Back to products
ಮಾಸ್ತಿ ಜೀವನ ಚಿತ್ರಗಳು | Masti Jeevana Chitragalu
₹150.00 Original price was: ₹150.00.₹135.00Current price is: ₹135.00.
ತೇಜಸ್ವಿ ಕೆಲವು ಪ್ರಸಂಗಗಳು | Tejaswi Kelavu Prasangagalu
Publisher :
Amulya Pustaka
ISBN :
978-81-969505-4-5
Publication Date :
2024
Edition :
5th Edition
No of Pages :
104
ತೇಜಸ್ವಿಯವರ ಪುಸ್ತಕಗಳನ್ನು ಓದಲಾಗದವರು ಈ ಕೃತಿಯನ್ನು ಹಿಡಿದು ಕೂತರೆ, ಮುಗಿಯುವಷ್ಟರೊಳಗಾಗಿ ನೀವು ತೇಜಸ್ವಿ ಬಳಗವಾಗಿಬಿಡುತ್ತೀರಿ. ಅವರ ವಿಚಾರಗಳಿಗೆ ತಲೆಬಾಗುವಿರಿ. ಬದುಕಿನ ಶೈಲಿಗೆ ರೋಮಾಂಚಿತರಾಗುವಿರಿ. ತೇಜಸ್ವಿಯವರನ್ನು ಮತ್ತೆ ಮತ್ತೆ ಓದಲು ಹಾತೊರೆಯುತ್ತೀರಿ. ಈ ರೀಲ್ಸ್ ಸ್ಟಾರುಗಳು, ಚಿತ್ರಕರ್ಮಿಗಳು ಈ ತೇಜಸ್ವಿ ಪ್ರಸಂಗಗಳನ್ನು ಲೇಖಕ, ಪ್ರಕಾಶಕರ ಅನುಮತಿ ಪಡೆದು ಪುಟ್ಟ ಪುಟ್ಟ ರೀಲ್ಸ್ ರೂಪದಲ್ಲಿಯೋ ಅಥವಾ ಕಿರುಚಿತ್ರವಾಗಿಯೋ ಹೊರತಂದರೆ ಇವು ಲಕ್ಷಾಂತರ ಜನರನ್ನು ಪ್ರಭಾವಿಸಬಲ್ಲವು ಎಂಬುದು ನನ್ನ ನಂಬಿಕೆ.
₹150.00 Original price was: ₹150.00.₹135.00Current price is: ₹135.00.
98 in stock
98 in stock
Description
ತೇಜಸ್ವಿ ಅವರು ಒಮ್ಮೆ ನೇರ ಮುಖ್ಯಮಂತ್ರಿಗೇ ಫೋನ್ ಮಾಡಿ, ಇದೆಂಥಾ ದರಿದ್ರ ಆಡಳಿತ ನಡೆಸ್ತೀರಿ! ಮೂರು ದಿನದಿಂದ ಮೂಡಿಗೆರೆಯಲ್ಲಿ ಕರೆಂಟಿಲ್ಲ ಅಂತ ಏರುದನಿಯಲ್ಲಿ ಹೇಳಿ ಉತ್ತರಕ್ಕೂ ಕಾಯದೇ ಫೋನ್ ಕುಕ್ಕಿದರಂತೆ! ಪೂಚಂತೆ ಅವರ ಮಾತುಗಳನ್ನು ಅತ್ತಕಡೆ ತಾಳ್ಮೆಯಿಂದ ಕೇಳಿಸಿಕೊಂಡವರು ಅಂದಿನ ಮುಖ್ಯಮಂತ್ರಿ ಹೆಚ್.ಡಿ.ದೇವೇಗೌಡರು!
