ಹೋರಾಟದ ಹಾದಿ | Hooratada Haadi
ಹೋರಾಟದ ಹಾದಿ | Hooratada Haadi Original price was: ₹550.00.Current price is: ₹495.00.
Back to products
ಸಾಮಾನ್ಯ ಇಂಗ್ಲಿಷ್ | General English
ಸಾಮಾನ್ಯ ಇಂಗ್ಲಿಷ್ | General English Original price was: ₹360.00.Current price is: ₹324.00.

ತೆರೆದ ಮನ | Tereda Mana

Author : Dr H Narasimhaniah
Publisher : Abhinava
Publication Date : 2025
Edition : 8th
No of Pages : 272

Original price was: ₹300.00.Current price is: ₹270.00.

25 in stock

25 in stock

Description

ನಮ್ಮೆಲ್ಲರ ಪ್ರೀತಿಯ ‘ಎಚ್. ಎನ್.’ ಅವರು ಪವಾಡಗಳನ್ನು ನಂಬುತ್ತಿರಲಿಲ್ಲ. ಆದರೆ, ಅವರ ಬದುಕೇ ಪವಾಡವಾಗಿತ್ತು. ಅದು ಪ್ರತಿಭೆ, ಪರಿಶ್ರಮ ಮತ್ತು ಶ್ರದ್ಧೆಗಳ ತಳಹದಿಯ ಮೇಲೆ ಮೂಡಿದ ಸಾರ್ಥಕ ಶಿಲ್ಪ. ಕೋಲಾರ ಜಿಲ್ಲೆಯ ಕುಗ್ರಾಮವಾದ ಹೊಸೂರಿನಲ್ಲಿ ಹುಟ್ಟಿದ ಅವರು, ಮುಂದೆ ಕರ್ನಾಟಕದ ಪ್ರಮುಖ ಶಿಕ್ಷಣವೇತ್ತರೂ, ಗಾಂಧೀವಾದಿಗಳೂ, ಮಾನವೀಯ ಸಮಾಗ ಸುಧಾರಕರಾಗಿ ಬೆಳೆದರು. ತಮ್ಮ ಬಿಡುವಿರದ ದುಡಿಮೆಯಿಂದ, ನಾಡಿಗೆ ಮಾದರಿಯಾದ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದರು. ಅವರದು ನುಡಿದಂತೆ ನಡೆದ, ನಡೆದಂತೆ ನುಡಿದ ಜೀವನವಾಗಿತ್ತು.

‘ತೆರೆದ ಮನ’ ನರಸಿಂಹಯ್ಯನವರ ವಿಚಾರ, ನೆನಪುಗಳು ಹಾಗೂ ಲಲಿತ ಪ್ರಬಂಧಗಳ ಸಂಕಲನ. ಶಾಲೆ-ಕಾಲೇಜುಗಳಲ್ಲಿ ಕಲಿಯುತ್ತಿರುವ ತರುಣ ತರುಣಿಯರಿಗೆ, ವೈಜ್ಞಾನಿಕ ಮನೋಧರ್ಮ, ವಿಚಾರಶೀಲತೆ, ಜಾತ್ಯಾತೀತತೆ, ಮಾನವೀಯತೆ, ಸಮಾಜಸೇವೆ ಮುಂತಾದ ಮೌಲ್ಯಗಳನ್ನು ಕಲಿಸಲು ಇದಕ್ಕಿಂತ ಉತ್ತಮವಾದ ಮತ್ತೊಂದು ಪುಸ್ತಕ ದೊರೆಯಲಾರದು. ಸರಳವಾದ, ಆದರೆ ಸ್ಪಷ್ಟವಾದ ವೈಚಾರಿಕತೆ ಇಲ್ಲಿನ ಎಲ್ಲ ಲೇಖನಗಳ ಮುಖ್ಯ ಗುಣ. ಆಚರಣೆಗೆ ತರಲಾಗದ ಯಾವ ಉಪದೇಶ, ಅರ್ಥವಾಗದ ಮಾತುಗಳು ಕೂಡ ಇಲ್ಲಿಲ್ಲ.

ಪ್ರವಾಸದ ನೆನಪುಗಳು ಮತ್ತು ಲಲಿತಪ್ರಬಂಧಗಳು ಈ ಕೃತಿಯ ಇನ್ನೊಂದು ಭಾಗ. ಇಲ್ಲಿ ಲೇಖಕರ ಸೃಜನಶೀಲತೆ ಮತ್ತು ಹಾಸ್ಯಪ್ರಜ್ಞೆಗಳಿಗೆ ನಿದರ್ಶನಗಳು ದೊರೆಯುತ್ತವೆ. ಸಂವೇದನಾಶೀಲರು ಇಲ್ಲಿನ ನಗೆಯ ಹಿಂದೆ, ವಿಷಾದದ, ಭ್ರಮ ನಿರಸನದ ಎಳೆಗಳನ್ನು ಗುರುತಿಸಲು ಸಾಧ್ಯ. ಆದರೆ, ಈ ನೋವು-ನಗುಗಳನ್ನು ಮೀರಿ ನಿಲ್ಲುವ ಆಶಾವಾದ ಈ ಬರಹಗಳ ಹಿಂದಿರುವ ಮೂಲಮಂತ್ರ.

ಕನ್ನಡ ವಿಚಾರ ಸಾಹಿತ್ಯಕ್ಕೆ ಇದೊಂದು ಮುಖ್ಯ ಕೊಡುಗೆ. ವಿಚಾರವಾದಿಗಳ ಬೈಬಲ್.

Specification

Writer Information

Weight0.150 kg

Customer Reviews

Reviews

There are no reviews yet.

Be the first to review “ತೆರೆದ ಮನ | Tereda Mana”

Your email address will not be published. Required fields are marked *