ಬೇರು ಕಾಂಡ ಚಿಗುರು | Beru Kanda Chiguru
₹500.00 Original price was: ₹500.00.₹450.00Current price is: ₹450.00.
ತೆರೆದಷ್ಟೂ ಅರಿವು | Teredashtu Arivu
Publisher :
Amulya Pustaka
ISBN :
978-81-990602-4-1
Publication Date :
2025
Edition :
1st
No of Pages :
272
ಹಲವು ತೋಟಗಳ ಹೂವುಗಳ ಬಣ್ಣ, ವಾಸನೆಯಂತೆ ಇಲ್ಲಿಯ ಲೇಖನಗಳು ವೈವಿಧ್ಯತೆಯನ್ನು ಹೊಂದಿವೆ. ಓದಿದ ಮೇಲೆ ಕಣ್ಣು ಮುಚ್ಚಿ ಆಘ್ರಾಣಿಸುವ ಹಾಗೆ ಇವುಗಳ ಚೆಲುವು. ಜೀವನದ ವೈವಿಧ್ಯಮಯ, ಸಂಕೀರ್ಣತೆಯ ಹುಡುಕಾಟವನ್ನು ಕಲಾ ಸೌಂದರ್ಯದಲ್ಲಿ ಬಚ್ಚಿಡುವ, ಬಿಚ್ಚಿಡುವ ಲೇಖಕರ ಭಾಷಾ ಆಟ ಬಹು ದೊಡ್ಡದು, ಅವರ ಚೈತನ್ಯವನ್ನೇ ಬೇಡುವಂಥದ್ದು. ಅದನ್ನು ಹುಡುಕುವುದೂ ಒಂದು ಸೃಜನಶೀಲ ಆಟವೇ. ಇದೂ ಕೂಡಾ ಒಂದು ಕಲೆಯೇ. ಅಂಥ ಹುಡುಕಾಟದ ವಿವಿಧ ದಾರಿಗಳು ಇಲ್ಲಿಯ ಲೇಖನಗಳ ಜೀವನಾಡಿಗಳಾಗಿವೆ. ಕೆ.ಎಸ್.ನ ಅವರಿಂದ ಹಿಡಿದು ಲಕ್ಕೂರು ಆನಂದ ಇವರ ತನಕ ವಿವಿಧ ಸಾಹಿತ್ಯ ಕೃತಿಗಳ ಸೂಕ್ಷ್ಮ ಓದನ್ನು ಮಾಡಿರುವ ಗೀತಾ ಅವರ ಸೃಜನಶೀಲ ವಿಮರ್ಶೆಯು ವಸಂತದ ಗಾಳಿಯಂತೆ ನವ-ನವೀನವಾಗಿದೆ.
– ಬಸವರಾಜ ಕಲ್ಗುಡಿ
₹350.00 Original price was: ₹350.00.₹315.00Current price is: ₹315.00.
