ಓದುವವರೆಲ್ಲ ಓದುಗರಲ್ಲ! ಹಾಗಾದರೆ? | Oduvavarella Odugaralla Hagadare?
₹250.00 Original price was: ₹250.00.₹225.00Current price is: ₹225.00.
ನಮಗೊಂದು ಸೊಸೆ ಬೇಕು! | Namagondu Sose Beku!
Publisher :
Amulya Pustaka
ISBN :
978-81-990602-5-8
Publication Date :
2025
Edition :
1st
No of Pages :
160
ಒಂದು ಅರೆವಾಸ್ತವ ಮತ್ತು ಅತಿ ಸಮಕಾಲೀನ ಕೌಟುಂಬಿಕ ಕಾದಂಬರಿ
₹200.00 Original price was: ₹200.00.₹180.00Current price is: ₹180.00.
100 in stock
100 in stock
Description
ಮೈಸೂರು ಮಲ್ಲಿಗೆಯ ಪದುಮಳಿಂದ ಹಿಡಿದು ಗಗನಯಾತ್ರಿ ಕಲ್ಪನಾ ಚಾವ್ಲವರೆಗಿನ ಎಲ್ಲಾ ಗುಣಗಳನ್ನು ಮೈಗೂಡಿಸಿಕೊಂಡ ಹೆಣ್ಣು ನಮ್ಮ ಸೊಸೆಯಾಗಬೇಕೆಂದು ಹುಡುಗರ ಅಹಂಕಾರಿ ತಂದೆ ತಾಯಂದಿರು ಡಿಮ್ಯಾಂಡ್ ಮಾಡುವ ಕಾಲದಿಂದ ನಮಗೊಂದು ಸೊಸೆ ಬೇಕು ಎಂಬ ಕಾಲಘಟ್ಟಕ್ಕೆ ಸಮಾಜ ಬಂದು ನಿಂತಿದೆ. ಎಲ್ಲಾ ಭವ ಬಂಧನಗಳನ್ನು ವ್ಯಾವಹಾರಿಕವಾಗಿ ನೋಡುವ ಮಾಲಿನಿ ಅಷ್ಟೇ ಸಲೀಸಾಗಿ ಬಂಧನವನ್ನು ಮುಕ್ತಗೊಳಿಸಿಕೊಳ್ಳುವ ಕ್ರಿಯೆ ಇನ್ನೇನು ಸುಖಜೀವನದ ಪರಾಕಾಷ್ಟೆಯಲ್ಲಿದ್ದೀವಿ ಅಂದುಕೊಂಡಿದ್ದ ಅನಿತಾ- ಶ್ರೀಕಂಠಮೂರ್ತಿಯವರನ್ನು ಅಸಹಾಯಕತೆಯ ಕೂಪಕ್ಕೆ ತಳ್ಳಿ, ಗಂಡ ಸತೀಶನನ್ನು ಬೆಪ್ಪನನ್ನಾಗಿ ಮಾಡುವ ಮನೋಭಾವ, ಆಧುನಿಕ ಆರ್ಥಿಕ ಸ್ವತಂತ್ರ ಹೆಣ್ಣುಗಳ ಮನೋಭಾವವೇ ಆಗಿದೆ. ಒಟ್ಟಿನಲ್ಲಿ ಮಾಲಿನಿಯ ಪ್ರಯೋಗಕ್ಕೆ ಸತೀಶ ಬಲಿಪಶು. ಪುರುಷ ಸಹಾಯವಿಲ್ಲದೆ ಮಗು ಪಡೆಯಲು ತೀರ್ಮಾನಿಸಿ, ಮಗು ಪಡೆದ ಮೇಲೂ ಪಡುವ ಪಾಡು , ಕೊನೆಯಲ್ಲಿ ಮಾಲಿನಿ ಸೋತಳೇನೋ ಅನ್ನುವಷ್ಟು ಧ್ವನಿ ಕ್ಷೀಣವಾಗಿದೆ. ಸದ್ದಿಲ್ಲದೆ ಸಂಸಾರಕ್ಕೆ ಬಂದು, ಸುಖ ಸಂಸಾರ ನಡೆಸಿ, ಮಗು ಪಡೆದು ಮನೆತನವನ್ನು ಮುಂದುವರಿಸುವ ಮಾಲಿನಿ ತಂಗಿ ಶಾಲಿನಿ ಅಪೇಕ್ಷಿತ ಸಮಾಜದ ನೈಜ ಪ್ರತಿನಿಧಿಯಾಗಿ ಕಾಣಿಸಿದ್ದಾಳೆ.
ಪ್ರಸ್ತುತ ಸಮಾಜದಲ್ಲಿ ಮದುವೆಗಾಗಿ ಹೆಣ್ಣುಗಂಡುಗಳ ಹುಡುಕಾಟ, ಸಂದರ್ಶನ , ಮಾತುಕತೆ ಎಲ್ಲಾ ವ್ಯಾಪಾರಿ ವ್ಯವಹಾರವಾಗಿದ್ದು, ಮದುವೆಯ ನಂತರವೂ ಸಾಂಸಾರಿಕ ಜೀವನ ವ್ಯವಹಾರದ ಚೌಕಟ್ಟನ್ನು ಮೀರದಿರುವುದು ವಿಪರ್ಯಾಸವೇ ಸರಿ. ಸುಶಿಕ್ಷಿತೆ, ವೈಚಾರಿಕ ಮನೋಭಾವದ ಹೆಣ್ಣು ಮಾಲಿನಿ, ಮೇಲ್ಕಾಣುವಿಕೆಗೆ ಸಂಸಾರದಲ್ಲಿ ಪ್ರೀತಿ ವಿಶ್ವಾಸಗಳನ್ನು ತೋರಿದರೂ, ಭಾವ ಶೂನ್ಯಳಾಗಿ ಭವ ಬಂಧನದಿಂದ ಸ್ವತಂತ್ರಳಾಗಿ ಹೊರಗೆ ಹೋಗುತ್ತಾಳೆ. ಕುಟುಂಬ, ಸಮಾಜದ ಮೇಲೆ ಇದರಿಂದಾಗುವ ಪರಿಣಾಮಗಳನ್ನು ಲೇಖಕರು ಕಾದಂಬರಿಯಲ್ಲಿ ಸೂಕ್ಷ್ಮವಾಗಿ ತಂದಿದ್ದಾರೆ ಎನ್ನಬಹುದು.
ಲೇಖಕರೇ ಹೇಳಿದಂತೆ ಕಾದಂಬರಿಯ ವಸ್ತು ಅರೆ ವಾಸ್ತವವಾದರೂ, ಪ್ರಸ್ತುತ ಹಾಗೂ ಮುಂಬರುವ ದಿನಗಳಲ್ಲಿ ಸಮಾಜದಲ್ಲಿ ಮಾಲಿನಿಯರೇ ಹೆಚ್ಚಾಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. ವಸ್ತು ಅಪ್ರಸ್ತುತವೆನಿಸಿದರೂ ಲೇಖಕರ ಚಿಂತನೆ ಪ್ರಸ್ತುತ.
– ಎಸ್.ವಿ. ರಂಗನಾಥ ಭಟ್ಟ












Political | ರಾಜಕೀಯ










Reviews
There are no reviews yet.