ಅಭೀರ | Abheera
– ಇದು ರಕ್ತದಲ್ಲಿ ಬರೆದ ಪ್ರೇಮ ಕಥೆ
ಇದು ಅತೀತ ಕಾದಂಬರಿಯ ಮುಂದುವರಿದ ಭಾಗ. ಅತೀತ ಕಾದಂಬರಿಯನ್ನ ಓದಿದ ಮೇಲೆಯೇ ಈ ಕಾದಂಬರಿಯನ್ನ ಓದುವುದು ಉತ್ತಮ.
-ಅರ್ಜುನ್ ದೇವಾಲದಕೆರೆ
₹325.00 Original price was: ₹325.00.₹300.00Current price is: ₹300.00.
20 in stock
20 in stock
Description
ಹಾಗೆ ಕರ್ನಾಟಕ ಮತ್ತು ಆಂಧ್ರದ ಗಡಿ ಜಿಲ್ಲೆ ಬಳ್ಳಾರಿಯ ನಿಲ್ಲೂರಿನಿಂದ ಅನಾಮತ್ತಾಗಿ ಹೊರಡಿಸಿಕೊಂಡು ಬಂದ ಲೀಲಾಳನ್ನ, ಅದೆಷ್ಟೋ ದಿನಗಳ ಕಾಲ ನಡೆಸಿಕೊಂಡೇ ಹೊರಟಿದ್ದ ಹರಿಣಾಕ್ಷ. ಅವಳು ಕೂಡ ಯಾವುದೋ ಟ್ರಾನ್ಸ್ ಗೆ ಒಳಗಾದವಳಂತೆ, ಅವನ ಹಿಂದೆಯೇ ತಾಯಿಯನ್ನ ಹಿಂಬಾಲಿಸುವ ಮಗುವಿನಂತೆ ಹೆಜ್ಜೆಗೆ ಹೆಜ್ಜೆ ಸೇರಿಸಿ ನಡೆಯುತ್ತಿದ್ದಳು. ಹರಿಣಾಕ್ಷ ಬಿಳಿ ಪಂಚೆ ಬಿಳಿ ಅಂಗಿಯನ್ನ ಧರಿಸಿ, ತನ್ನ ಇಳೆ ಬೀಳುವ ನೀರು ಕಾಣದ ಕೂದಲನ್ನ ಮಡಚಿ ತಲೆಗೆ ಕಟ್ಟಿದ್ದ ಪೇಟದಲ್ಲಿ ಅಡಗಿಸಿದ್ದ. ಉದ್ದ ಗಡ್ಡವನ್ನ ನೀಟಾಗಿ ಅರ್ಧಕ್ಕೆ ಕತ್ತರಿಸಿ ಶಿವಾಜಿ ಮಹಾರಾಜರ ಗಡ್ಡದಂತೆ ಮಾಡಿಕೊಂಡಿದ್ದ. ಜರಿ ಲಂಗ ತೊಟ್ಟಿದ್ದ ಲೀಲಾ ಅವನನ್ನ ಹಿಂಬಾಲಿಸುತ್ತಿದ್ದರೆ, ಗಂಡ ಹೆಂಡತಿ ಯಾವುದೋ ಹಬ್ಬಕ್ಕೋ, ಜಾತ್ರೆಗೋ, ಮದುವೆಗೋ ಹೋಗಿ ಮನೆಗೆ ಹಿಂದುರುಗುತ್ತಿರುವಂತೆ ಭಾಸವಾಗುತಿತ್ತು ನೋಡುಗರಿಗೆ. ಲೀಲಾಳನ್ನ ಹಾಗೆ ಅನಾಮತ್ತು ಹೊರಡಿಸಿಕೊಂಡು ಹೊರಟ ಮೊದಲ ದಿನ, ತಲೆ ಸುಡುವ ಬಿಸಿಲನ್ನೂ ಲೆಕ್ಕಿಸದೆ ಸಂಜೆಯವರೆಗು ಎಲ್ಲಿಯೂ ನಿಲ್ಲದೆ ನಡಿಸಿದ್ದ ಹರಿಣಾಕ್ಷ. ಮಾರ್ಗ ಮಧ್ಯೆ ಒಂದೇ ಒಂದು ಮಾತಿಲ್ಲ. ಮನಸ್ಸು ಟ್ರಾನ್ಸ್ ನಲ್ಲಿದ್ದರು, ಹೊಟ್ಟೆ ಕೇಳಬೇಕಲ್ಲ. ಸಂಜೆಯ ವೇಳೆಗೆ, ಹಸಿದ ಹೊಟ್ಟೆ ನಡಿಗೆಯನ್ನ ಕುಂಠಿತ ಮಾಡಿ, ಕೊನೆಗೊಮ್ಮೆ ದಾರಿಯಲ್ಲಿ ಪ್ರಜ್ಞೆ ತಪ್ಪಿದ್ದಳು ಲೀಲಾ. ಹರಿಣಾಕ್ಷನಿಗೆ ಹಸಿವಿನ ತೊಂದರೆಯಿರಲಿಲ್ಲ. ಅವನು ನೀರಾನ್ನ ತ್ಯಜಿಸಿ ವಾರಗಳೇ ಕಳೆದಿತ್ತು. ಹಸಿವು, ಅವನು ‘ಬಾ’ ಎಂದರೆ ಮಾತ್ರ ಬರುತಿತ್ತು. ಅಘೋರಿಗಳೇ ಹಾಗೆ, ಅವರು ಎಲ್ಲವನ್ನ ಮೀರಿದವರು. ಬೇಕೆಂದರೆ ಬೇಕು, ಬೇಡವೆಂದರೆ ಬೇಡ. ಸರಳ, ಕ್ಷಣಿಕ ಕಾಮದ ಉತ್ತುಂಗದಲ್ಲಿ ಲೈಂಗಿಕವಾಗಿ ಸಕ್ರಿಯರಾಗಿದ್ದಾಗಲೂ ಗಂಟೆಗಟ್ಟಲೆ ಸ್ಖಲನವನ್ನ ಮುಂದೂಡುವ ತಾಕತ್ತಿರುವ ಸಾಧಕರಿಗೆ, ಹಸಿವೊಂದು ಲೆಕ್ಕವೇ!? ಸಂಜೆಯ ವೇಳೆಗೆ ಹರಿಣಾಕ್ಷನಿಗೆ ‘ಇವಳು ನನ್ನ ಹಾಗೆ ಅಘೋರಿಯಲ್ಲ ಇವಳಿಗೆ ಹಸಿವು, ಬಾಯಾರಿಕೆಗಳಾಗುತ್ತವೆ’ ಎನ್ನುವ ಸತ್ಯದ ನೆನಪಾಗಿ, ರಸ್ತೆ ಬದಿಯ ಅಂಗಡಿಯೊಂದರಲ್ಲಿ ಒಂದಷ್ಟು ಬಿಸ್ಕತ್, ನೀರು ಕೊಡಿಸಿದ್ದ. ಸ್ವಲ್ಪ ಚೇತರಿಸಿಕೊಂಡವಳನ್ನ ಮತ್ತೆ ನಡೆಸಿಕೊಂಡು ಹೊರಟಿದ್ದ. ಮುಂದಿನ ಪೂರ್ಣ ಹುಣ್ಣಿಮೆಯ ದಿನದ ಒಳಗೆ ಗುವಾಹಟಿಯ ಕಾಮಾಕ್ಯ ದೇವಸ್ಥಾನ ತಲುಪುವುದಷ್ಟೇ ಅವನ ಸದ್ಯದ ಗುರಿ…












Political | ರಾಜಕೀಯ










Reviews
There are no reviews yet.