100 in stock
100 in stock
Description
ಡಾ. ಗೀತಾ ವಸಂತ (Geeta Vasant) ಅವರು ತಮ್ಮ ಮೊದಲ ಮಾತುಗಳಲ್ಲಿ ಅವರನ್ನು ಆಗಾಗ ಆವಾಹಿಸಿಕೊಂಡ ವಿಮರ್ಶೆಯ ಪ್ರಕಾರದ ಬಗ್ಗೆ ಹೇಳುತ್ತ, ವಿಮರ್ಶೆಯು, “[…] ಮೈಯೆಲ್ಲಾ ಕಣ್ಣಾಗಿ ಎಚ್ಚರದಿಂದ ‘ಕಾಣುವ’ ಪ್ರಕ್ರಿಯೆ. ಇನ್ನೊಬ್ಬರ ನೋಟವನ್ನು ಬಗೆದು ನೋಡುವ ಈ ಕೆಲಸ ನಮ್ಮನ್ನೂ ಸೂಕ್ಷ್ಮಗೊಳಿಸುತ್ತ ಹಿಗ್ಗಿಸುತ್ತ ಹೋಗುವುದರಲ್ಲಿ ಸಂಶಯವಿಲ್ಲ. ನೋಟವು ‘ನೋಟಕ್ರಮ’ವಾಗುವ, ಕಾಣುವಿಕೆಯು ಕಾಣ್ಕೆಯ ಬೆರಗಲ್ಲಿ ಕರಗುವ ಈ ದಾರಿಯಲ್ಲಿ ತೆರೆದಷ್ಟೂ ಅರಿವಿದೆ,” ಎನ್ನುತ್ತಾರೆ. ಇಲ್ಲಿಯ ಬರಹಗಳು ವಿಮರ್ಶೆಯ ಪ್ರಕಾರಕ್ಕೆ ಸೇರಿದಂಥವೇ. ಆದರೆ, ರೂಢಿಗತ ಅರ್ಥದಲ್ಲಿಯಲ್ಲ. ಕೃತಿಯೊಂದನ್ನು ಕುರಿತು ಆಳವಾಗಿ ಧೇನಿಸುತ್ತ, ಅಲ್ಲಲ್ಲಿ ವಿರಮಿಸುತ್ತ, ಅದು ಕರೆದೊಯ್ದಲ್ಲಿ ಹೋಗುವ ಸೃಜನಶೀಲ ಹುಡುಕಾಟ. ಅದನ್ನು ವಿಮರ್ಶೆಗೆ ಒಳಪಡಿಸಲೇಬೇಕು ಎಂಬ ಆತುರ ಒತ್ತಾಯಗಳಿಲ್ಲದ ಸಾವಧಾನದ ಓದಿನಲ್ಲಿ ತಮಗೆ ದಕ್ಕಿದ ಹೊಳಹುಗಳನ್ನು ಓದುಗರಿಗೂ ದಾಟಿಸುವ ಮಾದರಿ. ಇಲ್ಲಿ ಲೇಖಕರ ಆಸಕ್ತಿಯಿರುವುದು ಪಾರಂಪರಿಕವಾಗಿ ದತ್ತವಾದ ವಿಮರ್ಶಾ ಸಿದ್ಧಾಂತಗಳ ಚೌಕಟ್ಟಿನಲ್ಲಿ ಒಂದು ಕೃತಿಯನ್ನು ಕಟ್ಟಿಹಾಕಿ ಸುಲಭವಾಗಿ ಕೈಗೆಟಕುವ ಮಾನದಂಡಗಳ ಮೂಲಕ ಅದನ್ನು ಅಳೆದು ಬೆಲೆಕಟ್ಟುವುದರಲ್ಲಲ್ಲ; ಬದಲಿಗೆ, ಅವುಗಳ ಜೊತೆ ನಂಬಿಕೆಯಿಂದ — ಇವು ಗಮನಿಸಬೇಕಾದ ಮಹತ್ವದ ಕೃತಿಗಳೇ ಎಂಬ good faithನಿಂದ — ಒಡನಾಡಿ ಸಂಭ್ರಮಿಸುವುದರಲ್ಲಿದೆ.
