ಹವೇಲಿ ದೊರೆಸಾನಿ | Haveli Doresani
ಹವೇಲಿ ದೊರೆಸಾನಿ | Haveli Doresani Original price was: ₹175.00.Current price is: ₹165.00.
Back to products
ದೀಡೆಕರೆ ಜಮೀನು | Deedekere Jameenu
ದೀಡೆಕರೆ ಜಮೀನು | Deedekere Jameenu Original price was: ₹225.00.Current price is: ₹200.00.

ಮಾರ ಮಿಂದನು | Maara Mindanu

Publisher : Amulya Pustaka
ISBN : 978-81-982263-2-7
Publication Date : 2024
Edition : 1st
No of Pages : 160

ಈ ಕೃತಿಯಲ್ಲಿ ಪರಿಸರ ಪ್ರಜ್ಞೆ, ಅಸ್ತಿತ್ವದ ಹುಡುಕಾಟ ಮತ್ತು ಬದಲಾಗುತ್ತಿರುವ ಗ್ರಾಮೀಣ ಬದುಕಿನ ಬಿಕ್ಕಟ್ಟುಗಳು ಪ್ರಮುಖ ಆಶಯಗಳಾಗಿ ಮೂಡಿಬಂದಿವೆ. ವಿಶೇಷವಾಗಿ ‘ಮಾರ ಮಿಂದನು’ ಕಥೆಯಲ್ಲಿ ಪರಿಸರ ಮಾಲಿನ್ಯದ ವಿರುದ್ಧ ಒಬ್ಬ ಸಾಮಾನ್ಯ ಮನುಷ್ಯ ಕೈಗೊಳ್ಳುವ ಮೌನ ಪ್ರತಿಭಟನೆ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.

Original price was: ₹200.00.Current price is: ₹180.00.

