ಮೊನಾಲೀಸಾ | Monalisa
ಮೊನಾಲೀಸಾ | Monalisa Original price was: ₹175.00.Current price is: ₹165.00.
Back to products
ಗೋಳಿಮರ | Golimara
ಗೋಳಿಮರ | Golimara Original price was: ₹175.00.Current price is: ₹165.00.

ಮಿಲ್ಟ್ರಿ ಟ್ರಂಕು | Miltry Tranku

Publisher : Amulya Pustaka
ISBN : 978-81-959924-1-6
Publication Date : 2022
Edition : 1st
No of Pages : 160

ಒಳ್ಳೆಯ ಕಾದಂಬರಿಯೊಂದರ ರಚನೆಗೆ ಬೇಕಾದ ಎಲ್ಲ ಸಾಮಾಗ್ರಿಗಳೂ ನಿಮ್ಮ ಈ ಹಳೆಯ ಭಾರವಾದ ಟ್ರಂಕಿನಲ್ಲಿವೆ. ಅವನ್ನೆಲ್ಲ ಸೂಕ್ತರೀತಿಯಲ್ಲಿ ಜೋಡಿಸುವ ಕೆಲಸ ಆಗಬೇಕಾಗಿದೆ ಅಷ್ಟೆ.ಆ ಕೆಲಸವನ್ನು ನೀವು ಮುಂದೆ ಮಾಡುವಿರೆಂದು ನಾನು ಭಾವಿಸಿದ್ದೇನೆ.

Original price was: ₹185.00.Current price is: ₹175.00.

50 in stock

50 in stock

Description

ಪ್ರಿಯ ಲಕ್ಷ್ಮಣ್,ನಮಸ್ಕಾರ…
ನಿಮ್ಮ ಮಿಲಿಟ್ರಿ ಟ್ರಂಕನ್ನು ಓಪನ್ ಮಾಡಿ ನೋಡಿದೆ.ಅಥವಾ ಅದು ನಿಮ್ಮ ಮನೆಯ ಅಟ್ಟದ ಮೇಲಿರುವ ಲ್ಯಾವೀ ಗಂಟೂ ಆಗಿರಬಹುದು!ಓಹ್!ಎಷ್ಟೊಂದು ನೆನಪುಗಳ ರಂಗ್ ಬಿರಂಗೀ ಸಾಮಾನುಗಳು ಅದರೊಳಗೆ!ಒಂದೊಂದನ್ನೇ ಎತ್ತಿ ನೋಡುವುದರಲ್ಲಿ ಒಂದು ದಿನವೇ ಕಳೆದುಹೋಯಿತು!ಅಥಣಿಯ ಮೋಳೆಯಿಂದ ಬೆಂಗಳೂರಿನಂತಹ ನಗರದ ನಡುವೆ ನನ್ನನ್ನು ಸುತ್ತಾಡಿಸಿತು.ಕಳೆದು ಹೋಗುತ್ತಿರುವ ನಮ್ಮ ಲವಲವಿಕೆಯ ಹಳ್ಳಿಗಳು ಹೇಗೆ ನಿಧಾನಕ್ಕೆ ಪೇಟೆಯ ಸ್ವಭಾವವನ್ನು ಅಳವಡಿಸಿಕೊಳ್ಳುತ್ತಿವೆ ಎಂಬುದರ ಸೂಕ್ಷ್ಮಗಳನ್ನೂ ಹೊಳೆಯಿಸುತ್ತಾ ಹೋಯಿತು…
ಇದು ಒಂದು ರೀತಿಯಲ್ಲಿ ನಿಮ್ಮ ಬದುಕಿನ ಅನುಭವ ಕಥನವೆನ್ನಬಹುದು. ಜತೆಗೇ ನಿಮ್ಮ ಮೋಳೆ ಎಂಬ ಹಳ್ಳಿಯ ಹಾಗೂ ಅಂತಹ ಅನೇಕ ಭಾರತದ ಹಳ್ಳಿಗಳ ಕಥನವೂ ಹೌದು. ಪುಟ್ಟ ಪುಟ್ಟ ಬರೆಹಗಳ ಮೂಲಕ ನಿಮ್ಮ ಬಾಲ್ಯದ,ಹಾಗೂ ಸ್ವಲ್ಪ ಹರೆಯದ ಸಮೃದ್ಧ ನೆನಪುಗಳನ್ನು-ಅವು ಕಳೆದು ಹೋಗದ ಹಾಗೆ,ನೆನಪಾದಂತೆಲ್ಲ ದಾಖಲಿಸಿ ಇಟ್ಟ ಹಾಗೆ ಈ ಬರೆಹಗಳಿವೆ.ಇಷ್ಟೊಂದು ಸಮೃದ್ಧ ಅನುಭವಗಳ ನಡುವೆ ಏಕಸೂತ್ರವೊಂದು ಇದ್ದಿದ್ದರೆ ಇನ್ನೂ ಚೆನ್ನಾಗಿರ್ತಿತ್ತು ಅಂತಲೂ ಅನಿಸಿತು. ಒಳ್ಳೆಯ ಕಾದಂಬರಿಯೊಂದರ ರಚನೆಗೆ ಬೇಕಾದ ಎಲ್ಲ ಸಾಮಾಗ್ರಿಗಳೂ ನಿಮ್ಮ ಈ ಹಳೆಯ ಭಾರವಾದ ಟ್ರಂಕಿನಲ್ಲಿವೆ. ಅವನ್ನೆಲ್ಲ ಸೂಕ್ತರೀತಿಯಲ್ಲಿ ಜೋಡಿಸುವ ಕೆಲಸ ಆಗಬೇಕಾಗಿದೆ ಅಷ್ಟೆ.ಆ ಕೆಲಸವನ್ನು ನೀವು ಮುಂದೆ ಮಾಡುವಿರೆಂದು ನಾನು ಭಾವಿಸಿದ್ದೇನೆ.
ಓದಿ ತುಂಬಾ ಖುಶಿಪಟ್ಟೆ.ಇದು ತನಕ ನೋಡಿರದ ಮೋಳೆಯೆಂಬ ಹಳ್ಳಿಯ ಜನರ,ಪರಿಸರದ ಬದುಕಿನ ಅನೇಕ ಆಯಾಮಗಳ,ಪುಟ್ಟ ಪುಟ್ಟ ಖುಶಿಗಳ ಪರಿಚಯ ಮಾಡಿಕೊಂಡೆ.ಈ ಮೂಲಕ ದಕ್ಷಿಣದ ಚೊಕ್ಕಾಡಿಗೂ ಉತ್ತರದ ಮೋಳೆಗೂ ನಡುವೆ ಚುಂಬಕಗಾಳಿಯೊಂದು ಸುಳಿದಾಡಿದ ಅನುಭವ ನನಗಾಯಿತು. ಇದಕ್ಕಾಗಿ ನಿಮಗೆ ನಮಸ್ಕಾರ.
ನಿಮ್ಮ ,
ಸುಬ್ರಾಯ ಚೊಕ್ಕಾಡಿ.

Specification

Writer Information

Weight0.30 kg
AuthorsDr Lakshman V A

Customer Reviews

Reviews

There are no reviews yet.

Be the first to review “ಮಿಲ್ಟ್ರಿ ಟ್ರಂಕು | Miltry Tranku”

Your email address will not be published. Required fields are marked *