ಮಾರ ಮಿಂದನು | Maara Mindanu
ಮಾರ ಮಿಂದನು | Maara Mindanu Original price was: ₹200.00.Current price is: ₹180.00.
Back to products
ಗಾಂಧೀ ಜೋಡಿನ ಮಳಿಗೆ | Gandhi Jodina Malige
ಗಾಂಧೀ ಜೋಡಿನ ಮಳಿಗೆ | Gandhi Jodina Malige Original price was: ₹175.00.Current price is: ₹165.00.

ದೀಡೆಕರೆ ಜಮೀನು | Deedekere Jameenu

Publisher : Amulya Pustaka
ISBN : 978-81-990602-0-3
Publication Date : 2022
Edition : 3rd
No of Pages : 176

“ದೀಡೆಕೆರೆ ಜಮೀನು ” ಕಥೆಯಲ್ಲಿ ರುದ್ರಾಪುರದ ಶಿವನಗೌಡ ಮನೆತನದ ತ್ಯಾಗ ಮತ್ತು ಅವನತಿಯ ಪ್ರಸಂಗದ ದಾಖಲಾಗಿದೆ. ಭೂದಾನ ಚಳುವಳಿಯಿಂದ ಪ್ರೇರಿತರಾದ ಭೀಮನಗೌಡರು ರುದ್ರಾಪುರದ ಬಡವರಿಗೆ ಭೂಮಿಯನ್ನು ಹಂಚುತ್ತಾರೆ. ಆದರೆ,ಅವರ ಮನೆತನದ ಮುಂದಿನ ತಲೆಮಾರಿನ ಪ್ರಕಾಶ ಗೌಡ ಲಾಭದಾಸೆಯೆಂದ ಮೋಸ ಮಾಡಿ ಕಂಪನಿಗೆ ಜಮೀನು ದೋಚಿ ಕೊಡುವುದರಲ್ಲಿ ಗೆಲ್ಲುತ್ತಾನೆ.

Original price was: ₹225.00.Current price is: ₹200.00.