100 in stock

100 in stock

Description

ಕಥನಗಾರಿಕೆಯನ್ನು ಚಿಕಣಿ ಕಲೆಯಂತೆ ಬಲು ಶೃದ್ಧೆಯಿಂದ ನಿರ್ವಹಿಸುವ ಸೂಕ್ಷ್ಮ ಕಥೆಗಾರರು ಶ್ರೀಧರ ಬಳಗಾರ. ಹೊರ ಆವರಣದಲ್ಲಿ ಸರಳವಾಗಿ ಕಂಡರೂ ಒಳಪದರದಲ್ಲಿ ಸಂಕೀರ್ಣ ಕುಸುರಿಯ ವಿನ್ಯಾಸ ಅವರದ್ದು. ‘ಮಾರಮಿಂದನು’ ಸಂಕಲನದ ಎಂಟೂ ಕಥೆಗಳು ಶ್ರೀಧರ ಬಳಗಾರರ ಕಥನಗಾರಿಕೆಯ ದಟ್ಟತೆಯನ್ನು ಎದುರಿಡುತ್ತವೆ. ಸುಮಾರು ಮೂರು ದಶಕಗಳಿಂದ ಕಥನಗಾರಿಕೆಯನ್ನೇ ತಮ್ಮ ಅಭಿವ್ಯಕ್ತಿಯ ಆದ್ಯತೆಯಾಗಿಸಿಕೊಂಡಿದ್ದಾರೆ. ಶ್ರೀಧರ ಬಳಗಾರರ ಕಥೆಗಳ ಮುಖ್ಯ ಗುಣ, ಅವುಗಳ ಪದರೂಪೀ ಸಂರಚನೆ. ಒಂದರೊಳಗೊAದು ಹೊಕ್ಕಿ ಹೊರಚಾಚುವ ಕೌಶಲ್ಯ ಕಥೆಯ ಓಘಕ್ಕೆ ಸಂಬAಧಿಸಿದ ಸಂಗತಿ ಮಾತ್ರವಲ್ಲ, ಮನುಷ್ಯರ ಅಂತರAಗ ವಿಶ್ಲೇಷಣೆಯಲ್ಲಿಯೂ ಇಂತಹ ವ್ಯವಧಾನವೇ ಇದೆ. ಬದುಕಿನಲ್ಲಿ ಕೆಡುಕು ಆಕ್ರಮಿಸಿಕೊಳ್ಳುತ್ತದೆಯಾದರೆ ಅದಕ್ಕೆ ಯಾರು ಜವಾಬ್ದಾರರು? ಎಂಬ ಪ್ರಶ್ನೆ ವ್ಯಕ್ತಿಗತ ಬದುಕಿಗೆ ಮಾತ್ರವಲ್ಲ ಸಮಾಜದ ಬದುಕಿಗೂ ಅನ್ವಯವಾಗುತ್ತದೆ. ಹಾಗಾದರೆ, ಕೆಡುಕನ್ನು ಸ್ವ ನಿಯಂತ್ರಿಸಿಕೊಳ್ಳಬೇಕಾದ ಮತ್ತು ತಡೆಯಬೇಕಾದ ದಾರಿಗಳು ಎಲ್ಲಿವೆ ಎನ್ನುವ ಹುಡುಕಾಟವನ್ನು ಕಥೆಗಳ ಮೂಲಕ ನಿರ್ವಹಿಸಿಕೊಂಡು ಬಂದವರು ಶ್ರೀಧರ ಬಳಗಾರರು. ಮನುಷ್ಯ ಸ್ವಭಾವಗಳನ್ನು ಒಂದು ಪಡಿಯಚ್ಚಿನಲ್ಲಿ ಹಾಕಿ ತೆಗೆಯಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕಾಗಿಯೇ ಅವು ನಿರಂತರ ವಿವರಣೆಯನ್ನು ಬಯಸುತ್ತವೆ. ಒಂದೇ ಕಾಲ- ಸಂದರ್ಭಗಳಲ್ಲಿ ಮನುಷ್ಯರ ಚಿತ್ತವೃತ್ತಿಗಳು ವರ್ತಿಸುವ ವಿಭಿನ್ನತೆಯ ಬೆರಗು ಇಲ್ಲಿಯ ಕಥೆಗಳಲ್ಲಿದೆ. ಮನುಷ್ಯರ ಒಳಗೆ ಕೆಲವೊಮ್ಮೆ ಅವರಿಗೂ ಅರಿವಿಲ್ಲದಂತೆ ಧುತ್ತನೆ ಅವತರಿಸಿಬಿಡುವ ಕ್ರೌರ್ಯ ಕಂಗೆಡಿಸುತ್ತದೆ. ಹೊರ ತೋರಿಕೆಗೆ ತಣ್ಣಗೆ ಕಾಣುವ ವ್ಯಕ್ತಿತ್ವದ ಆಳದಲ್ಲಿ ಪರಪೀಡನೆಯ ಹುಕಿಯೊಂದು ಹೆಣೆದುಕೊಂಡಿರುವ ಬಗೆಯನ್ನು ನಾಟಕೀಯವಾಗಿಯೂ ಸಹಜವಾಗಿಯೂ ಎದುರಿಡುವ ವಿಶಿಷ್ಟತೆ ಶ್ರೀಧರ ಬಳಗಾರ ಅವರಿಗೆ ಸಿದ್ಧಿಸಿದೆ. “ಯುಗಾದಿ ಪುರುµ’À ಕಥೆಯ ಕಲ್ಲಜ್ಜ ಇಂತಹ ಪಾತ್ರ. ವಿಧವೆ ಮಗಳು ಮನೆಗೆ ಆಶ್ರಯಕ್ಕೆ ಬಂದರೆ, ತೀರಿಹೋದ ಹೆಂಡತಿಯ ಜಾಗದಲ್ಲಿ ನಿಂತು ಬೇಯಿಸಿಹಾಕಲು ಒಳ್ಳೆಯದಾಯ್ತು ಎಂದೂ, ವಿಧವೆ ಮಗಳಿಗೆ ಆಶ್ರಯ ಕೊಟ್ಟವನು ಎಂಬ ವರ್ಚಸ್ಸು ಬೆಳೆಯುತ್ತದೆ ಎಂದೂ ಯೋಚಿಸಬಲ್ಲವನು ಕಲ್ಲಜ್ಜ. ಇದು ಸರಿಯೇ ಎಂದು ಆತ್ಮಾವಲೋಕನದ ಗೊಡವೆಯೂ ಬೇಡದವನು. ಹಾಗೆಯೇ “ಅಕಾಲ’ ಕಥೆಯಲ್ಲಿ ಪಾದಣ್ಣನಿಗೆ ತನ್ನ ಯೌವನದ ಬಗ್ಗೆ ಬಹಳ ಉಮೇದಿಯೇನೂ ಇಲ್ಲವೆನಿಸಿದರೂ ಶಾಪಗ್ರಸ್ಥ ಅಕಾಲ ವೃದ್ಧನಂತಾಗಿರುವ ಮಗನ ಬಗ್ಗೆ ಮಿಡಿವ ಕರುಳ ಕುದಿತಕ್ಕೆ ಒಂದು ಮಿತಿಯಿದೆ ಅನ್ನಿಸುತ್ತದೆ. “ಮುದುಕನಿಗೆ ಮಗು ಅಂದಾಗ ಬೇಸರ ಆಗ್ಬೇಕು. ನಿಮಗೆ ಅವಮಾನ ಆಗ್ಬೇಕು. ನನಗಲ್ಲ’ ಎಂದು ವನಜಕ್ಕ ವ್ಯಂಗ್ಯವಾಗಿ ಹೇಳುತ್ತಾಳಾದರೂ, ಪಾದಣ್ಣ ಅದನ್ನು ಆ ಮಟ್ಟದಲ್ಲಿ ಸ್ವೀಕರಿಸುವುದಿಲ್ಲ. ಮನುಷ್ಯ ಬಾಳಿನಲ್ಲಿ ಅಕಾರಣವಾಗಿ ಸಂಭವಿಸಿಬಿಡುವ ದೂರದ ಬಗ್ಗೆ ವಿಷಣ್ಣ ಭಾವವನ್ನು ಕಥೆ ಆವರಿಸುತ್ತದೆ. ಸಾಂಪ್ರದಾಯಿಕತೆ ಆಧುನಿಕತೆ ಎನ್ನುವುದನ್ನು ಕಾಲಕ್ರಮದ ರೀತಿಯಲ್ಲಿ ಪರಿಭಾವಿಸುತ್ತೇವೆ. ಆದರವು ಸರಳರೇಖೆಯಂತಹ ವಾಸ್ತವಗಳಲ್ಲ. ಗಂಡು-ಹೆಣ್ಣಿನ ಸಂಬAಧದ ಪರಿಪ್ರೇಕ್ಷö್ಯದಲ್ಲಿ ವ್ಯಕ್ತಿಗಳ ನಿಜವು ಹೊರಹೊಮ್ಮುತ್ತದೆ. ಮನುಷ್ಯ ಸಂಬAಧಗಳಲ್ಲಿ ಯಾವುದನ್ನು ಅತ್ಯಾಧುನಿಕ ಮನಸ್ಥಿತಿ ಎನ್ನುತ್ತೇವೆಯೋ ಅದು ತೀರಾ ಸಹಜವಾದ ಬದುಕಿನ ವಿನ್ಯಾಸದಲ್ಲಿ ಇರುವುದನ್ನು ‘ರಂಭಾ ವಿವಾಹ’ದ ಕಥೆ ಒಳಗೊಂಡಿದೆ. ಈ ಕಥೆಯ ಪರಮಯ್ಯ, ತನ್ನ ಹೆಂಡತಿ ದಮಯಂತಿಯ ಇನ್ನೊಂದು ಸಂಬAಧವನ್ನು ಒಪ್ಪಿಕೊಳ್ಳುವ ಮತ್ತು ನಿಭಾಯಿಸುವ ಬಗೆ ಬೆರಗಿನದ್ದು. ಸಿನೆಮಾ ನಾಟಕಗಳಲ್ಲಿ ಪಾತ್ರಮಾಡುತ್ತಿದ್ದ ಕಲಾವಿದ ಪರಮಯ್ಯ, ಹೀಗೆ ತನ್ನ ಹೆಂಡತಿಯ ಮನಸ್ಥಿತಿಯನ್ನೂ ಸಮಾಧಾನದಿಂದ ಓದಿಕೊಂಡನೇ ? ಬದುಕಿನ ಸಾಮಾನ್ಯ ರಂಗಭೂಮಿಯಲ್ಲಿಯೇ ಹೀಗೆ, ನೀರು ಅಂಟದ ಕಮಲದ ಎಲೆಯಂತೆ ಬಾಳುವ ಕಲೆ ಸಾಧಿತವಾಗಬಲ್ಲುದೇ? ಗಂಡಾಳಿಕೆಯ ಹೊರೆಯನ್ನು ಇಳುಹಿಕೊಂಡರೆ, ಲೋಕಸತ್ಯಗಳು ಕಾಣುವ ಬಗೆಯೊಂದು ಇಲ್ಲಿ ತೆರೆದುಕೊಂಡAತಿದೆ. ದಮಯಂತಿಯ ನೆಲೆಯಿಂದ ನೋಡಿದರೆ, ಗಂಡು-ಹೆಣ್ಣಿನ ಸಂಬAಧದ ಸತ್ಯಾಸತ್ಯತೆಯನ್ನು ಅಳೆಯುವ ಮಾನದಂಡವೇ ಇದುವರೆಗೂ ರೂಪಗೊಂಡಿಲ್ಲ ಅಥವಾ ಇದುವರೆಗಿನ ರೂಪಣೆಗಳು ಪೂರ್ವಗೃಹೀತಗಳು ಎಂಬ ಸ್ಥಿತಿಯನ್ನು ಕಾಣಿಸುತ್ತದೆ. ಹಳೆಗಾಲದ ಜೀವನಕ್ರಮವನ್ನು ಉಂಡವರಿಗೆ ಆಧುನಿಕತೆ ಮತ್ತು ಅತ್ಯಾಧುನಿಕತೆ ಎನ್ನುವ ಬಾಳುಗಾರಿಕೆಯು ಅರಗಿಸಿಕೊಳ್ಳಲಾಗದ ಬಿಕ್ಕಟ್ಟಾಗಿದೆ. ನೆನಪನ್ನೇ ಕಳೆದುಕೊಳ್ಳುವ ಜನಾರ್ಧನನ ಪಾತ್ರ ಇಂತಹ ಬಿಕ್ಕಟ್ಟಿನ ರೂಪಕದಂತೆ ಮೂಡಿದೆ. ಮನುಷ್ಯ ಬದುಕಿನ ಸರಿ-ಬೆಸಗಳನ್ನು ತೂಗಿ ಬೆಲೆ ಕಟ್ಟಲು ಸಾಧ್ಯವಿಲ್ಲ ಎನ್ನುವ ತಾತ್ವಿಕತೆ ಬಹುತೇಕ ಕಥೆಗಳ ಅಂತಃಸತ್ವ. ಹೆಮ್ಮಾಡಿಯ ಹೆಂಗಸರು, ಹೋಮ್ ಸ್ಟೇದಂಥಹ ಕಥೆಗಳು ಬದುಕಿನ ಚಲನಶೀಲತೆಯನ್ನು ವಾಸ್ತವ ನೆಲೆಯಲ್ಲಿ ಸೃಷ್ಟಿಸುತ್ತವೆ. ನಾಗರಿಕ, ಅತಿನಾಗರಿಕತೆಗಳ ತೀವೃ ರಭಸಕ್ಕೆ ಸಿಕ್ಕ ಬದುಕಿನಲ್ಲಿ, ನಮ್ಮ ಬಾಲ್ಯ-ಭಾವನೆಗಳು ಸಿಗ್ಗು ಸಿಗ್ಗಾಗಿಬಿಟ್ಟಿವೆಯೇ? ಎಲ್ಲ ಸರಿ – ಎನ್ನುವ ಬಾಳಿನಲ್ಲೂ ಉಳಿದೇ ಇರುವ ಅತೃಪ್ತ ಸ್ಥಿತಿಯನ್ನು ಏನನ್ನುವದು? ಕಳಚಿಕೊಳ್ಳುವ ಮತ್ತು ಬೆಸೆದುಕೊಳ್ಳುವ ಸತತ ಪ್ರಕ್ರಿಯೆಯೊಂದು ಮನುಷ್ಯರ ಒಳಗೇ ಸಂಭವಿಸುವುದಕ್ಕೆ ಹೋಂ ಸ್ಟೇ ಕಥೆಯ ದಾಕಪ್ಪನ ಪಾತ್ರ ನಿದರ್ಶನ.
