ಮಿರ್ಜಾ ಗಾಲಿಬ್ ಕಥನ ಮತ್ತು ಕಾವ್ಯ | Mirza Galib Kathana & Kavya
ಕವಿ ಮಿರ್ಜಾ ಗಾಲಿಬ್ನದು ಕುತೂಹಲಕಾರಿ ವ್ಯಕ್ತಿತ್ವ; ಉರ್ದು ಮತ್ತು ಪರ್ಶಿಯನ್ ಕವಿಯಾಗಿ ಹೆಸರಾಗಿದ್ದ ಈತನು, ತನ್ನ ಜೀವಿತಾವಧಿಯಲ್ಲಿ ಹೇಳಿದ್ದನಂತೆ : `ನಾನು ಬರೆದ ಕವಿತೆಗಳು ಮುಂದೆ ಇನ್ನಷ್ಟು ಪ್ರಸಿದ್ಧವಾಗುತ್ತವೆ.’ ಏಕೆಂದರೆ, ಅವನ ಕವನಗಳು, ಗದ್ಯ ಮತ್ತು ವ್ಯಕ್ತಿತ್ವವು ಆತನ ಜೀವಿತಾವಧಿಯಲ್ಲಿ ತುಸು ಅವಜ್ಞೆಗೆ, ತುಳಿತಕ್ಕೆ ಒಳಗಾಗಿತ್ತು ಎಂಬ ಅರಿವು ಅವನಿಗಿತ್ತು. ಅದು ಅವನ ತಪ್ಪಲ್ಲ, ಅವನು ವಾಸವಾಗಿದ್ದ ಕಾಲಾವಧಿ ಹಾಗಿತ್ತು.
₹150.00 Original price was: ₹150.00.₹135.00Current price is: ₹135.00.
99 in stock
99 in stock
Description
ಡಾ. ಜಗದೀಶ್ ಕೊಪ್ಪ ಅವರ `ಮಿರ್ಜಾ ಗಾಲಿಬ್’ ಕೃತಿಯು ಮಿರ್ಜಾ ಗಾಲಿಬ್ನ ಕಾವ್ಯವನ್ನು ಪರಿಚಯ ಮಾಡಿಕೊಡುವುದರ ಜತೆಯಲ್ಲೇ, ಆತನ ಬದುಕನ್ನೂ, ಆತ ಬದುಕಿದ್ದ ಸಮಯದ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಯನ್ನೂ ಪರಿಚಯ ಮಾಡಿಕೊಡುತ್ತದೆ. ಕವಿಯೊಬ್ಬನ ಕೃತಿಗಳನ್ನು ಅರ್ಥಮಾಡಿಕೊಳ್ಳಲು, ಓದಲು, ಆತನ ಬದುಕಿದ್ದ ಕಾಲದ ಸನ್ನಿವೇಶವನ್ನೂ ತಿಳಿದುಕೊಳ್ಳಬೇಕು ಎಂಬುದಕ್ಕೆ ಗಾಲಿಬ್ ಕಾವ್ಯ ಒಂದು ಉತ್ತಮ ಉದಾಹರಣೆ. ಗಾಲಿಬ್ನಿಗೆ ಒಂದು ಸ್ಥಿರ ಉದ್ಯೋಗ ಎಂಬುದು ಇರಲಿಲ್ಲ; ರಾಜನ ಆಶ್ರಯದಲ್ಲಿ, ಇತರ ಗಣ್ಯರ ಆಶ್ರಯದಲ್ಲಿ ಆತ ಒಬ್ಬ ಕವಿಯಾಗಿ, ವಿದ್ವಾಂಸನಾಗಿ, ಬರಹಗಾರನಾಗಿ ಗುರುತಿಸಿಕೊಂಡಿದ್ದ. ಮೊಗಲ ರಾಜರು, ನವಾಬರು ಆತನಿಗೆ ಗೌರವ ವೇತನ ನೀಡುತ್ತಿದ್ದರು. ಆದರೆ ಬ್ರಿಟಿಷರು ಮೊಗಲ ಕೊನೆಯ ರಾಜನನ್ನು ಬಂಧಿಸಿದ ನಂತರ, ಈತನ ಬದುಕು ಕಷ್ಟಕ್ಕೆ ಸಿಲುಕಿತು. ಮುಖ್ಯವಾಗಿ ಆತನಿಗೆ ದೊರೆಯುತ್ತಿದ್ದ ಗೌರವಧನ ಮತ್ತು ಪಿಂಚಣಿಗೆ ತೊಂದರೆಯಾಯಿತು. ೧೮೫೭ರಲ್ಲಿ ಬ್ರಿಟಿಷ್ ಸೈನಿಕರು ದೆಹಲಿಯನ್ನು