100 in stock

100 in stock

Description

“ದೀಡೆಕರೆ ಜಮೀನು ” ಓದಿ ಕೆಲವು ಕಾರಣಗಳಿಗೆ ಪಟ್ಟ ಸಂತೋಷವನ್ನು ಹಂಚಿಕೊಳ್ಳಲು ಈ ಪತ್ರ.
ಗ್ರಾಮ ಜಗತ್ತಿನ ವರ್ತಮಾನದ ಬಿಕ್ಕಟ್ಟುಗಳನ್ನು ಕಥಾ ವಸ್ತುವನ್ನಾಗಿ ಪಡೆದ ಕೃತಿ ವಿಷಾದದ ಬಿರುಕಿನ ನಡುವೆ ನುಸುಳಿದ ವಿಶ್ವಾಸದ ಬೆಳಕನ್ನು ಬಿಟ್ಟುಕೊಡುವುದರಿಂದ ಬದುಕಿನ ಬಗ್ಗೆ ಕಳೆದುಕೊಳ್ಳಬಹುದಾಗಿದ್ದ ಒಳ್ಳೆಯತನ ಇನ್ನೂ ಕಿಂಚಿತ್ ಉಳಿದಿರುವುದನ್ನು ನಿರೂಪಿಸುತ್ತದೆ. ಭಾರತದ ಬಿಡುಗಡೆ ಯಾವ ಗ್ರಾಮದಲ್ಲಿದೆಯೆಂದು ಗಾಂಧಿ ಹೇಳಿದ್ದರೊ ಅದನ್ನು ಬಿಡುವುದರಲ್ಲೇ ಬಿಡುಗಡೆಯ ಮಾರ್ಗ ಹುಡುಕುತ್ತ ಮರಳಿ ಹೋಗಲಾರದಷ್ಟು ದೂರ ನಡೆದ ಸಮಾಜದಲ್ಲಿ ನಾವು ಅಂಧ ಹೆಜ್ಜೆಗಳನ್ನು ಇಡುತ್ತಿದ್ದೇವೆ. ಸ್ವಾವಲಂಬನೆ ಸ್ವಾರ್ಥವಾಗಿ, ಪರಾವಂಬನೆ ಗುಲಾಮಗಿರಿಯಾಗಿ ಪರಸ್ಪರ ಅವಲಂಬನದ ಸೌಹಾರ್ದದ ಸಮುದಾಯ ಜೀವನ ವಿಧಾನದ ಸಾವಯವ ತತ್ತ್ವವನ್ನು ಕಳಚಿಕೊಂಡ ಸಂಟಗ್ರಸ್ತ ಊರನ್ನು ಈ ಕೃತಿ ನೇರ ನಿರೂಪಣೆಯ ಮೂಲಕ ವಿವರಿಸುತ್ತದೆ.
ಬಹಳ ಹಿಂದಿನ ಮಾತೇನಲ್ಲ 30-40 ವರ್ಷ ಹಿಂದಿನ ಸಮಾಜದಲ್ಲಿ ಕಾಲಕಾಲಕ್ಕೆ ಇದಿರಾಗುತ್ತಿದ್ದ ಜನರ ಸುಖ,ದುಃಖಗಳಿಗೆ ಸ್ಪಂದಿಸಿ ಸಂತೈಸುವ ಹಿರಿಯ ಸಾತ್ವಿಕ ಜೀವಗಳ ದಾರ್ಶನಿಕ ಮಾರ್ಗದರ್ಶನವಿರುತ್ತಿತ್ತು. ನೈತಿಕತೆಯನ್ನು ಬದುಕಿದವರ ವಾಸ್ತವ ಮಾದರಿಗಳಿದ್ದವು. ಈಗ ಅಂತಹ ದಾರ್ಶನಿಕರ ಜಾಗದಲ್ಲಿ ಅಧಿಕಾರಕ್ಕಾಗಿ ವಿಕೃತ ಆಟವಾಡುವ ರಾಜಕೀಯ ಖಳ ನಾಯಕರು ಅಟ್ಟಹಾಸಗೈಯುತ್ತಿದ್ದಾರೆ. ಲೋಭದ ರೂಪಗಳಾದ ಹಣ, ಮಣ್ಣು, ಹೆಣ್ಣು ಭೋಗಿಸುವವರು ಗೆದ್ದಂತೆ ಕಂಡರೂ ಸಣ್ಣ ದನಿಯಲ್ಲಿ ಪ್ರತಿಭಟಿಸುವವರ ನ್ಯಾಯ ಪ್ರಜ್ಞೆ ನಾಳೆಯಾದರೂ ಪುಟಿದೇಳುವ ಸೂಚನೆ ಇಲ್ಲಿನ ಕೆಲ ಕಥೆಗಳಲ್ಲಿವೆ.
