ಹೊಂಬಳ್ಳಿ | Homballi
₹150.00 Original price was: ₹150.00.₹135.00Current price is: ₹135.00.
ಜೀವದನಿ | Jeevadani
₹150.00
ಮತ್ತೆ ಮೇಲೇಳುತ್ತೇನೆ | Matte meleluttene
Publisher :
Amulya Pustaka
ISBN :
978-81-969505-8-3
Publication Date :
2024
Edition :
1st
No of Pages :
272
ಈ ಕೃತಿಯನ್ನು ಓದುವಾಗ ಇದು ನಮ್ಮ ನೆಲದ ಏಕಾಂಗಿ ಮಹಿಳಾ ಹೋರಾಟಗಾರ್ತಿಯರ ಕಥೆಗಳಿಗಿಂತ ವಿಭಿನ್ನವಾಗಿ ಇಲ್ಲ ಅನಿಸಲು ಕಾರಣ ಅವಳು ಎದುರಿಸಿದಂಥ ವೈಯಕ್ತಿಕ ಚಾರಿತ್ರ್ಯವಧೆಗಳು. ಇದು ಪ್ರಪಂಚದ ಎಲ್ಲಾ ಗಟ್ಟಿಗಿತ್ತಿಯರು ಎದುರಿಸಿದ ಸಾರ್ವತ್ರಿಕ ಹಾಗೂ ಸಾರ್ವಕಾಲಿಕ ಸವಾಲು. ಯಾವುದಕ್ಕೂ ಮಣಿಯದ ಇಂಥ ಕೆಚ್ಚೆದೆಯ ಹೋರಾಟಕ್ಕೆ ದೃಢವಾದ ಆತ್ಮಸ್ಥೈರ್ಯ ಅಗತ್ಯ ಇದೊಂದು ನಮ್ಮ ನೆಲದ ಹೆಣ್ಣುಮಗಳ ಕಥೆಯೇ ಎಂಬ ಅನಿಸಿಕೆ ಓದುಗರಲ್ಲಿ ಮೂಡಿ ಬಂದರೆ ಅದಕ್ಕೆ ಕಾರಣ ಲೇಖಕಿ ಎಂ. ಆರ್. ಕಮಲ ಅವರ ಸಶಕ್ತವಾದ ಪರಿಣಾಮಕಾರಿಯಾದ ಅನುವಾದವೆನ್ನುವಲ್ಲಿ ಎರಡು ಮಾತಿಲ್ಲ.
₹325.00 Original price was: ₹325.00.₹300.00Current price is: ₹300.00.
100 in stock
100 in stock
Description
ಈ ಕೃತಿಯ ನಾಯಕಿ ಹಾಗೂ ಕೆನ್ಯಾ ದೇಶದ ಸಾಮಾಜಿಕ ಅಭಿವೃದ್ಧಿಯ ಮುಂದಾಳು ,ಮುತ್ಸದ್ದಿ ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ವಂಗಾರಿ ಮಥಾಯ್ ಅವರ ಜೀವನದ ಯಶೋಗಾಥೆಯಾಗಿದೆ. ಹದಿನಾಲ್ಕು ಅಧ್ಯಾಯಗಳಿರುವ ಈ ಕೃತಿಯು ಲೇಖಕಿಯೇ ಹೇಳಿದಂತೆ ವಂಗಾರಿಯ ಬದುಕಿನ ಪುಟಗಳ ಸಂಚಯವೇ ಆಗಿದೆ.
ಮೊದಲ ಮೂರು ಅಧ್ಯಾಯಗಳಲ್ಲಿ ವಂಗಾರಿಯ ಬಾಲ್ಯದ ಜೊತೆಗೆ ಕೆನ್ಯಾದ ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಸ್ಥಿತಿಗತಿಗಳ ಅವಾವರಣವಾಗುತ್ತದೆ. ಅಂದಿನ ಕೆನ್ಯಾದೇಶದ ಮಳೆಗಾಲದ ಸಮೃದ್ಧಿ , ವಸಾಹತುಗಾರರಿಂದಾಗುತ್ತಿದ್ದ ಕೂಲಿ ಜನರ ಶೋಷಣೆ ಹಾಗೂ ಸಾಮಾಜಿಕ ಪಲ್ಲಟಗಳು ನಮ್ಮ ದೇಶಕ್ಕಿಂತ ವಿಭಿನ್ನವಾಗೇನೂ ಇರಲಿಲ್ಲ .ಮಗುವಿನ ಜನನದ ವೇಳೆಯಲ್ಲಿ ನಡೆಯುವ ಆಚರಣೆ ಗಮನಾರ್ಹ. ನಮ್ಮಂತೆ ಅಲ್ಲಿಯೂ ಸಹ ಯುರೋಪಿಯನ್ ಸಂಸ್ಕೃತಿಯ ಪ್ರಭಾವದಿಂದಾಗಿ ಮೂಲ ಸಂಸ್ಕೃತಿಯ ಆಚರಣೆಗಳು ಕಣ್ಮರೆಯಾಗುತ್ತಿವೆ.