ಆಕ್ರಮಿಸಿ, ಸಿಕ್ಕಸಿಕ್ಕವರನ್ನು ಕೊಂದು ಹಾಕಿದರು; ಕಿರಿದಾಗಿದ್ದ ಬೀದಿಗಳನ್ನು ವಿಸ್ತರಿಸಿ, ಪೊಲೀಸರು ಮತ್ತು ಸೇನೆ ಸುಲಭವಾಗಿ ಅಡ್ಡಾಡುವಂತೆ ಮಾಡಿದರು. ದೆಹಲಿಯು ಉಸಿರುಕಟ್ಟುವ ವಾತಾವರಣದಲ್ಲಿ ಸಿಲುಕಿ ಹೋಯಿತು. “ಸಿಪಾಯಿ ದಂಗೆ ಕ್ರಾಂತಿಯ ಎರಡು ವರ್ಷಗಳ ನಂತರ ದೆಹಲಿಯ ಬದುಕು ಸಹಜ ಸ್ಥಿತಿಗೆ ಬರತೊಡಗಿತು. ೧೮೫೯ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ವಶದಲ್ಲಿದ್ದ ಜುಮ್ಮಾ ಮಸೀದಿಯನ್ನು ಪ್ರಾರ್ಥನೆಗಾಗಿ ಮುಕ್ತಗೊಳಿಸಲಾಯಿತು. ೧೮೬೦ರಲ್ಲಿ ಕಾಲೇಜುಗಳು ಪುನರಾರಂಭಗೊಂಡವು. .. ಕಾಶ್ಮೀರಿ ಗೇಟ್ ಹಿಂಬದಿಯ ರಸ್ತೆಯನ್ನು ವಿಸ್ತಾರಗೊಳಿಸಿ, ಎರಡೂ ಬದಿಗಳಲ್ಲಿ ಬ್ರಿಟಿಷ್ ಅಧಿಕಾರಿಗಳಿಗಾಗಿ ಬಂಗಲೆಗಳನ್ನು ನಿರ್ಮಿಸಲಾಯಿತು. ದಿಲ್ಲಿ ನಗರವು ಭೌತಿಕವಾಗಿ ಹೊಸರೂಪ ಪಡೆಯಿತಾದರೂ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ, ಜನಸಾಮಾನ್ಯರ ಬದುಕು ದುಸ್ತರವಾಯಿತು. ಬ್ರಿಟಿಷರ ನೂತನ ಆಡಳಿತದಲ್ಲಿ ಯಾರೂ ಏನನ್ನೂ ಪ್ರತಿಭಟಿಸಲಾರದ ಅಸಹಾಯಕತೆಯಿಂದ ಎಲ್ಲೆಲ್ಲೂ ಮೌನ ರಾಜ್ಯವಾಳುತ್ತಿರುವ ಪರಿಸ್ಥಿತಿ ಬಂದೊದಗಿತು. ಗಾಲಿಬ್ ದಿಲ್ಲಿಯ ಅಸಹನಿಯ ಮೌನವನ್ನು ಪ್ರಸ್ತಾಪಿಸುತ್ತಾ, `ಎಲ್ಲಾ ವಸ್ತುಗಳು ದುಬಾರಿಯಾಗಿ, ಸಾವೊಂದೇ ಇಲ್ಲಿ ಅಗ್ಗವಾಗಿದೆ’ ಎಂದಿದ್ದಾನೆ. ಬ್ರಿಟಿಷ್ ಸರಕರದ ಪಿಂಚಣಿ ಹಣ ಮತ್ತು ಮೊಘಲ್ ಸಾಮ್ರಾಜ್ಯದ ವೇತನ ಎರಡರಿಂದಲೂ ವಂಚಿತನಾದ ಗಾಲಿಬ್, ಉತ್ತರ ಭಾರತದಲ್ಲಿ ಅತ್ಯುತ್ತಮ ಉರ್ದು ಮತ್ತು ಪರ್ಶಿಯನ್ ಕವಿ, ವಿದ್ವಾಂಸ ಎಂಬ ಹೆಸರನ್ನು ಗಳಿಸಿದ್ದನು. ಸುತ್ತಮುತ್ತಲಿನ ಸಂಸ್ಥಾನಗಳ ನವಾಬರಿಗೂ ಗಾಲಿಬ್ನ ಬಗ್ಗೆ ಗೌರವವಿತ್ತು. ಈ ಗೌರವವೇ ಅವನ ಬದುಕನ್ನು ಕೊನೆಯ ಕಾಲದಲ್ಲಿ ಕೈ ಹಿಡಿಯಿತು.’ (ಪುಟ ೬೧)




















Political | ರಾಜಕೀಯ










Reviews
There are no reviews yet.