ಇಂತಹ ಅದೆಷ್ಟೂ ಪ್ರಸಂಗಗಳನ್ನು ಒಳಗೊಂಡ ಚಂದದ ಹೊತ್ತಿಗೆ “ತೇಜಸ್ವಿ ಪ್ರಸಂಗಗಳು”. ಕನ್ನಡದಲ್ಲಿ ಯಾವ ಸಾಹಿತಿಯ ಕೃತಿಗಳು ಈಗಲೂ ಅತಿ ಹೆಚ್ಚು ಮಾರಾಟವಾಗುತ್ತವೆ? ಎಂಬ ಪಟ್ಟಿ ಸಿದ್ದಪಡಿಸಿದರೆ ಬರುವ ಟಾಪ್ ಐದು ಹೆಸರುಗಳಲ್ಲಿ ಪೂಚಂತೆಯವರೂ ಒಬ್ಬರು. ಹಿರಿಯ ಸಾಹಿತಿ ಡಾ.ಎಚ್.ಎಸ್.ಸತ್ಯನಾರಾಯಣ ಅವರು ಬರೆದಿರುವ ಈ ಕೃತಿಯ ಮುನ್ನುಡಿಯಲ್ಲಿ ಲೇಖಕರಾದ ನರೇಂದ್ರ ರೈ ದೇರ್ಲ ಅವರು ಇದೇ ಮಾತನ್ನು ಹೇಳಿದ್ದಾರೆ. ಒಬ್ಬ ಪ್ರಕಾಶಕನಾಗಿ ನಾನು ಅವರ ಮಾತುಗಳನ್ನು ಒಪ್ಪುವೆ. ತೇಜಸ್ವಿಯವರು ಆ ಪರಿಯಾಗಿ ಯುವಸಮೂಹವನ್ನು ಹಿಡಿದಿಟ್ಟುಕೊಂಡಿರುವುದು ಹೇಗೆ? ಅವರು ಬದುಕಿದ್ದ ಕಾಲಕ್ಕೆ ಹಾಗಿದ್ದಿರಬಹುದಾದರೂ, ಈಗಿನ ಕಾಲದ ಯುವಕರಿಗೂ ಅವರೇ ಫೇವರೇಟ್ ಹೇಗೆ? ಎಂಬುದನ್ನು ಅರಿಯಬೇಕಾದರೆ ಈ ಪುಸ್ತಕವನ್ನು ಓದಿಬಿಡಿ. ತೇಜಸ್ವಿಯವರು ಅವರ ಸಾಹಿತ್ಯದಲ್ಲಿ ನಮಗೆಷ್ಟು ಸಿಗುತ್ತಾರೋ ಅದಕ್ಕಿಂತ ಚೂರು ಹೆಚ್ಚೇ ಇಲ್ಲಿ ಸಿಗುತ್ತಾರೆ. ಕೃತಿಯಲ್ಲಿ ಐವತ್ತೂ ಪ್ಲಸ್ ಪ್ರಸಂಗಗಳಿವೆ. ಅವುಗಳಲ್ಲಿ ಕೆಲವು ನಗೆಯುಕ್ಕಿಸುತ್ತವೆ, ಕೆಲವು ಚಿಂತನೆಗೆ ಹಚ್ಚುತ್ತವೆ. ಕೆಲವು ಶಿಸ್ತನ್ನು ಕಲಿಸುತ್ತವೆ. ಕೆಲವು ಹೇಗಿರಬೇಕು ಅಂತ ತಿಳಿಸುತ್ತವೆ. ಕೆಲವು ಹೇಗಿರಬಾರದು ಅನ್ನೋದನ್ನು ತಿಳಿಸುತ್ತವೆ.
ಭಾರತ ಸರ್ಕಾರ ರಾಷ್ಟ್ರಪ್ರಶಸ್ತಿ ಪಡೆಯಲು ಬನ್ನಿ ಅಂತ ವಿಮಾನದ ಟಿಕೇಟುಗಳನ್ನು ಕಳುಹಿಸಿದ್ದರೆ ಅವುಗಳನ್ನು ಉಂಡೆ ಮಾಡಿ ಎಸೆದ ತೇಜಸ್ವಿ ಅವರು ಅಲ್ಯಾವುದೋ ಒಂದು ಶಿಕ್ಷಣ ಸಂಸ್ಥೆ ಪುಟ್ಟದೊಂದು ಪ್ರಶಸ್ತಿ ಕೊಡ್ತೀವಿ ಅಂದ್ರೆ ಅವರ ಪ್ರಾಮಾಣಿಕತೆ ಬಗ್ಗೆ ತಿಳಿದು, ಪ್ರಶಸ್ತಿ ಸ್ವೀಕರಿಸಿ ಬಂದರಂತೆ! ನಮ್ಮ ಮಕ್ಕಳಿಗೆ ಹೆಸರಿಡಿ ಅಂತ ಊರಿನವರು ಬಂದ್ರೆ ‘ ಹುಟ್ಸೋಕಾಗುತ್ತೆ, ಹೆಸರಿಡೋಕಾಗಲ್ವಾ ಅಂತ ಗದರಿ ನಂತ್ರ ಹೆಸರು ಹುಡುಕಿ ಕೊಟ್ಟಿದ್ದು. ಮೀನು ಹಿಡಿಯುವುದು ತಿನ್ನುವುದಕ್ಕಲ್ಲ ಅದೊಂದು ಧ್ಯಾನ ಅಂತ ಹೇಳುತ್ತಿದ್ದದ್ದು. ಪ್ರಶ್ನೆ ಪತ್ರಿಕೆಯನ್ನು ಮೆಟ್ಟಿಲ ಮೇಲೆಯೇ ಹರಿದೆಸೆದು ಪ್ರಿನ್ಸಿಪಾಲಿಗೆ ತಲೆ ಇಲ್ಲ ಅಂತ ಬೈಕೊಂಡು ಬರ್ತಿದ್ದದ್ದು. ಲೋಹಿಯ ವಿಚಾರಧಾರೆಯವರಾದ ನೀವು ಕ್ರಾಪ್ ಮಾಡಿಸೋಕೆ ಬೆಂಗಳೂರಿಗೆ ಹೋಗ್ತೀರಂತೆ ಹೌದೇ? ಅಂತ ಅನಂತಮೂರ್ತಿಯವರನ್ನು ಪ್ರಶ್ನಿಸಿದ್ದು! ಹೀಗೆ ಅನೇಕ ಆಸಕ್ತಿಕರ ಸಂಗತಿಗಳನ್ನು ಈ ಪುಸ್ತಕದಲ್ಲಿ ಸಂಗ್ರಹಿಸಿ ನೀಡಲಾಗಿದೆ. ಡಾ.ಹೆಚ್. ಡಾ.ಎಸ್. ಸತ್ಯನಾರಾಯಣ ಅವರು ಈ ಪ್ರಸಂಗಗಳನ್ನು ಅತ್ಯಂತ ಸಹಜವಾಗಿ ನಿರೂಪಿಸಿರುವ ಕಾರಣ ಪ್ರತಿ ಪ್ರಸಂಗವೂ ನಮ್ಮೊಳಗಿಳಿದು ಎಂದೂ ಮರೆಯದಂತೆ ದಾಖಲಾಗಿಬಿಡುತ್ತದೆ.
