ಗಂಗವ್ವ ಗಂಗಾಮಾಯಿ | Gangavva Gangamee
₹150.00 Original price was: ₹150.00.₹135.00Current price is: ₹135.00.
20 in stock
20 in stock
Description
ಮೊಕಾಶಿಯವರ ಮೊಟ್ಟ ಮೊದಲನೆಯ ಕಾದಂಬರಿ ಹಾಗೂ ಸಂಪ್ರದಾಯ ಬದ್ಧ ಕಾದಂಬರಿ. ಈ ಕೃತಿಯ ಪ್ರಮುಖ ಆಕರ್ಷಣೆ ಯೆಂದರೆ ಉತ್ತರ ಕರ್ನಾಟಕದ ಭಾಷೆ. ಮೊದ ಮೊದಲು ಓದಿ ಅರ್ಥ ಮಾಡಿಕೊಳ್ಳಲು ಕಷ್ಟ ಎನಿಸಿದರು ಕಾದಂಬರಿ ಓದಿ ಮುಗಿಸುವ ಹೊತ್ತಿಗೆ ಭಾಷೆಯ ರುಚಿ ಹಿಡಿಸಿತು. ಇನ್ನೊಂದು ಪ್ರಮುಖ ಆಕರ್ಷಣೆಯೆಂದರೆ ಇಲ್ಲಿನ ಪಾತ್ರ ಸೃಷ್ಟಿ. ಮಗನ ಸಲುವಾಗಿ ಗಂಗೆಯನ್ನು ತಿರಸ್ಕರಿಸಿ ತಮ್ಮನ ದ್ವೇಷವನ್ನು ಕಟ್ಟಿಕೊಂಡು ಕೊನೆಯವರೆಗೂ ಹೋರಾಡುವ ಗಂಗ ಅವ್ವನ ಛಲ, ಅವಳ ತಮ್ಮ ರಾಘಾಪ್ಪ ನ ಅಹಂಭಾವ, ಮೋಸ ಜಾಣತನ ,ತನ್ನನ್ನು ಕೇಳದೆ ಆಸ್ತಿ ಮಾರಿದ ನೆಂದ ಸಿಟ್ಟಿಗೆ ತಂದೆಯ ಶ್ರಾದ್ಧ ವನ್ನು ಕೂಡ ಮಾಡದ ದೇಸಾಯರ ಆತ್ಮ ಗೌರವ , ಪ್ರತಿ ಕ್ಷಣಕ್ಕೆ ಸೋತರು ಬಾಳನ್ನು ಹದ ಗೊಳಿಸಲು ಯತ್ನಿಸುವ ಕಿಟ್ಟಿಯ ಹಾರ್ದಿಕತೆ, ತನ್ನ ಗಂಡನ ಗೌರವ ರಕ್ಷಣೆಗಾಗಿ ತನ್ನ ಜೀವನ ವನ್ನೇ ತ್ಯಾಗ ಮಾಡಿದ ಮೆಹಬೂಬಾಜಾನ್ ಳು, ಹೀಗೆ ಕಿಟ್ಟಿಯ ಹೆಂಡತಿ ರತ್ನ, ಅವಳ ತಂಗಿ ಶಾಂತ, ಅಮ್ಮ ಚಂಪಾ ,ದೇಸಾಯರ ಮಗ ವಸಂತ ಎಲ್ಲ ಪಾತ್ರಗಳೂ ನಮ್ಮ ನಿಜ ಜೀವನಕ್ಕೆ ತುಂಬಾ ಹತ್ತಿರವಾದಂತಹ ಪಾತ್ರಗಳು. ಒಟ್ಟಿನಲ್ಲಿ ಭಾರತದ 14 ರಾಷ್ಟ್ರೀಯ ಭಾಷೆಗಳಲ್ಲಿ ಅನುವಾದ ಗೊಂಡಿರುವ ವಿಶಿಷ್ಠ ಕಾದಂಬರಿ ಹಾಗೂ ಚಲನ ಚಿತ್ರವಾಗಿ ಅನೇಕ ಪ್ರಶಸ್ತಿ ಗಳನ್ನು ಪಡೆದ ಅದ್ಭುತ ಕಾದಂಬರಿ…
– ಭವ್ಯ ಶಶಿಕಿರಣ್




















Political | ರಾಜಕೀಯ










Reviews
There are no reviews yet.