ಕುವೆಂಪು, ಬೇಂದ್ರೆಯವರಂಥ “ನವೋದಯದ ಎರಡು ಶಿಖರ”ಗಳನ್ನು ಪ್ರೀತಿ ಗೌರವಗಳಿಂದ ಕಂಡಂತೆಯೇ ಇಂದಿನ ತಲೆಮಾರಿನ ಲಕ್ಕೂರು ಆನಂದ, ರಂಗಮ್ಮ ಹೊದೇಕಲ್, ರಂಗನಾಥ ಕಂಟನಕುಂಟೆ ಮೊದಲಾದವರ ಪುಸ್ತಕಗಳನ್ನೂ ಗಮನಿಸುತ್ತಾರೆ. ಅವನ್ನೂ ಅದೇ ಶ್ರದ್ದೆ ಮತ್ತು ಅಧ್ಯಯನಶೀಲತೆಯಿಂದ ಪರಿಭಾವಿಸಿ ಒಳನೋಟಗಳನ್ನು ಪ್ರಕಟಗೊಳಿಸುತ್ತಾರೆ. ಕಾರ್ನಾಡರ ನಾಟಕಗಳಲ್ಲಿನ ಸತ್ಯದ ಶೋಧನೆ, ಕುವೆಂಪು ಅವರ ವಿಶ್ವಮಾನವ, ಪೂರ್ಣದೃಷ್ಟಿ, ಸರ್ವೋದಯ ಪರಿಕಲ್ಪನೆಗಳು, ಬೇಂದ್ರೆಯವರ ವಿಶ್ವಮೈತ್ರಿ, ‘ಗ್ರಹಗೋಲ ಸಿಂಫನಿ’; ಸವಿತಾ ನಾಗಭೂಷಣರ ಕೃತಿಗಳ lived feminism, ಅಬ್ದುಲ್ ರಶೀದರ ಪರವಶಗೊಳಿಸುವ ಮೋಹಕ ಕಥಾಲೋಕ; ಗುರುಪ್ರಸಾದ್ ಕಂಟಲಗೆರೆಯವರ ಇತ್ತೀಚೆಗಿನ ‘ಅಟ್ರಾಸಿಟಿ’ ಕಾದಂಬರಿಯ critical insider ದೃಷ್ಟಿಕೋನ — ಗೀತಾ ವಸಂತರ ಬರಹಗಳ ಹರಹು ಹಲವಾರು ತಲೆಮಾರು ಮತ್ತು ಸಾಹಿತ್ಯ ಪ್ರಕಾರಗಳನ್ನು ಒಳಗೊಂಡಿದೆ. ಜೊತೆಗೇ, ಗ್ರಹಿಸಿದ್ದನ್ನು ಸೊಗಸಾದ ಆಪ್ತವಾದ ಭಾಷೆಯಲ್ಲಿ ಹಿಡಿದಿಡುತ್ತ ತಮ್ಮ ಸೃಜನಶೀಲ ಹುಡುಕಾಟದಲ್ಲಿ ಓದುಗರೂ ಪಾಲ್ಗೊಳ್ಳುವಂತೆ ಮಾಡುತ್ತಾರೆ.
ಇಂಥ ವಿಮರ್ಶಾ ಲೇಖನಗಳನ್ನು ತಿಳಿಹು ಹೆಚ್ಚಿಸಿಕೊಳ್ಳುವುದಕ್ಕಷ್ಟೇ ಅಲ್ಲದೇ ಓದಿನ ಸಂತೋಷಕ್ಕಾಗಿಯೇ ಓದಬಹುದು. ಎಂದರೆ, ಇಲ್ಲಿ ಲೇಖಕರು ಪರಿಶೀಲಿಸುತ್ತಿರುವ ಕೃತಿಯನ್ನು ನಾವು ಓದಿರದಿದ್ದರೂ ಅದನ್ನು ಕುರಿತಾದ ಬರಹವನ್ನೇ ಅಲಾಯಿದವಾಗಿ ಓದಿ ಏನಾದರೂ ಪಡೆದುಕೊಳ್ಳಬಹುದು. ಹೀಗಾಗಿ, ಈ ಪುಸ್ತಕದ ಬಗ್ಗೆ ಇನ್ನೂ ಹೆಚ್ಚು ಬರೆಯಲು ಹೋಗದೇ ಅದರಲ್ಲಿನ ಬರಹಗಳನ್ನು ಓದಿ ಸುಖಿಸುವುದು ಮತ್ತು ಉಳಿದ ಓದುಗರಿಗೂ ಅದನ್ನೇ ಮಾಡಲು ಹೇಳುವುದು ಹೆಚ್ಚು ಸೂಕ್ತ ಎನ್ನಿಸುತ್ತದೆ.
– ಸಂಕೇತ್ ಪಾಟೀಲ




















Political | ರಾಜಕೀಯ










Reviews
There are no reviews yet.