ಅತ್ಯಂತ ಕಷ್ಟದ ದಿನಗಳಲ್ಲೂ ತಾಯಿ ತನ್ನನ್ನು ಶಾಲೆಗೆ ಸೇರಿದ್ದಕ್ಕಾಗಿ ವಂಗಾರಿ ಜೀವನದುದ್ದಕ್ಕೂ ಕೃತಜ್ಞಳಾಗಿದ್ದಾಳೆ. ಅಮೇರಿಕಾದಲ್ಲಿ ಉನ್ನತ ಶಿಕ್ಷಣವನ್ನು ಮುಗಿಸಿ ಸುಂದರ ಕನಸುಗಳೊಂದಿಗೆ ಕೆನ್ಯಾಗೆ ಬಂದ ವಂಗಾರಿಗೆ ತನ್ನ ಬದುಕಿನ ಉದ್ದಕ್ಕೂ ಹೋರಾಟವೇ ಕಾದಿತ್ತು. ತನಗೆ ಉದ್ಯೋಗವನ್ನು ನೀಡುವ ಭರವಸೆ ನೀಡಿದ್ದ ವಿ. ವಿ. ಜನಾಂಗ ಹಾಗೂ ಲಿಂಗ ತಾರತಮ್ಯದಿಂದಾಗಿ ಉದ್ಯೋಗವನ್ನು ನೀಡಲಿಲ್ಲ. ಬೇರೆಯ ಉದ್ಯೋಗ ಸಿಕ್ಕರೂ ಸಹಾ ಅಲ್ಲಿ ಲಿಂಗತಾರತಮ್ಯದಿಂದಾಗಿ ಪುರುಷ ಪಕ್ಷಪಾತಿ ಧೋರಣೆಯ ಅಸಮಾನತೆಗಾಗಿ ಅವಳು ಮತ್ತು ಅವಳ ಗೆಳತಿ ಹೋರಾಡಿದಾಗ ಅವರಿಗೆ ಸಿಕ್ಕಗೆಲುವು ಕೇವಲ ವೈಯಕ್ತಿಕವಾಗಿತ್ತೇ ಹೊರತು ಅದು ಸಾಮೂಹಿಕ ಗೆಲುವಾಗಿರಲಿಲ್ಲ. ಕೌಟುಂಬಿಕವಾಗಿ ತಂಗಿಯರಿಬ್ಬರಿಗೆ ನೆಲೆ ನಿಲ್ಲಲು ಜೀವನೋಪಾಯ ಮಾಡಿಕೊಟ್ಟ ಮೇಲೆ ಅವಳ ವಿವಾಹವು ಮ್ವಾಂಗಿ ಮಥಾಯ್ ಅವರೊಡನೆ ನಡೆಯಿತು. ಅವಳ ಹೋರಾಟಗಳಿಗೆ ಮಕ್ಕಳ ಹಾಗೂ ಅವಳ ತಾಯಿಯ ಬೆಂಬಲ ಕಡೆತನಕ ಅವಳಿಗಿತ್ತು ಎಂಬುದು ನೆಮ್ಮದಿಯ ಸಂಗತಿ. ಅವಳ ಹೋರಾಟವನ್ನು ಈ ಕೆಳಗಿನ ಹಂತಗಳಲ್ಲಿ ಗುರುತಿಸಬಹುದು.
೧. ಜಾನುವಾರು ಉದ್ಯಮದ ಅವನತಿಗೆ ಪರಿಹಾರವೋ ಎಂಬಂತೆ ವಂಗಾರಿ ಹುಟ್ಟಿ ಹಾಕಿದ “ಹಸಿರುಪಟ್ಟಿ ಚಳುವಳಿ” ಆರ್ಥಿಕ ಕೊರತೆಯ ನಡುವೆಯೂ ಯಶಸ್ವಿಯಾಗಲು ಬಹು ಮುಖ್ಯ ಕಾರಣವೆಂದರೆ ಅವಳೊಡನೆ ಇದ್ದ ಹೆಣ್ಣುಮಕ್ಕಳು ತಾವು “ಡಿಪ್ಲೋಮಾ ಪದವಿಯಿಲ್ಲದ ಅರಣ್ಯಾಧಿಕಾರಿಗಳು” ಎಂಬುದನ್ನು ಸಾಬೀತು ಪಡಿಸಿದ್ದು.