ಶ್ರೀಧರ ಬಳಗಾರರ ಕಥೆಗಳು, ಅಧಿಕಾರಶಾಹಿಯ ತಪ್ಪು ಅಭಿವೃದ್ಧಿಯ ಮಾನದಂಡಗಳನ್ನು ಮುಲಾಜಿಲ್ಲದೆ ಬೆತ್ತಲುಗೊಳಿಸಿದೆ. “ಮಾರ ಮಿಂದನು’ ಈ ಕಾರಣಕ್ಕಾಗಿ ಕನ್ನಡದ ಮಹತ್ವದ ಕಥೆ. ಇಲ್ಲಿಯ ಮಾರ, ಸಮಾಜದ ಕಟ್ಟಕಡೆಯ ಮನುಷ್ಯನ ಪ್ರತಿನಿಧಿ. ಅವನಿಗೆ ಅನ್ಯಾಯವನ್ನು ಪ್ರಶ್ನಿಸುವ ಹಕ್ಕಿದೆ. ಆದರೆ ಅವನ ಹಕ್ಕನ್ನು ವ್ಯವಸ್ಥೆಯ ಮೇಲ್ತುದಿಯಲ್ಲಿದ್ದವರು ಒಪ್ಪಿಕೊಳ್ಳುವುದಿಲ್ಲ. ಸಾಫಸೀದಾ ಕಣ್ಣೆದುರು ನಡೆಯುತ್ತಿರುವುದನ್ನು ವಿರೋಧಿಸಲೇಬೇಕೆಂಬ ಮಾರನ ಮನಸ್ಸಾಕ್ಷಿ ಕಥೆಯ ಕೇಂದ್ರವಷ್ಟೇ ಅಲ್ಲ, ಮಾನವೀಯತೆಯ ಕುರಿತ ವಿಶ್ವಾಸದ ತಳಹದಿಯೂ ಆಗಿ ಹೊಮ್ಮುತ್ತದೆ, ಅವನ ಧ್ವನಿಯನ್ನು ಅಡಗಿಸುವುದು ವ್ಯವಸ್ಥೆಗೆ ದೊಡ್ಡದಲ್ಲ. ಮಾರನ ನಿರಂತರ ಪ್ರಯತ್ನದಿಂದಾಗಿ ಅಧಿಕಾರಶಾಹಿ ಅವನನ್ನು ಗೌರವಿಸುತ್ತದೆ. ಆದರೆ, ಮನುಷ್ಯರ ಸ್ವಯಂಕೃತ ಅಪರಾಧಗಳು ಯಾವ ಸೀಮಾಂತರವನ್ನು ತಲುಪಿವೆ ಎಂದರೆ, ಕೊನೆಗೊಂದು ದಿನ ಪಶ್ಚಾತ್ತಾಪದಿಂದ ಎಚ್ಚರಾದರೂ ಸರಿಪಡಿಸಲು ಏನೂ ಉಳಿದಿರುವುದಿಲ್ಲ- ಈ ದುರಂತದ ಎಚ್ಚರವನ್ನು ಕಥೆ ನಿರೂಪಿಸುತ್ತದೆ.
ಇಲ್ಲಿಯ ಕಥೆಗಳಲ್ಲಿ ಪರಿಸರ ಕಥೆಯ ಪಾತ್ರವೇ ಆಗಿದೆ. ಅದೊಂದು ಭಿತ್ತಿಯಾಗಿಯೋ ಚಿತ್ರಣವಾಗಿಯೋ ಬರುವುದಿಲ್ಲ. ಅದು ಬಾಳಿನ ಅಭಿನ್ನ ಸಾಧ್ಯತೆಯಾಗಿದೆ. ಯುಗಾದಿ ಪುರುಷ ಕಥೆಯ ಗದ್ದೆಮನೆ ಕಾಡು ಇಂತಹ ಒಂದು ಉದಾಹರಣೆ. “ಕಾಡು ಗೋವಿನಂತಹ ಹೆಣ್ಣು ಕಾಡುದಾಟಿ ಗದ್ದೆಮನೆ ಪ್ರವೇಶಕ್ಕೂ ಮೊದಲು ಕಾಡು ಹಾದರೆ ರಾಕ್ಷಸಿಯಂತಾಗುತ್ತಿದ್ದಳು. ಅಥವಾ ಕರುಣಾಮಯಿ ದೇವತೆಯಂತಾಗುತ್ತಿದ್ದಳು.” ಹೆಣ್ಣಿನ ಭಾವಲೋಕವನ್ನು ಒತ್ತಡಕ್ಕೆ ದೂಡಿ ಹಲವು ಅವಸ್ಥಾಂತರಗಳಲ್ಲಿ ಹಾಯಿಸುವ ವಾಸ್ತವವವನ್ನು ಕಾಡು ಪ್ರತಿಪಾದಿಸುತ್ತದೆ. ಕಾಡಿನ ನಡುವೆ ಮಳೆ ಹುಯ್ಯತೊಡಗಿ, ಆ ಕತ್ತಲ ಕಾಡದಾರಿಯ ರುದ್ರ ಭೀಕರತೆಗೆ, ಸದಾ ಆ ದಾರಿಯಲ್ಲೇ ಓಡಾಡುವ ವೆಂಕಟ್ರಮಣ ಹತಾಶನಾಗಿದ್ದ. ಆದರೆ “ಭೋರ್ಗರೆಯುತ್ತಿರುವ ಕಾಡನ್ನು ಮೈತುಂಬಿಕೊAಡ ರಾಜಿ ಮಾತ್ರ ಎಳ್ಳಷ್ಟೂ ಎದೆಗುಂದಿರಲಿಲ್ಲ!” ಪ್ರಕೃತಿಯೊಂದಿಗಿನ ಈ ತಾದಾತ್ಮö್ಯವನ್ನು ಪರಿಸರದ ಒಡಲಲ್ಲಿಯೇ ಬಾಳನ್ನು ರೂಪಿಸಿಕೊಂಡ ಮಾತ್ರಕ್ಕೆ ಕತೆಗಾರರು ಪಡೆದುಬಿಡುತ್ತಾರೆ ಎಂದು ಸರಳೀಕರಿಸಲು ಆಗುವುದಿಲ್ಲ. ಕನ್ನಡ ಕಥನಗಾರಿಕೆಯ ಹಿರಿಮೆಯನ್ನು ಹೆಚ್ಚಿಸಿದೆ. ಉತ್ತರ ಕನ್ನಡದ ಕಥೆÀಗಾರರ ಕಥೆಗಳಿಗೂ ಶ್ರೀಧರ ಬಳಗಾರರ ಕಥೆಗಳಿಗೂ ಇರುವ ಮುಖ್ಯ ವ್ಯತ್ಯಾಸವಿದು. ಬಳಗಾರರಿಗೆ ಪರಿಸರದ ತಾಕತ್ತಿನ ಕುರಿತು ಅಪಾರವಾದ ವಿಶ್ವಾಸ ಇಲ್ಲಿಯ ಕಥೆಗಳ ತೂಕವಾಗಿದೆ. ಇದು ಹೆಚ್ಚುಗಾರಿಕೆಯ ಅಂಕಪಟ್ಟಿಯಲ್ಲ. ವಿಶಿಷ್ಟತೆಯ ಗುರುತು. ಆಧುನಿಕತೆಯನ್ನು ಸ್ವಾಯತ್ತವಾಗಿಸಿಕೊಳ್ಳಲು ಸತತ ಹೆಣಗುವ ಮನುಷ್ಯರ ಜಗತ್ತು ಮತ್ತು ತನ್ನ ಸ್ವಯಂಭೂತನವನ್ನು ರಕ್ಷಿಸಿಕೊಳ್ಳುವ ಪರಿಸರಗಳ ದಟ್ಟ ಚಿತ್ರಣದಲ್ಲಿ ಮಾರ ಮಿಂದನು ಸಂಕಲನದ ಕಥೆಗಳು ಓದುಗರನ್ನು ಆವರಿಸಿಕೊಳ್ಳುತ್ತವೆ. ನಮ್ಮದೇ ವರ್ತಮಾನವನ್ನು ನಾವು ಮರಳಿ ಮುಖಾಮುಖೀಯಾಗುವ ಅಗತ್ಯವನ್ನು ಧ್ವನಿಸುತ್ತದೆ.
-ಡಾ. ವಿನಯಾ ಒಕ್ಕುಂದ

Specification

Writer Information

Weight0.25 kg
AuthorsSridhar Balagara

Customer Reviews

Reviews

There are no reviews yet.

Be the first to review “ಮಾರ ಮಿಂದನು | Maara Mindanu”

Your email address will not be published. Required fields are marked *