಲ್ಲದೆ ಸೊರಗಿದ್ದಾರೆ. ಅಂದು ನಮಗೆ ಅತ್ಯಂತ ಪ್ರೀತಿಯಿಂದ ಮುದ್ದೆ, ಅನ್ನ, ಉಪ್ಸಾರು ಮಾಡಿ ಬಡಿಸಿದ ಮಹದೇವಮ್ಮ ಮತ್ತು ಅವರ ಪತಿಯನ್ನು ನಾವು ಇಂದಿಗೂ ನೆನೆಯುತ್ತೇವೆ. ಅವರ ಆತಿಥ್ಯದಲ್ಲಿದ್ದ ಆ ಅಕ್ಕರೆ ಮತ್ತು ಅವರ ಬದುಕಿನ ಹೋರಾಟ ನಮಗೆ ಈ ಪುಸ್ತಕದ ಪುಟಗಳನ್ನು ನೆನಪಿಸಿದವು.
ಮೊದಲೇ ನನಗೆ ಹಳ್ಳಿಗಳು, ಅಲ್ಲಿನ ಪರಿಸರ, ಹೊಲ ಗದ್ದೆ, ಕೆರೆ, ಜಾತ್ರೆ, ದೊಡ್ಡಿ, ಬಾವಿಯಲ್ಲಿನ ಮೀನುಗಳೆಂದರೆ ಪ್ರಾಣ. ಅಂತಹ ಪರಿಸರಕ್ಕೆ ಮನಸೋಲುವ ನನಗೆ ಸ್ವಾಮಿ ಪೊನ್ನಾಚಿ ಅವರ ಈ ಪುಸ್ತಕದ ಲೇಖನಗಳು ಭೂಮಿಗೆ ಬಿದ್ದ ಮೊದಲ ಮಳೆಯಂತೆ ತಂಪನ್ನೆರೆದಿದೆ. ಈ ಪುಸ್ತಕವನ್ನು ಓದುತ್ತಿದ್ದರೆ ಕಾಡಿನ ಮಣ್ಣಿನ ವಾಸನೆ ಬರುತ್ತದೆ, ಅಲ್ಲಿನ ಮೌನವೊಂದು ಕಾಡುತ್ತದೆ.
ನಾಗರಿಕ ಪ್ರಪಂಚದ ನಮಗೆ ಕಾಡು ಎಂದರೆ ಕೇವಲ ಪ್ರವಾಸ ಅಥವಾ ಹಸಿರು. ಆದರೆ ಈ ಕೃತಿಯು ಆ ಹಸಿರಿನ ನಡುವೆ ಅಡಗಿರುವ ಬಡತನ, ಅನ್ಯಾಯ ಮತ್ತು ಅಸ್ತಿತ್ವಕ್ಕಾಗಿ ನಡೆಯುವ ಹೋರಾಟವನ್ನು ನಮಗೆ ಪರಿಚಯಿಸುತ್ತದೆ. ಪತ್ರಕರ್ತನೊಬ್ಬನ ವರದಿಗಾರಿಕೆ ಸಾಹಿತ್ಯದ ಘನತೆಯನ್ನು ಪಡೆದಾಗ ಇಂತಹ ಶ್ರೇಷ್ಠ ಕೃತಿ ಮೂಡಿಬರಲು ಸಾಧ್ಯ. ಸ್ವಾಮಿ ಪೊನ್ನಾಚಿ ಅವರ ಇನ್ನುಳಿದ ಪುಸ್ತಕಗಳನ್ನು ಓದಲೇ ಬೇಕೆನ್ನುವ ತುಡಿತ ಈಗ ನನ್ನಲ್ಲಿ ಶುರುವಾಗಿದೆ.
ಇಂತಹ ಅದ್ಭುತ ಕೃತಿಯನ್ನು ಸುಂದರವಾಗಿ ಪ್ರಕಟಿಸಿದ ಅಮೂಲ್ಯ ಪುಸ್ತಕ ಪ್ರಕಾಶನದ Krishna Chengadi ಅವರಿಗೆ ಅಭಿನಂದನೆಗಳು. ಮನುಷ್ಯ ಸಂಬಂಧಗಳನ್ನು ಮತ್ತು ಪ್ರಕೃತಿಯ ಒಳದನಿಯನ್ನು ಪ್ರೀತಿಸುವ ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕವಿದು.
– ಶ್ರೀಧರ್ ಡಿ.ಸಿ.

Specification

Writer Information

Weight0.25 kg
AuthorsSwamy Ponnachi

Customer Reviews

Reviews

There are no reviews yet.

Be the first to review “ಕಾಡು ಹುಡುಗನ ಹಾಡು ಪಾಡು | Kaadu Hudugana Haadu Paadu”

Your email address will not be published. Required fields are marked *