೨. ಈ ನಡುವೆ ವಂಗಾರಿಗೆ ಗಂಡ ಮ್ವಾಂಗಿಯ ರಾಜಕೀಯ ಧೋರಣೆಗಳು ಹಾಗೂ ವಚನಭ್ರಷ್ಟತೆಯನ್ನು ಕಂಡು ಭ್ರಮ ನಿರಸನ ಆಯಿತು.ವಿವಾಹ ವಿಚ್ಛೇದನದಂತಹ ವೈಯಕ್ತಿಕ ಘಟನೆಯಿಂದಾಗಿ ಅವಳಿಗೆ ಜೈಲುವಾಸದ ಶಿಕ್ಷೆಯಾಗಿದ್ದು ವಿಪರ್ಯಾಸವೆ ಸರಿ. ಇದರಿಂದಾಗಿ ಅವಳ ಚಾರಿತ್ರ್ಯದ ಬಗ್ಗೆ ಅಪಪ್ರಚಾರ ಶುರುವಾಯಿತು.ಪತ್ರಿಕೆಗಳು ಈ ವಿಷಯದಲ್ಲಿ ಮುಖ್ಯಪಾತ್ರ ವಹಿಸಿ ಗಂಡನ ಅಧಿಕಾರವನ್ನು ಪ್ರಶ್ನಿಸುವಂಥ ಉಳಿದ ಶಿಕ್ಷಿತ ಹೆಂಗಸರಿಗೆ ಇದೇ ಗತಿಯೆಂಬ ಸಂದೇಶವನ್ನು ಕೊಟ್ಟವು. ಈ ಪ್ರಕರಣದಲ್ಲಿ ನ್ಯಾಯಾಲಯವು ಪುರುಷ ಪಕ್ಷಪಾತಿಯಾಗಿ ವರ್ತಿಸಿದ್ದು ಒಂದು ದುರಂತವೆನ್ನಬಹುದು. ಲಾಲನೆ ಪೋಷಣೆಗಾಗಿ ಹಣದ ಬಿಕ್ಕಟ್ಟು ಹಾಗೂ ಸ್ಪರ್ಧಿಸಿದ ಚುನಾವಣೆಗಳಲ್ಲಿ ಕಂಡ ಸೋಲುಗಳು ಅವಳನ್ನು ಕುಗ್ಗಿಸುವ ಬದಲು ಅಪಾರ ಶಕ್ತಿಯನ್ನು ನೀಡಿದವು.
೩. ಹಸಿರು ಪಟ್ಟಿ ಚಳುವಳಿಯು ತನ್ನ ನಿರಂತರ ಪ್ರಯತ್ನದ ಫಲವಾಗಿ ಯಶಸ್ವಿಯಾದ ವಂಗಾರಿಗೆ ವಿದೇಶದ ಸಭೆಗಳಲ್ಲಿ ಮತ್ತು ಸಮ್ಮೇಳನಗಳಲ್ಲಿ ಮಾತನಾಡಲು ಆಹ್ವಾನಗಳು ಬಂದವು. ಹಲವರು ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿದರು. ಎಷ್ಟೊಂದು ನೋವು , ನಿರಾಕರಣೆ, ನಿರಾಶೆ, ಪರಿತ್ಯಕ್ತವಾದ ಭಾವಗಳನ್ನು ಅನುಭವಿಸಿದ ನಂತರ ಕೆಲಸಕ್ಕೆ ಸಿಕ್ಕ ಮೌಲ್ಯ ಆದಾಗಿತ್ತು.
