ಮತ್ತೆ ಮೇಲೇಳುತ್ತೇನೆ | Matte meleluttene
₹325.00 Original price was: ₹325.00.₹300.00Current price is: ₹300.00.
ಮಿರ್ಜಾ ಗಾಲಿಬ್ ಕಥನ ಮತ್ತು ಕಾವ್ಯ | Mirza Galib Kathana & Kavya
₹150.00 Original price was: ₹150.00.₹135.00Current price is: ₹135.00.
ಜೀವದನಿ | Jeevadani
Publisher :
Amulya Pustaka
ISBN :
978-81-990602-6-5
Publication Date :
2025
Edition :
2nd
No of Pages :
116
‘ಜೀವದನಿ’ ಎಂಬ ಅತ್ಯುತ್ತಮ ಪುಸ್ತಕ, ಜೀವನ ಪ್ರೀತಿ ಹೆಚ್ಚಿಸುವ, ನಮ್ಮನ್ನು ಚೈತನ್ಯಗೊಳಿಸುವ, ಇನ್ನಷ್ಟು ಕಾಲ ಬದುಕಲು ಉತ್ತೇಜಿಸುವ, ಸ್ತ್ರೀ ಚೈತನ್ಯ ಗೌರವಿಸುವ, ಪ್ರೀತಿಸುವ, ನಿಟ್ಟಿನಲ್ಲಿ ಸಾಗಿ ಬದುಕನ್ನು ಮತ್ತಷ್ಟು ಚಂದಗಾಣಿಸಲು ಸಾಧ್ಯವಾಗುತ್ತದೆ. ಅನುವಾದಕರಾದ ಕಮಲ ಅವರಿಗೂ,ಪ್ರಕಟಿಸಿದ ನಿಮಗೂ ಅನಂತ ಧನ್ಯವಾದಗಳು.
– ಡಿ.ಪಿ. ಸುರೇಶ್ ಕುಮಾರ್
₹150.00
100 in stock
100 in stock
Description
`ಜೀವದನಿ’ಯ ಕೇಳಿ, ಓದಿ
ನಾವೀಗ ದೀರ್ಘ ಕಾಲ ಬದುಕುತ್ತಿದ್ದೇವೆ. ಆದ್ದರಿಂದ ಬದುಕಿನ ಗುರಿಗಳನ್ನು ಗುರುತಿಸಿ ಅರ್ಥವನ್ನು ಕಂಡುಕೊಳ್ಳಬೇಕಿದೆ. ನಮ್ಮ ಸಂಕಟಗಳನ್ನು ಮತ್ತು ನಕಾರಾತ್ಮಕತೆಯನ್ನು ಹೋಗಲಾಡಿಸಿಕೊಳ್ಳಬೇಕು. ಕೆಟ್ಟ ಭಾವನೆಗಳನ್ನು ಬಿಟ್ಟು ಮುಂದೆ ಹೋಗುವುದಕ್ಕಿಂತ ಹೆಚ್ಚಿನ ಶಕ್ತಿ ಅವನ್ನು ಪೋಷಿಸಿಟ್ಟುಕೊಳ್ಳಲು ಬೇಕಾಗುತ್ತದೆ. ಸಂತಸದ ಕೀಲಿಕೈ ಎಂದರೆ ಇತರರನ್ನು ಮತ್ತು ನಮ್ಮನ್ನು ಮನ್ನಿಸಿಕೊಂಡುಬಿಡುವುದು. ಭಯಕ್ಕಿಂತ ಪ್ರೀತಿ ಮಾರ್ಗವನ್ನು ಹಿಡಿದರೆ ನಮ್ಮ ಕೊನೆಯ ದಿನಗಳು ಸುಖಕರವಾಗಿರುತ್ತದೆ. ಪ್ರೀತಿ ಕಾಡಿನ ಗಿಡದಂತೆ ಬೆಳೆಯುವುದಿಲ್ಲ. ಅದಕ್ಕೆ ಒಂದಿಷ್ಟು ಕಾಳಜಿ, ಎಚ್ಚರಿಕೆ ಅಗತ್ಯ.
ಸದಾ ಚಟುವಟಿಕೆಯಿಂದಿರಬೇಕು ಮತ್ತು ಪ್ರತಿ ಮೆದುಳಿನ ಕೋಶವನ್ನು ಉಪಯೋಗಿಸಿಕೊಳ್ಳಬೇಕು. ಆತ್ಮದ ಕಿಡಿ ಹೊಳೆಯುತ್ತಿರಬೇಕು. ಹೋಗುವ ಸಮಯಕ್ಕೆ ಏನನ್ನು ಉಳಿಸಬಾರದು. ಮರೆವು ನನ್ನನ್ನು ಸೋಲಿಸದಿದ್ದರೆ ಸಪ್ಪಗಿನ ಹೆಣ್ಣಾಗಿ ಒಂದೆರಡು ನಾಯಿಗಳೊಂದಿಗೆ ಬದುಕಲು ಇಷ್ಟಪಡುವುದಿಲ್ಲ. ಜಂಪೋಲ್ಸ್ಕಿ ಹೇಳುವಂತೆ ನಾವೆಂದೂ ಭಯದಲ್ಲಿ ಬದುಕಬಾರದು. ಹಾಗಾಗಿ ಭವಿಷ್ಯಕ್ಕೆ ಸಿದ್ಧಳಾಗುತ್ತಿದ್ದೇನೆ.
ವಯಸ್ಸಾದಂತೆ ವಿವೇಕಿಗಳಾಗುತ್ತೇವೆ ಎನ್ನುವುದು ನಿಜವಲ್ಲ. ಅದಕ್ಕೆ ವಿರುದ್ಧವಾಗಿಬಿಡಬಹುದು. ವಿವೇಕಿಗಳಾಗಿರಬೇಕೆಂದು ಬಯಸಿದರೆ ಅಮ್ಮ ಹೇಳಿದಂತೆ ಚಿಕ್ಕವರಾಗಿದ್ದಾಗಿನಿಂದಲೇ ಮನಸ್ಸಿಗೆ ತರಬೇತಿ ನೀಡಬೇಕು. ನನಗೆ ಸಾಧ್ಯವಾಗುವವರೆಗೆ ತೆವಳಿಕೊಂಡಾದರೂ ಅಟ್ಟ ಹತ್ತಿ ಕೂತು ಬರೆಯುತ್ತೇನೆ. ಕತೆಗಳನ್ನು ಹೇಳುತ್ತಾ ದಿನಗಳನ್ನು ಕಳೆಯುತ್ತೇನೆ. ನನಗದು ಸಾಧ್ಯವಾಗುವುದರಿಂದ ನಾನು ವೃದ್ಧಾಪ್ಯವನ್ನು ಗಣಿಸುವುದಿಲ್ಲ.
-ಇಸಬೆಲ್ ಆಯೆಂದೆ




















Political | ರಾಜಕೀಯ










Reviews
There are no reviews yet.