ಕಾಡು ಹುಡುಗನ ಹಾಡು ಪಾಡು | Kaadu Hudugana Haadu Paadu
ಕಾಡು ಹುಡುಗನ ಹಾಡು ಪಾಡು | Kaadu Hudugana Haadu Paadu Original price was: ₹150.00.Current price is: ₹135.00.
Back to products
ತೆರೆದಷ್ಟೂ ಅರಿವು | Teredashtu Arivu
ತೆರೆದಷ್ಟೂ ಅರಿವು | Teredashtu Arivu Original price was: ₹350.00.Current price is: ₹315.00.

ಬೇರು ಕಾಂಡ ಚಿಗುರು | Beru Kanda Chiguru

Publisher : Amulya Pustaka
ISBN : 978-81-990602-9-6
Publication Date : 2025
Edition : 2nd
No of Pages : 420

ಕೆವಿಎನ್ ಅವರ ‘ಬೇರು ಕಾಂಡ ಚಿಗುರು’ ಕೃತಿಯು ತನ್ನ ಕಾಲಘಟ್ಟದ ಸಾಹಿತ್ಯಕ್ಕಷ್ಟೇ ಸೀಮಿತವಾದದ್ದಲ್ಲ. ಇದರ ವ್ಯಾಪ್ತಿಯು ತುಂಬ ವಿಸ್ತಾರವಾದದ್ದು. ಈ ಕೃತಿಯು ತನ್ನ ಸಮಕಾಲೀನ ಸಾಹಿತ್ಯ ಕೃತಿಗಳ ಜೊತೆಯಲ್ಲಿ ಪ್ರಾಚೀನ, ಮಧ್ಯಕಾಲೀನ, ಆಧುನಿಕ ಸಾಹಿತ್ಯವನ್ನು ಸಾತತ್ಯದ ನೆಲೆಯಲ್ಲಿ ಚರ್ಚಿಸುತ್ತದೆ. ಇದು ಸಾಹಿತ್ಯ ವಿಮರ್ಶೆಯ ಸ್ವರೂಪ ಮತ್ತು ಕಾರ್ಯವಿಧಾನದ ದಿಕ್ಕನ್ನು ಬದಲಿಸಿತು.

Original price was: ₹500.00.Current price is: ₹450.00.

100 in stock

100 in stock

Description

ಸಾಹಿತ್ಯ ವಿಮರ್ಶೆ ಅನ್ನುವುದು ಮೂಲತಃ ಕೃತಿ ಕೇಂದ್ರಿತವಾದ ಒಂದು ಬೌದ್ಧಿಕ ಸಂವಾದ ಅನ್ನುವುದನ್ನು ಡಾ. ಕೆ.ವಿ. ನಾರಾಯಣ ಅವರ ಈ ಬರೆಹಗಳು ಸಮರ್ಥವಾಗಿ ಪ್ರತಿಪಾದಿಸುತ್ತವೆ. ಹೊರಗಿನಿಂದ ಎರವಲು ತಂದ ಮಾದರಿಗಳ ಸ್ಪಷ್ಟವಾದ ನಿರಾಕರಣೆ, ಮತ್ತು ಸಾಹಿತ್ಯದ ಚರ್ಚೆಗೆ ಅಗತ್ಯವಾದ ವೈಚಾರಿಕ ಪರಿಕರಗಳು ಕೃತಿಯ ಒಡಲೊಳಗೇ ಅಂತರ್ಗತವಾಗಿವೆ ಎಂಬ ತಿಳುವಳಿಕೆ ಹಾಗೂ ಈ ಬಗೆಯ ತಿಳುವಳಿಕೆಯಿಂದಲೇ ಸಾಹಿತ್ಯ ಕೃತಿಯೊಳಗೆ ವ್ಯಕ್ತವಾಗಿರುವ ಸಾಂಸ್ಕೃತಿಕ ಅನನ್ಯತೆಯನ್ನು ಗುರುತಿಸಲು ಸಾಧ್ಯ ಎಂಬ ಗ್ರಹಿಕೆ – ಈ ಮೂರೂ ಈ ಸಂವಾದದ ನೆಲೆಯಾಗಿವೆ. ‘ಈ ದೃಷ್ಟಿಯಿಂದಲೇ ಡಾ. ನಾರಾಯಣ ಅವರ ವಿಮರ್ಶಾ ಕ್ರಮವು ಸಮಕಾಲೀನ ಸಾಹಿತ್ಯ ವಿಮರ್ಶೆಯ ಸಂದರ್ಭದಲ್ಲಿ ವಿಭಿನ್ನವೂ, ವಿಶಿಷ್ಟವೂ, ಪ್ರಸ್ತುತವೂ ಆಗಿ ತೋರುತ್ತದೆ.
ಸಾಹಿತ್ಯ ಚರಿತ್ರೆ, ಭಾಷಾ ವಿಜ್ಞಾನ, ಕಾವ್ಯಮೀಮಾಂಸೆ, ಪರಂಪರೆಯ ಪ್ರಜ್ಞೆ ಇತ್ಯಾದಿಗಳಿಂದ ಪರಿಣತವಾದ ಮನಸ್ಸೆಂದು, ಸಾಹಿತ್ಯ ಕೃತಿಗಳನ್ನೂ, ಪ್ರಕಾರಗಳನ್ನೂ ಪರಿಕಲ್ಪನೆಗಳನ್ನೂ ಹಾಗೂ ಸಾಹಿತ್ಯಕ ವಾಗ್ವಾದಗಳನ್ನೂ ಕುರಿತು ಜಿಜ್ಞಾಸೆಗೆ ಒಳಗು ಪಡಿಸಿದ ಚಿಂತನಾ ಕ್ರಮವೊಂದನ್ನು ಇಲ್ಲಿ ಗುರುತಿಸಬಹುದು. ಅಭಿವ್ಯಕ್ತಿಯೊಳಗಣ ಖಚಿತತೆ, ಅಹಂ ನಿರಸನದ ವಿನಯ, ಸತ್ಯಪರವಾದ ದಿಟ್ಟತನ, ಸೂಕ್ಷ್ಮವೂ ಅತ್ಯಂತ ತರ್ಕಬದ್ಧವೂ ಆದ ವಿಶ್ಲೇಷಣೆ ಮತ್ತು ಚಕಿತಗೊಳಿಸುವ ಒಳನೋಟಗಳು- ಈ ಕೆಲವು ಲಕ್ಷಣಗಳಿಂದ ಡಾ. ನಾರಾಯಣ ಅವರ ಈ ಬರೆಹಗಳು ಕನ್ನಡ ಸಾಹಿತ್ಯ ವಿಮರ್ಶೆಯ ಪ್ರಬುದ್ಧತೆಗೆ ಸಾಕ್ಷಿಯಾಗಿವೆ.
– ಜಿ.ಎಸ್. ಶಿವರುದ್ರಪ್ಪ
(ಮೊದಲ ಮುದ್ರಣಕ್ಕೆ ಬರೆದ ಬೆನ್ನುಡಿ)

Specification

Writer Information

Weight0.40 kg
AuthorsK V Narayana

Customer Reviews

Reviews

There are no reviews yet.

Be the first to review “ಬೇರು ಕಾಂಡ ಚಿಗುರು | Beru Kanda Chiguru”

Your email address will not be published. Required fields are marked *