೪. ಸಾರ್ವಜನಿಕ ಉಹರು ಉದ್ಯಾನವನದ ರಕ್ಷಣೆಗಾಗಿ ಮಾಡಿದ ಹೋರಾಟದ ಫಲವಾಗಿ ಅವಳು ಅನುಭವಿಸಿದ ವೈಯಕ್ತಿಕ ತೇಜೋವಧೆ, ದೈಹಿಕ ಹಲ್ಲೆ ಹಾಗೂ ಸರ್ಕಾರದ ಕಡೆಯಿಂದ ವಿವಿಧ ರೀತಿಯ ಅಮಾನುಷ ಕಿರುಕುಳಗಳು ಅವಳ ಹೋರಾಟವನ್ನೇನೂ ತಗ್ಗಿಸಲಿಲ್ಲ. ಇಲ್ಲಿ ಅವಳಲ್ಲಿದ್ದ ಆತ್ಮಸ್ಥೈರ್ಯ ಹಾಗೂ ಕಾಲಕ್ರಮೇಣ ಸಿಕ್ಕ ಜನಬಲ ಅವಳ ಹೋರಾಟ ಯಶಸ್ವಿಯಾಗುವಲ್ಲಿ ಮಹತ್ತರ ಪಾತ್ರ ವಹಿಸಿದ್ದು ಸುಳ್ಳಲ್ಲ.ಇದು ಅವಳ ಯಶೋಗಾಥೆಯ ಮೈಲಿಗಲ್ಲು .
೫. ಉಹುರು ಉದ್ದಾನವನದ ರಕ್ಷಣೆ ಹೋರಾಟ ಯಶಸ್ಸು ಕಂಡ ಬಳಿಕ ಹಸಿರು ಪಟ್ಟಿ ಕಾರ್ಯಕರ್ತರಿಗೆ ಸರ್ಕಾರದ ಕಡೆಯಿಂದ ಹತ್ತಿಕ್ಕುವ ಪ್ರಯತ್ನಗಳು ಇನ್ನಿಲ್ಲದಂತೆ ಕಿರುಕುಳ ನೀಡುವ ಮೂಲಕ ಆರಂಭವಾಯಿತು.
೬. ಪ್ರಜಾಪ್ರಭುತ್ವದ ಪರ ರಾಜಕೀಯ ಕೈದಿಗಳನ್ನು ಮತ್ತು ತಮ್ಮ ಮಕ್ಕಳನ್ನು ಸೆರೆವಾಸದಿಂದ ಬಿಡುಗಡೆಗೊಳಿಸಬೇಕು ಎಂಬ ತಾಯಂದಿರಿಗೆ ಒತ್ತಾಸೆಯಾಗಿ ಹೋರಾಟ ಮಾಡಿದ್ದು ಒಂದೆರೆಡು ದಿನ ನಡೆಯಬಹುದೆಂದು ತಿಳಿದಿದ್ದ ಉಪವಾಸ ಸತ್ಯಾಗ್ರಹ ವರ್ಷದವರೆಗೂ ಮುಂದುವರಿದು ರಾಜಕೀಯ ಕೈದಿಗಳ ಬಿಡುಗಡೆಯೊಂದಿಗೆ ಅಂತ್ಯಗೊಂಡಿತು. ಸತ್ಯಾಗ್ರಹಿ ತಾಯಂದಿರು ಒಂದು ಹಂತದಲ್ಲಿ ಸಂಪೂರ್ಣ ನಗ್ನರಾಗಿ ಪೋಲೀಸ್ ಅಧಿಕಾರಿಗಳಿಗೆ ತಮ್ಮ ಎದೆಯನ್ನು ತೋರಿದರು ಅದು ತಾಯಿ ಮಗನ ಸಂಬಂಧವನ್ನು ಹೇಳುವ ಆಫ್ರಿಕಾದ ಶಕ್ತಿಯುತ ಸಂಪ್ರದಾಯವಾಗಿತ್ತು. ಉಪವಾಸ ನಿರತರಾದ ತಾಯಂದಿರಿಗೆ ಆಲ್ ಸೇಂಟ್ಸ್ ಕೆಥೆಡ್ರಲ್ ಆಶ್ರಯ ನೀಡುವ ಮೂಲಕ ಬೆಂಬಲ ಕೊಟ್ಟಿದ್ದು ಗಮನಾರ್ಹ.
೭. ಕೆನ್ಯಾದ ಅಧ್ಯಕ್ಷರು ಬುಡಕಟ್ಟು ಸಂಘರ್ಷಗಳನ್ನು ನಿಲ್ಲಿಸುವವರೆಗೂ ನಡೆದ ಹೋರಾಟ ಹಾಗೂ ಎಂಜಿಜಿ ಮೂಲಕ ರಾಜಕೀಯ ಹೋರಾಟ. ಈ ಹೋರಾಟಗಳಲ್ಲಿ ವಂಗಾರಿಗೆ ಜೀವಭಯದ ಜೊತೆಗೆ ಸರ್ಕಾರದಿಂದ ವಿವಿಧ ರೀತಿಯ ಕಿರುಕುಳಗಳನ್ನು ಎದುರಿಸಬೇಕಾಗಿತ್ತು.