ಇಂತಹ ಪುಸ್ತಕಗಳ ಪ್ರಕಟಣೆಯ ಹಿಂದೆ ಕೇವಲ ಹಿರಿಯ ಸಾಹಿತಿಯ ಅನುಭವಗಳನ್ನು, ವಿಚಾರಗಳನ್ನು ದಾಖಲಿಸುವುದ ಮಾತ್ರವಲ್ಲ; ಆ ಮೂಲಕ ಅವರ ಮಹತ್ವವನ್ನು ಈ ತಲೆಮಾರಿಗೆ ಅರ್ಥೈಸುವ, ಅವರಲ್ಲಿ ಆಸಕ್ತಿ ಹುಟ್ಟುವಂತೆ ಮಾಡುವ ಉದ್ದೇಶವೂ ಅಡಗಿರುತ್ತದೆ. ಅದು ಇಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಆಗಿದೆ. ಅದಕ್ಕಾಗಿ ಲೇಖಕರೂ ಮತ್ತು ಪ್ರಕಾಶಕರಾದ ಕೃಷ್ಣ ಚಂಗಡಿ ಅವರನ್ನು ಮನಸಾರೆ ಅಭಿನಂದಿಸುವೆ. ತೇಜಸ್ವಿಯವರ ಪುಸ್ತಕಗಳನ್ನು ಓದಲಾಗದವರು ಈ ಕೃತಿಯನ್ನು ಹಿಡಿದು ಕೂತರೆ, ಮುಗಿಯುವಷ್ಟರೊಳಗಾಗಿ ನೀವು ತೇಜಸ್ವಿ ಬಳಗವಾಗಿಬಿಡುತ್ತೀರಿ. ಅವರ ವಿಚಾರಗಳಿಗೆ ತಲೆಬಾಗುವಿರಿ. ಬದುಕಿನ ಶೈಲಿಗೆ ರೋಮಾಂಚಿತರಾಗುವಿರಿ. ತೇಜಸ್ವಿಯವರನ್ನು ಮತ್ತೆ ಮತ್ತೆ ಓದಲು ಹಾತೊರೆಯುತ್ತೀರಿ. ಈ ರೀಲ್ಸ್ ಸ್ಟಾರುಗಳು, ಚಿತ್ರಕರ್ಮಿಗಳು ಈ ತೇಜಸ್ವಿ ಪ್ರಸಂಗಗಳನ್ನು ಲೇಖಕ, ಪ್ರಕಾಶಕರ ಅನುಮತಿ ಪಡೆದು ಪುಟ್ಟ ಪುಟ್ಟ ರೀಲ್ಸ್ ರೂಪದಲ್ಲಿಯೋ ಅಥವಾ ಕಿರುಚಿತ್ರವಾಗಿಯೋ ಹೊರತಂದರೆ ಇವು ಲಕ್ಷಾಂತರ ಜನರನ್ನು ಪ್ರಭಾವಿಸಬಲ್ಲವು ಎಂಬುದು ನನ್ನ ನಂಬಿಕೆ.
ಕೊನೆಮಾತು: ಫೋನ್ ಮಾಡಿ ಮುಖ್ಯಮಂತ್ರಿಯನ್ನೇ ಗದರುವ ಸಾಹಿತಿಯೊಬ್ಬರ ನೈತಿಕತೆ, ಸಾಹಿತಿ ಗದರಿದರೂ ತಾಳ್ಮೆಗೆಡದ ಮುಖ್ಯಮಂತ್ರಿಯೊಬ್ಬರ ಸೌಜನ್ಯ ಈ ಕಾಲದ ಅತ್ಯಂತ ದುಬಾರಿ ನಿರೀಕ್ಷೆಯಾದೀತು ಅಲ್ಲವೇ…!
ಓದುವ ಸುಖ ನಿಮ್ಮದಾಗಲಿ.
ನಿಮ್ಮ
ವೀರಕಪುತ್ರ ಶ್ರೀನಿವಾಸ
See less
Customer Reviews
Be the first to review “ತೇಜಸ್ವಿ ಕೆಲವು ಪ್ರಸಂಗಗಳು | Tejaswi Kelavu Prasangagalu” Cancel reply




















Political | ರಾಜಕೀಯ










Reviews
There are no reviews yet.