“ಆಲದ ಮರ ” ಕಥೆಯ ಸ್ವಾತಂತ್ರ್ಯ ಹೋರಾಟಗಾರ ಪರಪ್ಪಜ್ಜ ಸ್ವಾತಂತ್ರ್ಯ ಹೋರಾಟದ ಸ್ಮಾರಕವಾಗಿ ನಿಂತ ಆಲದ ಮರವನ್ನೂ ಊರಿನ ನ್ಯಾಯ ಸಮಾನತೆಯ ಪಂಚಾಯಿತಿಯ ಕಟ್ಟೆಯನ್ನೂ ಉಳಿಸಿಕೊಳ್ಳಲು ಚೇರ್ ಮನ್ ಪಂಚಾಕ್ಷರಿಯ ವಿರುದ್ಧ ಅಹಿಂಸಾತ್ಮಕ ಹೋರಾಟ ನಡೆಸಿ ಸೋತರೂ ಜನರ ಮಾನಸದಲ್ಲಿ ಬಲಿದಾನದ ಪ್ರತಿಮೆಯಾಗಿ ನಿಲ್ಲುವ ದೃಶ್ಯ ಮುಂದಿನ ಜೀವಪರ ನಡೆಗೆ ಸಂಕೇತವಾಗುತ್ತದೆ.
“ದೀಡೆಕೆರೆ ಜಮೀನು ” ಕಥೆಯಲ್ಲಿ ರುದ್ರಾಪುರದ ಶಿವನಗೌಡ ಮನೆತನದ ತ್ಯಾಗ ಮತ್ತು ಅವನತಿಯ ಪ್ರಸಂಗದ ದಾಖಲಾಗಿದೆ. ಭೂದಾನ ಚಳುವಳಿಯಿಂದ ಪ್ರೇರಿತರಾದ ಭೀಮನಗೌಡರು ರುದ್ರಾಪುರದ ಬಡವರಿಗೆ ಭೂಮಿಯನ್ನು ಹಂಚುತ್ತಾರೆ. ಆದರೆ,ಅವರ ಮನೆತನದ ಮುಂದಿನ ತಲೆಮಾರಿನ ಪ್ರಕಾಶ ಗೌಡ ಲಾಭದಾಸೆಯೆಂದ ಮೋಸ ಮಾಡಿ ಕಂಪನಿಗೆ ಜಮೀನು ದೋಚಿ ಕೊಡುವುದರಲ್ಲಿ ಗೆಲ್ಲುತ್ತಾನೆ. ಆದರೆ,ಕಥೆಯ ಧ್ವನಿಶಕ್ತಿ ಈ ವ್ಯವಹಾರವನ್ನು ಪ್ರತಿಭಟಿಸುವ ಮೌನ ಪ್ರತಿರೋಧವನ್ನು ಓದುಗರ ಅನುಕಂಪ ಮತ್ತು ಕೋಪದಲ್ಲಿ ಉದ್ದೀಪಿಸುತ್ತದೆ.
ಮಲ್ಲಕ್ಕನ ಸಂಕಷ್ಟಗಳಿಗೆ ಆಸರೆಯಾಗಿ ನಿಂತ ಶಿವಯ್ಯಜ್ಜ (ಭಜಿ ಅಂಗಡಿ ಮಲ್ಲಕ್ಕ)ನಂತವರ ನೈತಿಕ ಉಪಸ್ಥಿತಿಯನ್ನು ನಿರೀಕ್ಷಿಸುವಂತೆ ಮಾಡುತ್ತದೆ.
“ದಿವ್ಯ ಮೌನದ ಸಂತ ” ಕಥೆಯ ಸಂತನ ವೃತ್ತಾಂತ ಮೌನದಿಂದ ಆರಂಭವಾಗಿ ಇಡೀ ಊರನ್ನು ಸೆಳೆದುಕೊಂಡು ಸಮಸ್ತರ ಹಿತಕ್ಕಾಗಿ ಮಾಡಿದ ರಸ್ತೆಗೆ ಬಲಿದಾನದವಾದ ಸಂತ ಸೃಷ್ಟಿಸಿದ ಧೀಮಂತ ಮಾತು ಕೊಲೆಗಡುಕ ಪರಶುರಾಮನ ದ್ವೇಷದ ನಡುವೆ ಜೀವಪರ ಆಶಯವಾಗಿ ಕೇಳಿಸುತ್ತದೆ.
ಹೀಗೆ ಬಹುತೇಕ ಕಥೆಗಳು ಅವನತಿಯ ನೆಲದಲ್ಲಿ ಜಿನುಗುವ ಜೀವಸೆಲೆಯ ಅಂತರ್ಜಲವನ್ನು ಶೋಧಿಸುತ್ತವೆ.
ಮಲ್ಲಿಕಾರ್ಜುನ ಶೆಲ್ಲಿಕೇರಿಯವರು ಅಭಿನಂದನೆಗೆ ಪಾತ್ರರು.
ಶ್ರೀಧರ ಬಳಗಾರ

Specification

Writer Information

Weight0.25 kg
AuthorsMallikarjuna Shellikeri

Customer Reviews

Reviews

There are no reviews yet.

Be the first to review “ದೀಡೆಕರೆ ಜಮೀನು | Deedekere Jameenu”

Your email address will not be published. Required fields are marked *