೮. ಕರೂರ ಕಾಡಿನ ನಾಶದ ವಿರುದ್ಧ ಯಶಸ್ವಿ ಹೋರಾಟ
೮. ‘ಎನ್ಎ ಆರ್ ಸಿ ‘ ಎಂಬ ಹೆಸರಿನಲ್ಲಿ ಒಂದುಗೂಡಿಸಿದ ವಿರೋಧ ಪಕ್ಷಗಳು ೨೦೦೩ ದಲ್ಲಿ ಅಧಿಕಾರಕ್ಕೆ ಬಂದವು. ಪರಿಸರ ಮತ್ತು ಸಹಜ ಸಂಪನ್ಮೂಲಗಳ ಸಹಾಯಕ ಮಂತ್ರಿ ಆಗಿ ನೇಮಕಗೊಂಡಳು.
೯. ೨೦೦೪ ರ ಅಕ್ಟೋಬರ್ ೮ ರ ವಂಗಾರಿಗೆ ‘ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆ. ‘
ಪರಿಸರ ನಾಶ ಹಾಗೂ ಇನ್ನಿತರ ಸಾಮಾಜಿಕ ದೌರ್ಜನ್ಯಗಳ ವಿರುದ್ಧ ವಂಗಾರಿಯ ಜೀವಮಾನದ ಹೋರಾಟಕ್ಕೆ ಸಿಕ್ಕಂಥ ಅದ್ಭುತ ಜಯವಾಗಿತ್ತು. ಎಲ್ಲಾ ಅಡೆತಡೆಗಳನ್ನು ಮೀರುತ್ತಾ ಮೇಲೆದ್ದು ಬಂದ ವಂಗಾರಿಯ ಘೋಷಣಾ ವಾಕ್ಯ” ಎದ್ದು ನಿಲ್ಲು ಮತ್ತು ನಡೆ.’ ಈ ವಾಕ್ಯ ಅವಳ ಜೀವನ ಹೋರಾಟದ ಪ್ರತಿಬಿಂಬವಾಗಿದೆ.
ಈ ಕೃತಿಯನ್ನು ಓದುವಾಗ ಇದು ನಮ್ಮ ನೆಲದ ಏಕಾಂಗಿ ಮಹಿಳಾ ಹೋರಾಟಗಾರ್ತಿಯರ ಕಥೆಗಳಿಗಿಂತ ವಿಭಿನ್ನವಾಗಿ ಇಲ್ಲ ಅನಿಸಲು ಕಾರಣ ಅವಳು ಎದುರಿಸಿದಂಥ ವೈಯಕ್ತಿಕ ಚಾರಿತ್ರ್ಯವಧೆಗಳು. ಇದು ಪ್ರಪಂಚದ ಎಲ್ಲಾ ಗಟ್ಟಿಗಿತ್ತಿಯರು ಎದುರಿಸಿದ ಸಾರ್ವತ್ರಿಕ ಹಾಗೂ ಸಾರ್ವಕಾಲಿಕ ಸವಾಲು. ಯಾವುದಕ್ಕೂ ಮಣಿಯದ ಇಂಥ ಕೆಚ್ಚೆದೆಯ ಹೋರಾಟಕ್ಕೆ ದೃಢವಾದ ಆತ್ಮಸ್ಥೈರ್ಯ ಅಗತ್ಯ ಇದೊಂದು ನಮ್ಮ ನೆಲದ ಹೆಣ್ಣುಮಗಳ ಕಥೆಯೇ ಎಂಬ ಅನಿಸಿಕೆ ಓದುಗರಲ್ಲಿ ಮೂಡಿ ಬಂದರೆ ಅದಕ್ಕೆ ಕಾರಣ ಲೇಖಕಿ ಎಂ. ಆರ್. ಕಮಲ ಅವರ ಸಶಕ್ತವಾದ ಪರಿಣಾಮಕಾರಿಯಾದ ಅನುವಾದವೆನ್ನುವಲ್ಲಿ ಎರಡು ಮಾತಿಲ್ಲ.
ಎಂ. ಆರ್. ಅನಸೂಯ




















Political | ರಾಜಕೀಯ










Reviews
There are no reviews yet.